HomeKarnatakaಕಾಂಗ್ರೆಸ್‌ ಆಡಳಿತದಲ್ಲಿ ನಗರದ ರಸ್ತೆಗಳ ತುಂಬೆಲ್ಲಾ ಗುಂಡಿಗಳದ್ದೇ ಕಾರುಬಾರು: ಬಿಜೆಪಿ ಕಿಡಿ

ಕಾಂಗ್ರೆಸ್‌ ಆಡಳಿತದಲ್ಲಿ ನಗರದ ರಸ್ತೆಗಳ ತುಂಬೆಲ್ಲಾ ಗುಂಡಿಗಳದ್ದೇ ಕಾರುಬಾರು: ಬಿಜೆಪಿ ಕಿಡಿ

ಬೆಂಗಳೂರು: ಕಾಂಗ್ರೆಸ್‌ ಆಡಳಿತದಲ್ಲಿ ನಗರದ ರಸ್ತೆಗಳ ತುಂಬೆಲ್ಲಾ ಗುಂಡಿಗಳದ್ದೇ ಹಾವಳಿ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ರಸ್ತೆ ಮಧ್ಯೆ ಗುಂಡಿಗಳಿವೆಯೋ, ಗುಂಡಿಗಳ ಮಧ್ಯೆ ರಸ್ತೆ ಇದೆಯೋ ಕಾಂಗ್ರೆಸ್ಸಿಗರೇ ಹೇಳಬೇಕು. ದಿನನಿತ್ಯ ಸಂಚರಿಸುವ ಬೈಕ್‌ ಸವಾರರು ಜೀವ ಕೈನಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬ್ರಾಂಡ್‌ ಬೆಂಗಳೂರು ಮಾಡುತ್ತೇವೆಂದು ಊರು ತುಂಬಾ ಬೊಗಳೆ ಭಾಷಣ ಬಿಟ್ಟಿದ್ದೇ ಬಂತು ಒಂದೇ ಒಂದು ಅಭಿವೃದ್ಧಿ ಕಾಮಗಾರಿಯಾಗಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಯೋಗ್ಯತೆಯಿಲ್ಲದ ಸರ್ಕಾರವು ಜನರ ಸುರಕ್ಷತೆ, ಸುಲಲಿತ ಜೀವನಕ್ಕೆ ಹೇಗೆ ಬೆಂಬಲವಾಗಿ ನಿಲ್ಲಬಲ್ಲದು? ಎಂದು ಪ್ರಶ್ನಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular