ಬೆಂಗಳೂರು: ಬೇಸಿಗೆಯ ಬಿಸಿಲಿಗೆ ಕಂಗೆಟ್ಟಿದ್ದ ಕನ್ನಡಿಗರಿಗೆ ವರುಣದೇವ ತಂಪೆರೆದಿದ್ದಾನೆ. ಯುಗಾದಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ರಾಜ್ಯದ ಹಲವೆಡೆ ಆಲಿಕಲ್ಲು ಮಳೆ ಆರಂಭವಾಗಿದ್ದು, ಮುಂದಿನ ಎರಡು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬೆಂಗಳೂರು ಸೇರಿದಂತೆ ಕರ್ನಾಟಕದ ಒಟ್ಟು 17 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರೇಬಿಯನ್ ಸಮುದ್ರ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ಕಂಡುಬಂದಿರುವ ಚಂಡಮಾರುತದ ಸುಳಿಗಾಳಿಯು ಪಶ್ಚಿಮ ಘಟ್ಟಗಳ ಮೇಲೆ ಪ್ರಭಾವ ಬೀರಿದೆ.ಗಾಳಿಯ ವೇಗ ಮತ್ತು ವಾತಾವರಣದ ಒತ್ತಡದಿಂದಾಗಿ ಮಲೆನಾಡು ಹಾಗೂ ಬಯಲು ಸೀಮೆಯ ಹಲವೆಡೆ ಆಲಿಕಲ್ಲು ಸಮೇತ ಮಳೆಯಾಗುತ್ತಿದೆ.ಈಗಾಗಲೇ ಹಾವೇರಿ, ಚಿತ್ರದುರ್ಗ ಮತ್ತು ಮೈಸೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಯುಗಾದಿ ಹಬ್ಬದ ಹೊತ್ತಿಗೆ ರಾಜ್ಯದ ಬಹುತೇಕ ಭಾಗಗಳು ತಂಪಾಗಲಿವೆ.
ಸಿಲಿಕಾನ್ ಸಿಟಿ ಸ್ಥಿತಿ: ಬೆಂಗಳೂರಿನಲ್ಲಿ ಇಂದು ಗರಿಷ್ಠ 32ಸೆಲ್ಸಿಯಸ್ ಹಾಗೂ ಕನಿಷ್ಠ 19ಸೆಲ್ಸಿಯಸ್ ತಾಪಮಾನ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಕರ್ನಾಟಕ: ಬೀದರ್, ಕಲಬುರಗಿ, ರಾಯಚೂರಿನಲ್ಲಿ 37ಸೆಲ್ಸಿಯಸ್ ತಾಪಮಾನದ ನಡುವೆಯೂ ಗುಡುಗು ಸಹಿತ ಮಳೆಯ ನಿರೀಕ್ಷೆಯಿದೆ.
ಮಲೆನಾಡು & ಕರಾವಳಿ: ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ತಾಪಮಾನದಲ್ಲಿ ಇಳಿಕೆಯಾಗಲಿದೆ.
ಬೀದರ್, ಕಲಬುರಗಿ ಭಾಗಗಳಲ್ಲಿ 37 ಸೆಲ್ಸಿಯಸ್ ತೀವ್ರ ಬಿಸಿಲಿನ ನಡುವೆಯೂ ಸಂಜೆ ವೇಳೆಗೆ ಆಲಿಕಲ್ಲು ಮಳೆಯ ಮುನ್ಸೂಚನೆ ಇದೆ.
ಮುನ್ನೆಚ್ಚರಿಕೆ: ಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿ.ಮೀ ಇರಲಿದ್ದು, ಸಾರ್ವಜನಿಕರು ಮತ್ತು ರೈತರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಎಲ್ಲೆಲ್ಲಿ ಯೆಲ್ಲೋ ಅಲರ್ಟ್?
ದಕ್ಷಿಣ ಒಳನಾಡು:ಬೆಂಗಳೂರು ನಗರ/ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ತುಮಕೂರು, ದಾವಣಗೆರೆ.
ಉತ್ತರ ಒಳನಾಡು:ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಧಾರವಾಡ.
ಕರಾವಳಿ & ಮಲೆನಾಡು:ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು.

