HomeKarnatakaBREAKING NEWS: ಬೆಂಗಳೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಬಟ್ಟೆ ಒಣಗಿಸಲು ಮಹಡಿ ಮೇಲೆ ಹೋಗಿದ್ದಾಗ...

BREAKING NEWS: ಬೆಂಗಳೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಬಟ್ಟೆ ಒಣಗಿಸಲು ಮಹಡಿ ಮೇಲೆ ಹೋಗಿದ್ದಾಗ ಕೃತ್ಯ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಮೇಲೆ ಕಾಮಾಂಧನೊಬ್ಬ ಅತ್ಯಾಚಾರವೆಸಗಿರುವ ಘಟನೆ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.

15 ವರ್ಷದ ಬಾಲಕಿ ಮೇಲೆ ದುರುಳ ಅತ್ಯಾಚಾರವೆಸಗಿ ಎಸ್ಕೇಪ್ ಆಗಿದ್ದಾನೆ. ಬಾಲಕಿ ಬಟ್ಟೆ ಒಣಗಿಸಲೆಂದು ಮನೆಯ ಮಹಡಿ ಮೇಲೆ ಹೋಗಿದ್ದಳು. ಈ ವೇಳೆ ಕಾಮುಕ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.

ಮನೆಯಲ್ಲಿ ಬಾಲಕಿ ಪೋಷಕರು ಇಲ್ಲದಿರುವುದನ್ನು ಗಮನಿಸಿ ಮನೆ ಮಹಡಿ ಮೇಲೆ ಹೋಗಿದ್ದ ಆರೋಪಿ, ಬಾಲಕಿ ಬಟ್ಟೆ ಒಣಗಿಸಲು ಬರುತ್ತಿದ್ದಂತೆ ಆಕೆಯನ್ನು ಕೂಗದಂತೆ ಬೆದರಿಸಿ ಅತ್ಯಾಚಾರವೆಸಗಿದ್ದಾನೆ. ಕೃತ್ಯದ ಬಳಿಕ ಆರೋಪಿ ಪರಾರಿಯಾಗಿರುವ, ಆತನ ಚಲನವಲನಗಳ ದೃಶ್ಯ್ ಸಿಸಿಟಿವಿಯಲ್ಲಿ ಸೆರೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular