ಮಂಗಳವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣ ಜಲಾವೃತವಾಗಿದೆ. ಕಳೆದ ಮಾರ್ಚ್ ನಲ್ಲಿ ಮೋದಿ 13.71 ಕಿಮೀ ಉದ್ದದ ಮೆಟ್ರೋ ಮಾರ್ಗ ಉದ್ಘಾಟಿಸಿದ್ದು ತಿಂಗಳು ಕಳೆಯುವ ಮುನ್ನವೇ ಮೆಟ್ರೋ ನಿಲ್ದಾಣ ಜಲಾವೃತವಾಗಿದೆ.
ಮಾರ್ಚ್ 25ರ ಶನಿವಾರ ವೈಟ್‌ಫೀಲ್ಡ್ ನಿಂದ ಕೃಷ್ಣರಾಜಪುರದವರೆಗೆ ಸಾಗುವ 4,249 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಮೆಟ್ರೋ ಮಾರ್ಗವನ್ನು ಪ್ರಧಾನಿ ಉದ್ಘಾಟಿಸಿದ್ದರು.
ಮಳೆ ನೀರಿನಿಂದ ಮುಳುಗಡೆಯಾದ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ದೃಶ್ಯಗಳನ್ನು ಹಲವಾರು ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ನಾಗರಿಕ ವೇದಿಕೆಯಾದ ವೈಟ್‌ಫೀಲ್ಡ್ ರೈಸಿಂಗ್, ನಿಲ್ದಾಣದ ಪ್ಲಾಟ್‌ಫಾರ್ಮ್ ಮತ್ತು ಟಿಕೆಟಿಂಗ್ ಕೌಂಟರ್ ಬಳಿ ಮಳೆನೀರು ತುಂಬಿರುವ ಫೋಟೋಗಳನ್ನು ಟ್ವೀಟ್ ಮಾಡಿದೆ.
“ಹೊಚ್ಚಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಒಳಗೆ. ಪ್ಲಾಟ್‌ಫಾರ್ಮ್‌ನಲ್ಲಿ ಮತ್ತು ಟಿಕೆಟ್ ಕೌಂಟರ್ ಬಳಿ ನೀರು. ನಮ್ಮ ಮೆಟ್ರೋದ ನಿಲ್ದಾಣದೊಳಗೆ ಒಂದು ಸಣ್ಣ ಮಳೆಯಿಂದ ನೀರು ಸಂಪೂರ್ಣವಾಗಿ ಒಳಗೆ ನುಗ್ಗಿದೆ” ಎಂದು ಬರೆದಿದ್ದಾರೆ.
ಕೆಲವು ಪ್ರಯಾಣಿಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಮೆಟ್ರೋ ಮೂಲಸೌಕರ್ಯ ಸಂಪೂರ್ಣ ಸಿದ್ಧವಾಗುವ ಮುನ್ನವೇ ಉದ್ಘಾಟನೆಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಟ್ವಿಟರ್ ಬಳಕೆದಾರರೊಬ್ಬರು ಸಣ್ಣ ಮಳೆಯ ನಂತರ ಹೀಗಾದರೆ, ಮುಂಗಾರು ಮಳೆಯಲ್ಲಿ ಏನಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
Inside the brand new Nallurhalli Metro station.
Water on the platform as well near the ticketing counter.
@cpronammametro one rain, and water has seeped inside fully. pic.twitter.com/HhJFt8aQkw
— Whitefield Rising (@WFRising) April 4, 2023
This is what one can expect when metro stations are opened in hurry without properly completing the works..
— Shanoj Devassy (@shanojdevassy) April 4, 2023

