HomeKarnatakaBIG NEWS: ಬೆಂಗಳೂರು-ಮಂಗಳೂರು ಬಸ್ ತಡೆದು ಹಲ್ಲೆ ಪ್ರಕರಣ: ಆರೋಪಿ ಮೇಲೆ ಪೊಲೀಸರ ಫೈರಿಂಗ್; ಅರೆಸ್ಟ್

BIG NEWS: ಬೆಂಗಳೂರು-ಮಂಗಳೂರು ಬಸ್ ತಡೆದು ಹಲ್ಲೆ ಪ್ರಕರಣ: ಆರೋಪಿ ಮೇಲೆ ಪೊಲೀಸರ ಫೈರಿಂಗ್; ಅರೆಸ್ಟ್

ಬೆಂಗಳೂರು: ಬೆಂಗಳೂರು-ಮಂಗಳೂರು ಬಸ್ ತಡೆದು ಲಾಂಗ್ ನಿಂದ ಹಲ್ಲೆ ನಡೆಸಿದ್ದ ಪುಡಿರೌಡಿಗಳ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ಶಾಂತಿಗ್ರಾಮದಲ್ಲಿ ನಡೆದಿದೆ.

ಬಸ್ ತಡೆದು ಲಾಂಗ್ ನಿಂದ ಕಿಡಕಿ ಗಾಜುಗಳನ್ನು ಪುಡಿಗೈದಿದ್ದ ಆರೋಪಿ ಮನು (23) ನನ್ನು ಬೆಂಗಳೂರು ನಗರದಲ್ಲಿ ಬಂಧಿಸಿದ್ದ ಹಾಸನ ಪೊಲೀಸರು ಹಾಸನಕ್ಕೆ ಕರೆ ತಂದಿದ್ದರು. ಈ ವೇಳೆ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದಿದ್ದಾನೆ. ಶಾಂತಿ ಗ್ರಾಮದ ಬಳಿ ಜೀಪ್ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಅವಕಾಶ ನೀಡಿದಾಗ ಆರೋಪಿ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ ನಡೆಸಿದ್ದಾನೆ.

ಈ ವೇಳೆ ಹಾಸನ ನಗರ ಠಾಣೆ ಇನ್ಸ್ ಪೆಕ್ಟರ್ ಮೋಹನ್ ಕೃಷ್ಣ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular