HomeKarnatakaBIG NEWS: ಇಲ್ಲಿಂದ ದುಡ್ಡು ಹೋಗಿದೆ ಅಂತ ಅವರು ನೋಡಿದ್ದಾರಾ? ಬಿಜೆಪಿ ಆರೋಪಕ್ಕೆ ಗರಂ ಆದ...

BIG NEWS: ಇಲ್ಲಿಂದ ದುಡ್ಡು ಹೋಗಿದೆ ಅಂತ ಅವರು ನೋಡಿದ್ದಾರಾ? ಬಿಜೆಪಿ ಆರೋಪಕ್ಕೆ ಗರಂ ಆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ 23 ಬಾಕ್ಸ್ ಗಳಲ್ಲಿ 40 ಕೋಟಿಗೂ ಅಧಿಕ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ಕೆಸರೆರಚಾಟ ಆರಂಭವಾಗಿದೆ. ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಹಣ ಸಂಗ್ರಹ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪಂಚರಾಜ್ಯ ಚುನಾವಣೆಗೆ ಕಾಂಗ್ರೆಸ್ ಹಣ ಸಂಗ್ರಹ ಎಂಬುದು ಬಿಜೆಪಿಯ ಬೇಸ್ ಲೆಸ್ ಆರೋಪ. ನಾವು ಹಣ ಸಂಗ್ರಹಿಸಿಯೂ ಇಲ್ಲ ಯಾವ ರಾಜ್ಯಕ್ಕೂ ಹಣ ಕೊಡುವುದೂ ಇಲ್ಲ. ಅವರು ಕೇಳುವುದೂ ಇಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚುನಾವಣೆಗೆ ಇಲ್ಲಿಂದ ದುಡ್ಡು ಹೋಗಿದೆ ಅಂತಾ ಬಿಜೆಪಿಯವರು ನೋಡಿದ್ದಾರಾ? ಸುಮ್ಮನೇ ಆರೋಪಗಳನ್ನು ಮಾಡವುದು ಎಂದರೆ ಏನು? ಎಂದು ಗರಂ ಆದರು.

For Latest News Updates, Join Our Whatsapp Community🚩
RELATED ARTICLES

Most Popular