HomeKarnatakaಬೆಂಗಳೂರಿನ ಮಹತ್ವದ ಯೋಜನೆ: ರೈತರ ಜಮೀನಿಗೆ ದರ ನಿಗದಿ

ಬೆಂಗಳೂರಿನ ಮಹತ್ವದ ಯೋಜನೆ: ರೈತರ ಜಮೀನಿಗೆ ದರ ನಿಗದಿ

ಬೆಂಗಳೂರು ನಗರದ ಸಂಚಾರ ದಟ್ಟಣೆ ಮಾಡಲಿದೆ ಎಂದು ನಿರೀಕ್ಷೆ ಮಾಡಿರುವ ಮಹತ್ವದ ಯೋಜನೆ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ). ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್‌–1) ಯೋಜನೆಯನ್ನು ಬಿಬಿಸಿ ಎಂದು ಮರು ನಾಮಕರಣ ಮಾಡಿರುವ ಕರ್ನಾಟಕ ಸರ್ಕಾರ ಯೋಜನೆಯ ಜಾರಿಗೆ ಮುಂದಾಗಿದೆ.

ಈ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನುಷ್ಠಾನಗೊಳಿಸುತ್ತದೆ. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರೈತರಿಂದ ಸ್ವಾಧೀನ ಮಾಡಿಕೊಳ್ಳಲು ಬಿಡಿಎ ಮುಂದಾಗಿದ್ದು, ಜಮೀನುಗಳಿಗೆ ಅಂತಿಮ ದರವನ್ನು ಸಹ ನಿಗದಿ ಮಾಡಲಾಗಿದೆ.

ಸದ್ಯದ ಮಾಹಿತಿ ಪ್ರಕಾರ ಬಿಬಿಸಿ ಯೋಜನೆಗೆ ಕೆಲವು ಗ್ರಾಮಗಳಲ್ಲಿ ಬಿಡಿಎ ಪ್ರತಿ ಎಕರೆಗೆ 16 ಕೋಟಿ ರೂ. ತನಕ ಪರಿಹಾರ ನೀಡಲು ಮುಂದಾಗಿದೆ. ಈ ಕುರಿತು ರೈತರ ಜೊತೆಗೆ ಶೀಘ್ರವೇ ಸಭೆಗಳನ್ನು ನಡೆಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭೂ ಸ್ವಾಧೀನ ಕಾರ್ಯ ಪೂರ್ಣಗೊಂಡರೆ ಬಿಬಿಸಿ ಯೋಜನೆಗೆ ಟೆಂಡರ್ ಕರೆಯಲಾಗುತ್ತದೆ. ಆದ್ದರಿಂದ ಈ ಕಾರ್ಯವನ್ನು ಬೇಗ ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಹಳೆಯ ಭೂ ಸ್ವಾಧೀನದ ಆದೇಶಗಳು, ಈಗಿನ ಭೂಮಿಯ ಬೆಲೆಗೆ ಹೋಲಿಕೆ ಅಸಾಧ್ಯವಾಗಿದೆ. ಆದ್ದರಿಂದ ಪ್ಯಾಕೇಜ್ ರೂಪದಲ್ಲಿ ಸಹಾಯಧನ ನೀಡಲು ಬಿಡಿಎ ತೀರ್ಮಾನಿಸಿದೆ.

ಆಗ ಎಷ್ಟಿತ್ತು ಭೂಮಿಯ ದರ: 2008-09ರಲ್ಲಿ ಸರ್ಕಾರ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಪ್ರಸ್ತಾಪಿಸಿತ್ತು. ಆಗ ಭೂ ಸ್ವಾಧೀನಕ್ಕೆ ಆದೇಶವನ್ನು ಸಹ ಹೊರಡಿಸಲಾಗಿತ್ತು. 948 ಎಕರೆ 14.5 ಗುಂಟೆ ಭೂಮಿಗೆ ಪ್ರತಿ ಎಕರೆಗೆ ಬಿಡಿಎ 20-30 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿತ್ತು.

ಯೋಜನೆಗಾಗಿ ಮೊದಲ ಹಂತದಲ್ಲಿ 1810 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಒಂದು ಭಾಗವಾಗಿದೆ. ಆದರೆ ಇದಕ್ಕೆ ರೈತರು ಆಗ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ವಿವಿಧ ಕಾರಣಕ್ಕಾಗಿ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಜಾರಿಯಾಗಲೇ ಇಲ್ಲ.

ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಡಿ.ಕೆ.ಶಿವಕುಮಾರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಬಿಬಿಸಿ ಎಂದು ಮರು ನಾಮರಣ ಮಾಡಿ ಜಾರಿಗೊಳಿಸುತ್ತಿದ್ದಾರೆ.

ಯೋಜನೆ ಹಾದು ಹೋಗುವ ವರ್ತೂರು ಮತ್ತು ಗುಂಜೂರು ಪ್ರದೇಶದಲ್ಲಿ ಪ್ರತಿ ಎಕೆರೆಗೆ 15 ರಿಂದ 40 ಕೋಟಿ ತನಕ ಬೆಲೆ ಇದೆ. ಈ ಹಿನ್ನಲೆಯಲ್ಲಿ ಬಿಡಿಎ ಅಧಿಕಾರಿಗಳು ಈಗ ಕೆಲವು ಗ್ರಾಮಗಳಲ್ಲಿ ಎಕೆರೆಗೆ 15.6 ಕೋಟಿ ರೂ. ಪರಿಹಾರವನ್ನು ನೀಡಲು ಮುಂದಾಗಿದ್ದಾರೆ.

ಈಗಾಗಲೇ ಈ ಮಾದರಿ ಮಾತುಕತೆಗೆ ಹಲವು ರೈತರು ಒಪ್ಪಿಗೆ ನೀಡಿದ್ದಾರೆ. ಸುಮಾರು 100 ಎಕರೆ ಭೂಮಿ ಸ್ವಾಧೀನದ ಮಾತುಕತೆ ಅಂತಿಮವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ಬಿಬಿಸಿ ಯೋಜನೆಗೆ ಶೀಘ್ರವೇ ಚಾಲನೆ ಸಿಗುವ ನಿರೀಕ್ಷೆ ಇದೆ.

ಯೋಜನೆಗೆ ಭೂಮಿ ನೀಡುವ ರೈತರಿಗೆ ನಗದಿ, ನಿವೇಶನ, ವಾಣಿಜ್ಯ ನಿವೇಶನ, ವರ್ಗಾವಣೆ ಅಭಿವೃದ್ಧಿ ಹಕ್ಕುಗಳು ಅಥವ ಮಹಡಿ ವಿಸ್ತೀರ್ಣ ಅನುಪಾತ ಸೇರಿ 5 ರೀತಿಯ ಪರಿಹಾರ ಆಯ್ಕೆಗಳನ್ನು ನೀಡಲಾಗಿದೆ.

ಜಮೀನು ಸ್ವಾಧೀನ ಪಡಿಸಿಕೊಂಡ ಬಳಿಕ ಅದರ ಗ್ರಾಮವಾರು ವಿವರಗಳನ್ನು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯೋಜನೆಯ ಶೇ 80ರಷ್ಟು ಭೂ ಸ್ವಾಧೀನ ಪೂರ್ಣಗೊಂಡರೆ ಟೆಂಡರ್ ಕರೆಯಬೇಕು ಎಂದು ಸರ್ಕಾರ ಹೇಳಿದೆ. ಆದರೆ ಶೇ 60ರಷ್ಟು ಭೂ ಸ್ವಾಧೀನದ ಬಳಿಕ ಟೆಂಡರ್ ಕರೆಯಲು ಒಪ್ಪಿಗೆ ನೀಡಬೇಕು ಎಂದು ಬಿಡಿಎ ಸರ್ಕಾರಕ್ಕೆ ಪತ್ರ ಬರೆದಿದೆ.

2007ರಲ್ಲಿ ಬಿಡಿಎ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಪ್ರಸ್ತಾವನೆ ಸಿದ್ಧಗೊಳಿಸಿದಾಗ 73 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿತ್ತು. ಆದರೆ ಈಗ ಬಿಬಿಸಿ ಯೋಜನೆ 117 ಕಿ.ಮೀ.ಇರಲಿದೆ.

ತುಮಕೂರು ರಸ್ತೆಯಿಂದ ವೈಟ್‌ಫೀಲ್ಡ್, ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಮೈಸೂರು ರಸ್ತೆ ಮಾರ್ಗವಾಗಿ ಬೆಂಗಳೂರು ನಗರ ಸುತ್ತಲೂ ಈ ರಸ್ತೆ ನಿರ್ಮಾಣವಾಗಲಿದ್ದು, ಬಿಐಇಸಿ ಬಳಿ ಮತ್ತೆ ತುಮಕೂರು ರಸ್ತೆ ಸಂಪರ್ಕಿಸಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular