HomeKarnatakaಬೆಂಗಳೂರಲ್ಲಿ ಭಾರೀ ಮಳೆಯಿಂದ ಅವಘಡ: ಕಾಂಪೌಂಡ್ ಕುಸಿದು 5 ಜಾನುವಾರು ಸಾವು, ಮಾಲೀಕನಿಗೆ ತೀವ್ರ ಗಾಯ

ಬೆಂಗಳೂರಲ್ಲಿ ಭಾರೀ ಮಳೆಯಿಂದ ಅವಘಡ: ಕಾಂಪೌಂಡ್ ಕುಸಿದು 5 ಜಾನುವಾರು ಸಾವು, ಮಾಲೀಕನಿಗೆ ತೀವ್ರ ಗಾಯ

ಬೆಂಗಳೂರು: ಬೆಂಗಳೂರಿನ ದೊಮ್ಮಲೂರಿನಲ್ಲಿ ಭಾರಿ ಮಳೆಯಿಂದಾಗಿ ಕಾಂಪೌಂಡ್ ಕುಸಿದು ನಾಲ್ಕು ಹಸು, ಒಂದು ಕರು ಮೃತಪಟ್ಟಿವೆ.

ಭಾರಿ ಮಳೆಯಿಂದಾಗಿ ಸಂಭವಿಸಿದ ಅವಘಡದಲ್ಲಿ ಆರ್ಮಿ ಕಾಂಪೌಂಡ್ ಗೋಡೆ ಕುಸಿದು 5 ಜಾನುವಾರುಗಳು ಸಾವನ್ನಪ್ಪಿವೆ. ನಾಲ್ಕು ಹಸುಗಳು, ಒಂದು ಕರು ಮೃತಪಟ್ಟಿದ್ದು, ಮಾಲೀಕ ಮುನಿರಾಜು ಕೂಡ ಗಾಯಗೊಂಡಿದ್ದಾರೆ. ಗಾಯಾಳು ಮುನಿರಾಜು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಲ್ಲಿ ಧಾರಾಕಾರವಾಗಿ ಮಳೆಯಾಗಿ ಆರ್ಮಿ ಕಾಂಪೌಂಡ್ ಕುಸಿದು ಹಸುಗಳು ಮೃತಪಟ್ಟ ಸ್ಥಳಕ್ಕೆ ಶಾಸಕ ಎನ್.ಎ. ಹ್ಯಾರೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ಹಲವು ಭಾಗಗಳಲ್ಲಿ ಮಳೆಯಾಗಿದೆ. ಕೋರಮಂಗಲ ರಾಜಕಾಲುವೆ ಉಕ್ಕಿ ಹರಿದಿದೆ. ಮನೆಗಳಿಗೆ ನೀರು ನುಗ್ಗಿ ಜನರು ಪರದಾಟ ನಡೆಸಿದ್ದಾರೆ.

ಹಲವು ದಿನಗಳಿಂದ ಬೇಸಿಗೆಯಂತಹ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಮಂಗಳವಾರ ಸಂಜೆ ಸುರಿದ ಮಳೆ ತಂಪೆರೆದಿದೆ. ಬಹುತೇಕ ಒಂದೂವರೆ ತಿಂಗಳ ಬಳಿಕ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಿದೆ. ಸಂಜೆ ಮಳೆಯಿಂದ ನಗರದ ತಗ್ಗು ಪ್ರದೇಶಗಳು, ಪ್ರೈಓವರ್‌ಗಳು, ಅಂಡರ್‌ಪಾಸ್ ಗಳು, ರಸ್ತೆಗಳು, ಜಂಕ್ಷನ್‌ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡಿದ್ದಾರೆ.

ಕೆಲವು ಕಡೆ ಮರಗಳು, ಕೊಂಬೆಗಳು ಧರೆಗೆ ಉರುಳಿದ್ದು, ಅವುಗಳನ್ನು ತೆರವುಗೊಳಿಸಿ ವಾಹನ ಹಾಗೂ ಜನ ಸಂಚಾರಕ್ಕೆ ಪಾಲಿಕೆ ಸಿಬ್ಬಂದಿ ಅನುವು ಮಾಡಿಕೊಡಲಾಗಿದೆ. ಸುಲ್ತಾನ್ ಪಾಳ್ಯದಲ್ಲಿನ ತಗ್ಗು ಪ್ರದೇಶದಲ್ಲಿನ ಕೆಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗೃಹ ಬಳಕೆ ವಸ್ತುಗಳಿಗೆ ಹಾನಿಯಾಗಿದೆ.

ಗರುಡಾ ಮಾಲ್, ಶೇಷಾದ್ರಿಪುರ, ಹಾಸ್ಟೆಟ್ ಆಸ್ಪತ್ರೆ ಬಳಿ ಮರಗಳು ಹಾಗೂ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ಪಾಲಿಕೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಮರಗಳನ್ನು ತೆರವುಗೊಳಿಸಿದ್ದಾರೆ. ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಓಕಳಿಪುರ ಜಂಕ್ಷನ್, ಶಿವಾನಂದ ವೃತ್ತ ಅಂಡರ್‌ಪಾಸ್, ರಿಚ್ಚಂಡ್ ಸರ್ಕಲ್, ಎಚ್ ಇಎಲ್ ಏರ್ಪೋಟ್ರ ರಸ್ತೆ, ಹೆಬ್ಬಾಳ ಜಂಕನ್ ಡೌನ್ ಮೊದಲಾದ ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದವು.

ನಗರದ ಕೋರಮಂಗಲ ಹಾಗೂ ಬೊಮ್ಮನಹಳ್ಳಿಯಲ್ಲಿ ಭಾರಿ ಮಳೆಯಾಗಿದ್ದು, ಈ ಎರಡು ಪ್ರದೇಶಗಳಲ್ಲಿ ಗರಿಷ್ಠ 60 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. ಮಾರಪ್ಪನಪಾಳ್ಯ 58 ಮಿ.ಮೀ, ನಾಗಪುರ 54.5 ಮಿ. ಮೀ, ಕೂಡ್ಲು 52 ಮಿ.ಮೀ, ಸಂಪಂಗಿರಾಮನಗರ 45.5 ಮಿ.ಮೀ, ನ್ಯೂ ಬಿ.ಎಲ್‌.ಆರ್‌ರಸ್ತೆ 47 ಮಿ.ಮೀ, ಆ‌ರ್.ಟಿ ನಗರ 46.8 ಮಿ.ಮೀ, ಜಯನಗರ 35.4 ಮಿ.ಮೀ, ಹೆಚ್.ಎಸ್.ಆರ್‌ಲೇಔಟ್ 31.6 ಮಿ.ಮೀ ಹಾಗೂ ಎಂ.ಜಿ ರಸ್ತೆಯಲ್ಲಿ 29 ಮಿ.ಮೀ ಮಳೆಯಾಗದೆ. ನಗರದ ಕೇಂದ್ರ ಭಾಗ, ದಕ್ಷಿಣ, ಪೂರ್ವ, ಉತ್ತರ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಪಶ್ಚಿಮ ಭಾಗದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಜೆ.ಸಿ. ನಗರ ದೂರದರ್ಶನ ಕೇಂದ್ರ ವೃತ್ತ, ಎಸ್‌ಜೆಪಿ ರಸ್ತೆ, ವೀರಣ್ಯಪಾಳ್ಯ, ಜಯಮಹಲ್ ಆಂಡರ್‌ಪಾಸ್, ಬ್ರಿಯಾಂಡ್ ಜಂಕ್ಷನ್, ಚಿಕ್ಕಪೇಟೆ ಮೆಟ್ರೋ ನಿಲ್ದಾಣ, ರೂಪೇನ ಅಗ್ರಹಾರ, ಶ್ರೀನಿವಾಗಿಲು, ಲ್ಯಾವೆಲ್ಲೆ ರಸ್ತೆ, ತುಮಕೂರು ರಸ್ತೆ ಪೀಣ್ಯ ಪ್ರೈವೋವರ್, ಮಡಿವಾಳ ಅಯ್ಯಪ್ಪ ಸ್ವಾಮಿ ಕೆಳ ಸೇತುವೆ, ಬಿಜಿಎಸ್ ಪ್ರೈವೋವರ್, ಬಿಜಿಎಸ್ ಪ್ರೈವೋವರ್ ಚಾಮರಾಜಪೇಟೆ ಕಡೆಯ ಡೌನ್‌ರಾಂಪ್, ಪ್ಯಾಲೆಸ್ ಗುಟ್ಟಹಳ್ಳಿ, ಕೋರಮಂಗಲ ರಿಂಗ್ ರಸ್ತೆ, ಗರುಡ ಮಾಲ್ ಜಂಕ್ಷನ್ ಸೇರಿದಂತೆ ನಗರದ ಅನೇಕ ರಸ್ತೆಗಳಲ್ಲಿ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ.

ಅಶೋಕ ನಗರ ಪೋತಪ್ಪ ಗಾರ್ಡನ್, ಪ್ಯಾಲೆಸ್ ಗುಟ್ಟಹಳ್ಳಿ, ಎಚ್‌ಎಎಲ್ ಏರ್ಪೋಟ್ ರಸ್ತೆಗಳಲ್ಲಿನ ಡ್ರೈನ್‌ಗಳಲ್ಲಿ ಕಸ ತುಂಬಿಕೊಂಡಿದ್ದ ಕಾರಣ ನೀರು ಹರಿದು ಹೋಗದೆ ರಸ್ತೆಗಳು ಜಲಾವೃತವಾಗಿದ್ದವು. ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣ ಕೆಳಭಾಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಕೆರೆಯಂತಾಗಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular