ಬೆಂಗಳೂರು: ಸ್ನೇಹಿತರೊಂದಿಗೆ ಯುವತಿ ಹೋಟೆಲ್ ನಲ್ಲಿ ಪಾರ್ಟಿ ಮಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಪೊಲೀಸರಿಗೆ ಹೆದರಿ ಯುವತಿ ಬಾಲ್ಕನಿಯಿಂದ ಕೆಳಗೆ ಹಾರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೆಚ್.ಎ.ಎಲ್ ಬಳಿ ಈ ಘಟನೆ ನಡೆದಿದೆ. ವೈಷ್ಣವಿ ಗಂಭೀರವಾಗಿ ಗಾಯಗೊಂಡಿರುವ ಯುವತಿ. ಕ್ರಿಸ್ ಮಸ್, ಹೊಸ ವರ್ಷಾಚರಣೆ ಸಮೀಸುತ್ತಿರುವ ಬೆನ್ನಲ್ಲೇ ಯುವತಿ ತನ್ನ ಸ್ನೇಹಿತರು, ಸ್ನೇಹಿತೆಯರ ಜೊತೆ ಹೋಟೆಲ್ ಗೆ ತೆರಳಿ ಪಾರ್ಟಿ ಮಾಡುತ್ತಿದ್ದಳು. ಹೋಟೆಲ್ ಪರಿಶೀಲಿಸಲು ಪೊಲೀಸರು ಭೇಟಿ ನೀಡುತ್ತಿದ್ದಂತೆಯೇ ಯುವತಿ ಆತಂಕಗೊಂಡಿದ್ದಾಳೆ. ಪೊಲೀಸರಿಗೆ ಹೆದರಿ ಯುವತಿ ಹೋಟೆಲ್ ಬಾಲ್ಕನಿಂದ ಕೆಳಗೆ ಹಾರಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಯುವತಿ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ಜೊತೆ ಹೋರಾಟ ನಡೆಸಿದ್ದಾರೆ.
ಯುವತಿಯ ತಂದೆ ಆಂಥೋನಿ, ತನ್ನ ಮಗಳ ಸ್ಥಿತಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿದ್ದಾಳೆ. ಮಗಳು ಸ್ನೇಹಿತರೊಂದಿಗೆ ಹೋಟೆಲ್ ಗೆ ಹೋಗಿದ್ದ ವೇಳೆ ಪೊಲೀಸರು ಪಾರ್ಟಿ ಮಾಡುತ್ತಿದ್ದ ಸ್ನೇಹಿತರ ಬಳಿ ಹಣ ಕೇಳಿದ್ದಾರೆ. ವಿಡಿಯೋ ಮಾಡಿ ಹಣ ನೀಡುವಂತೆ ಹೆದರಿಸಿದ್ದಾರೆ. ಇದರಿಂದ ಆತಂಕಗೊಂಡು ಬಾಲ್ಕನಿಯಿಂದ ಹಾರಿದ್ದಾಳೆ. ಮಗಳು ಸಾವು-ಬದುಕಿನ ಜೊತೆ ಹೋರಾಡುತ್ತಿದ್ದಾಳೆ ಎಂದು ಕಣ್ಣೀರಿಟ್ಟಿದ್ದಾರೆ.

