HomeLatest NewsBIG NEWS: ಬೆಂಗಳೂರಿನಲ್ಲಿ ದರೋಡೆ ಪ್ರಕರಣ: 5.76 ಕೋಟಿ ಜಪ್ತಿ ಮಾಡಲಾಗಿದೆ: ಕಮಿಷನರ್ ಸೀಮಂತ್ ಕುಮಾರ್...

BIG NEWS: ಬೆಂಗಳೂರಿನಲ್ಲಿ ದರೋಡೆ ಪ್ರಕರಣ: 5.76 ಕೋಟಿ ಜಪ್ತಿ ಮಾಡಲಾಗಿದೆ: ಕಮಿಷನರ್ ಸೀಮಂತ್ ಕುಮಾರ್ ಮಾಹಿತಿ

ಬೆಂಗಳೂರು: ಬೆಂಗಳೂರಿನ ಡೇರಿ ಸರ್ಕಲ್ ಬಳಿ ಹಾಡಹಗಲೇ ನಡೆದ 7.11 ಕೋಟಿ ಹಣ ದರೂಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ ಎಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್, ಘಟನೆ ನಡೆದ 54 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 5.76 ಕೋಟಿ ಹಣ ಸೀಜ್ ಮಾಡಲಾಗಿದೆ ಎಂದರು. ಒಟ್ಟು 8 ಜನರಿಂದ ದರೋಡೆ ಕೃತ್ಯ ನಡೆದಿದೆ ಎಂದು ಹೇಳಿದರು.

ದರೋಡೆಕೋರರು ಹಲವು ವಾಅಹನಗಳನ್ನು ಬಳಸಿದ್ದಾರೆ. ಪದೇ ಪದೇ ನಂಬರ್ ಪ್ಲೇಟ್ ಬದಲಾವಣೆ ಮಾಡಿದ್ದಾರೆ. ಹಣ ಕದ್ದೊಯ್ದ ವಾಹನವನ್ನು ಹಿಡಿಯಲು ಸಾಧ್ಯವಾಗಿಲ್ಲ. ಆರೋಪಿಗಳು ಬೇರೆ ಬೇರೆ ಭಾಷಗಳಲ್ಲಿ ಮಾತನಾಡಿ ತನಿಖೆ ದಾರಿ ತಪ್ಪಿಸುತ್ತಿದ್ದರು. ದರೋಡೆ ಪ್ರಕರಣ ಬೇಧಿಸಲು ಒಟ್ಟು 11 ತಂಡಗಳಲ್ಲಿ 200 ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular