HomeLatest NewsBREAKING: ಬೆಂಗಳೂರಿನಲ್ಲಿ ವೃದ್ಧೆ ಹತ್ಯೆಗೈದು ಚಿನ್ನಾಭರಣ ದೋಚಿ ಪರಾರಿಯಾದ ದುಷ್ಕರ್ಮಿಗಳು

BREAKING: ಬೆಂಗಳೂರಿನಲ್ಲಿ ವೃದ್ಧೆ ಹತ್ಯೆಗೈದು ಚಿನ್ನಾಭರಣ ದೋಚಿ ಪರಾರಿಯಾದ ದುಷ್ಕರ್ಮಿಗಳು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳುರಿನಲ್ಲಿ ಮತ್ತೊಂದು ಕೊಲೆ ನಡೆದಿದೆ. ವೃದ್ಧೆಯನ್ನು ಹತ್ಯೆಗೈದು ದುಷ್ಕರ್ಮಿಗಳು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಶ್ರೀಲಕ್ಷ್ಮೀ ಕೊಲೆಯಾಗಿರುವ ಮಹಿಳೆ. ಶ್ರೀಲಕ್ಷ್ಮೀ ಪತಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಶ್ರೀಲಕ್ಷ್ಮೀ ಒಬ್ಬರೇ ವಾಸವಾಗಿದ್ದರು.. ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆಗೈದು ಕತ್ತಿನಲ್ಲಿದ್ದ ಮಾಂಗಲ್ಯ ಸರ, ಕಿವಿಯೋಲೆ, ಮೂಗುತಿ, ಕೈಯಲ್ಲಿದ್ದ ಬಳೆಗಳನ್ನು ದೋಚಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಬಾಡಿಗೆದಾರರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular