HomeKarnatakaBREAKING : ಬೆಂಗಳೂರಲ್ಲಿ ಭಾರಿ ಅಗ್ನಿ ಅವಘಡ : 100 ಕ್ಕೂ ಹೆಚ್ಚು ವಾಹನಗಳು ಸುಟ್ಟು...

BREAKING : ಬೆಂಗಳೂರಲ್ಲಿ ಭಾರಿ ಅಗ್ನಿ ಅವಘಡ : 100 ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲು.!

ಬೆಂಗಳೂರು: ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

ಜೆಡಿಎಸ್ ಕಚೇರಿ ಪಕ್ಕದ ಮೈದಾನದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸ್ಥಳದಲ್ಲಿದ್ದ 100ಕ್ಕೂ ಹೆಚ್ಚು ವಾಹನಗಳು ಅಗ್ನಿಗಾಹುತಿಯಾಗಿವೆ. ಜಪ್ತಿ ಮಾಡಿದ್ದ ವಾಹನಗಳನ್ನು ಪೊಲೀಸರು ಶೇಷಾದ್ರಿಪುರಂ ಬಳಿಯ ಜಕ್ಕರಾಯನ ಕೆರೆ ಗ್ರೌಂಡ್ ನಲ್ಲಿ ಪಾರ್ಕ್ ಮಾಡಿದ್ದರು.

ಐದು ಕಾರು, ಐದು ಆಟೋ, ಇತರ ವಾಹನಗಳು 80ಕ್ಕೂ ಹೆಚ್ಚು ಬೈಕ್ ಗಳು ಸುಟ್ಟು ಕರಕಲಾಗಿವೆ. ಮೈದಾನದಲ್ಲಿ ಹುಲ್ಲುಗಿಡ ಬೆಳೆದುಕೊಂಡಿತ್ತು, ಯಾರೋ ಸಿಗರೇಟ್ ಗಾಗಿ ಬೆಂಕಿ ಕಡ್ಡಿ ಗೀರಿ ಎಸೆದಿದ್ದು, ಇದರಿಂದ ಈ ಅವಘಡ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular