HomeRecipiesಕೋಳಿ ಮಾಂಸದ ಅಡುಗೆಯಲ್ಲಿ ಹೊಸ ರುಚಿ ಹುಡುಕ್ತಿದ್ದೀರಾ? ಇಲ್ಲಿದೆ ಬಾಯಲ್ಲಿ ನೀರೂರಿಸುವ 'ಬಂಗಾಳಿ ಪೆಪ್ಪರ್ ಚಿಕನ್

ಕೋಳಿ ಮಾಂಸದ ಅಡುಗೆಯಲ್ಲಿ ಹೊಸ ರುಚಿ ಹುಡುಕ್ತಿದ್ದೀರಾ? ಇಲ್ಲಿದೆ ಬಾಯಲ್ಲಿ ನೀರೂರಿಸುವ ‘ಬಂಗಾಳಿ ಪೆಪ್ಪರ್ ಚಿಕನ್

ಸಾಮಾನ್ಯವಾಗಿ ಚಿಕನ್ ಅಡುಗೆ ಎಂದರೆ ಮಸಾಲೆಗಳ ಅಬ್ಬರವಿರುತ್ತದೆ. ಆದರೆ ಬಂಗಾಳಿ ಶೈಲಿಯ ಪೆಪ್ಪರ್ ಚಿಕನ್ ತನ್ನ ವಿಶಿಷ್ಟ ರುಚಿ ಮತ್ತು ಮೆಣಸಿನ ಘಾಟಿನಿಂದಾಗಿ ಜನಪ್ರಿಯವಾಗಿದೆ. ನೀವು ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ಪಾರ್ಟಿಗಳಿಗೆ ಅಥವಾ ವಿಶೇಷ ರಾತ್ರಿ ಭೋಜನಕ್ಕೆ ಈ ಖಾದ್ಯವನ್ನು ಸಿದ್ಧಪಡಿಸಬಹುದು. ಇದು ರೊಟ್ಟಿ ಅಥವಾ ಚಪಾತಿಯೊಂದಿಗೆ ಸವಿಯಲು ಅದ್ಭುತವಾಗಿರುತ್ತದೆ.

ಬೇಕಾಗುವ ಪದಾರ್ಥಗಳು: ಚಿಕನ್ ತುಂಡುಗಳು – ಅರ್ಧ ಕೆಜಿ, ಮೊಸರು – ಕಾಲು ಕಪ್, ಈರುಳ್ಳಿ – 1 (ದೊಡ್ಡದು), ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಒಣ ಮೆಣಸಿನಕಾಯಿ – 2 ರಿಂದ 3, ಕೊತ್ತಂಬರಿ ಪುಡಿ – ಅರ್ಧ ಚಮಚ, ಗೋಡಂಬಿ – ಒಂದು ಹಿಡಿ, ಕರಿಮೆಣಸಿನ ಕಾಳು – 2 ಚಮಚ, ಕರಿಮೆಣಸಿನ ಪುಡಿ – ಒಂದೂವರೆ ಚಮಚ, ಸಾಸಿವೆ ಎಣ್ಣೆ – 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು.

ತಯಾರಿಸುವ ವಿಧಾನ: ಮೊದಲಿಗೆ ಚಿಕನ್ ತುಂಡುಗಳನ್ನು ತೊಳೆದು ಅದಕ್ಕೆ ಮೊಸರು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಕಲಸಿ. ಇದನ್ನು ಕನಿಷ್ಠ 2 ರಿಂದ 3 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಮ್ಯಾರಿನೇಟ್ ಮಾಡಲು ಇಡಿ. ಈ ನಡುವೆ ಗೋಡಂಬಿಯನ್ನು ಬಿಸಿ ನೀರಿನಲ್ಲಿ ನೆನೆಸಿ, ನಯವಾದ ಪೇಸ್ಟ್ ತಯಾರಿಸಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಒಂದು ಪ್ಯಾನ್‌ನಲ್ಲಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಒಣ ಮೆಣಸಿನಕಾಯಿ, ಕರಿಮೆಣಸಿನ ಕಾಳು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ. ಈರುಳ್ಳಿ ಹೊಂಬಣ್ಣಕ್ಕೆ ಬರುವವರೆಗೆ ಸುಮಾರು 2-3 ನಿಮಿಷಗಳ ಕಾಲ ಹುರಿಯಿರಿ. ಈಗ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕೊತ್ತಂಬರಿ ಪುಡಿ ಮತ್ತು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ.

ಚಿಕನ್ ಅರ್ಧದಷ್ಟು ಬೆಂದಾಗ, ಸಿದ್ಧಪಡಿಸಿಟ್ಟುಕೊಂಡ ಗೋಡಂಬಿ ಪೇಸ್ಟ್ ಮತ್ತು ಕರಿಮೆಣಸಿನ ಪುಡಿ ಸೇರಿಸಿ. ಅಗತ್ಯವಿದ್ದರೆ ಸ್ವಲ್ಪ ಬಿಸಿ ನೀರನ್ನು ಹಾಕಿ, ಮುಚ್ಚಳ ಮುಚ್ಚಿ ಚಿಕನ್ ಪೂರ್ತಿಯಾಗಿ ಬೇಯುವವರೆಗೆ ಬಿಡಿ. ಕೊನೆಯದಾಗಿ ಮೇಲೆ ಸ್ವಲ್ಪ ಕರಿಮೆಣಸಿನ ಪುಡಿ ಉದುರಿಸಿ ಬಿಸಿಬಿಸಿಯಾಗಿ ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular