HomeKarnatakaಬಳ್ಳಾರಿ : ಮೇ 15 ರಂದು ‘ಪಿಂಚಣಿ ಅದಾಲತ್’ ಮತ್ತು ‘ಜಿಪಿಎಫ್ ಅದಾಲತ್’ ಆಯೋಜನೆ

ಬಳ್ಳಾರಿ : ಮೇ 15 ರಂದು ‘ಪಿಂಚಣಿ ಅದಾಲತ್’ ಮತ್ತು ‘ಜಿಪಿಎಫ್ ಅದಾಲತ್’ ಆಯೋಜನೆ

ಬಳ್ಳಾರಿ :  ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪಿಂಚಣಿದಾರರ ಮತ್ತು ಜಿಪಿಎಫ್ ಚಂದಾದಾರರ ಕುಂದುಕೊರತೆಗಳನ್ನು ಆಲಿಸಿ, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮೇ 15 ರಂದು ವಿಶೇಷ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಮೇ 15 ರಂದು ಜಿಲ್ಲಾಡಳಿತ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಪಿಂಚಣಿ ಅದಾಲತ್ ಹಾಗೂ ಮಧ್ಯಾಹ್ನ 02.30 ಗಂಟೆಗೆ ಜಿಪಿಎಫ್ ಅದಾಲತ್ ಒಳಗೊಂಡು ಎರಡು ಪ್ರತ್ಯೇಕ ಅವಧಿಗಳಲ್ಲಿ ಈ ಅದಾಲತ್ ಆಯೋಜಿಸಲಾಗಿದೆ.ಕಲಬುರಗಿ ವಿಭಾಗ ವ್ಯಾಪ್ತಿಯ ಬಳ್ಳಾರಿ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯ ನಿವೃತ್ತಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು, ಜಿಪಿಎಫ್ ಚಂದಾದಾರರು ಸಂಬಂಧಿಸಿದ ಆಯಾ ಜಿಲ್ಲಾಡಳಿತ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನ ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣೆ ಖಜಾನೆಯ ಅಪರ ನಿರ್ದೇಶಕರು ಹಾಗೂ ಮಹಾಲೇಖಪಾಲರ ಕಚೇರಿಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಈ ಅದಾಲತ್ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಂಚಣಿ ಪಾವತಿಗೆ ಸಂಬಂಧಿಸಿದಂತೆ ವಿಳಂಬ ಅಥವಾ ಇತರೆ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಅದಾಲತ್ ನ ಈ ಸುವರ್ಣಾವಕಾಶ ಬಳಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಕೆಯ ಅವಧಿ ಮೇ 16ರವರೆಗೆ ವಿಸ್ತರಣೆ

2025-26ನೇ ಸಾಲಿನ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುವ “ಶುಲ್ಕ ಮರುಪಾವತಿ” ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ.ಪೋಷಕರು, ವಿದ್ಯಾರ್ಥಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಮನವಿಯ ಮೇರೆಗೆ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಹಿಂದೆ ನಿಗದಿಪಡಿಸಿದ್ದ ದಿನಾಂಕವನ್ನು ಮೇ 16 ರವರೆಗೆ ವಿಸ್ತರಿಸಲಾಗಿದೆ.

ಅನ್ವಯವಾಗುವ ಕೋರ್ಸ್

ಈ ಸೌಲಭ್ಯವು ಬಿ.ಆರ್ಕ್, ಎಂ.ಸಿ.ಎ, ಎಂ.ಸಿ.ಎಚ್ (ವೈದ್ಯಕೀಯ), ಎಂ.ಡಿ, ಎಂ.ಎಸ್ (ಮಾಸ್ಟರ್ ಆಫ್ ಸರ್ಜರಿ), ಎಂ.ಎಸ್, ಎಂ.ಎಸ್ಸಿ (ಅಲೈಡ್ ಸೈನ್ಸಸ್), ಎಂ.ಪಿ.ಟಿ (ಫಿಸಿಯೋಥೆರಪಿ), ಎಂ.ಎಚ್.ಎ, ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್, ಎಂ.ಪಿ.ಎಚ್ (ಅಲೈಡ್ ಸೈನ್ಸಸ್), ಎಂ.ಎಸ್ಸಿ. ನರ್ಸಿಂಗ್, ಎಂ.ಎಸ್ಸಿ, ಎಂ.ಟೆಕ್, ಎಂಬಿಎ, ಎಂಬಿಎ ಫಿನ್‌ಟೆಕ್, ಎಂಬಿಎ (ಲಾಜಿಸ್ಟಿಕ್ ಮ್ಯಾನೇಜ್‌ಮೆಂಟ್), ಎಂಬಿಬಿಎಸ್, ಎಂಎಸ್ ಆಯುರ್ವೇದ ಎಂಡಿ (ಆಯುರ್ವೇದ), ಎಂಡಿ (ಹೋಮ್), ಎಂಡಿಎಸ್, ಪಿಜಿ ಡಿಪ್ಲೊಮಾ ಇನ್ ಡೆಂಟಲ್, ಫಾರ್ಮ್.ಡಿ (ಪೋಸ್ಟ್ ಬ್ಯಾಕಲೌರಿಯೇಟ್), ಎಂ.ಫಾರ್ಮ್, ಬಿ.ಇ, ಬಿ.ಟೆಕ್, ಬಿ.ಎಸ್ಸಿ(ಆನರ್ಸ್), ಬಿ.ವಿ.ಎಸ್ಸಿ ಮತ್ತು ಎಎಚ್, ಬಿಎಎಂಎಸ್ (ಆಯುರ್ವೇದ), ಬಿಎಚ್‌ಎಂಎಸ್ (ಹೋಮಿಯೋಪತಿ), ಬಿಎನ್‌ವೈಎಸ್ (ಯೋಗ ಮತ್ತು ಪ್ರಕೃತಿ ಚಿಕಿತ್ಸೆ), ಬುಲ್ವಿಎಸ್ (ಯುನಾನಿ), ಬಿಎಎಂಎಸ್, ಬಿಡಿಎಸ್, ಎಂ.ಆರ್ಕ್, ಬಿ.ಎಫ್.ಎಸ್ಸಿ, ಬಿ.ಫಾರ್ಮ್, ಫಾರ್ಮ್.ಡಿ, ಬಿ.ಎಸ್ಸಿ (ಅಲೈಡ್ ಸೈನ್ಸಸ್), ಬಿಪಿಟಿ (ಫಿಸಿಯೋಥೆರಪಿ), ಆಕ್ಯುಪೇಷನಲ್ ಥೆರಪಿಯಲ್ಲಿ ಪದವಿ, ಬಿ.ಡಿ.ಎಸ್. ಬಿ.ಎಸ್ಸಿ.(ನರ್ಸಿಂಗ್), ಬಿ.ಎಸ್ಸಿ(ಪೋಸ್ಟ್ ಈಸಿಕ್), ಬಿ.ಎಡ್, ಬಿ.ಪ್ಲಾನ್, ಡಿಎಂ (ವೈದ್ಯಕೀಯ), ಎಂ.ಫಿಲ್, ಬಿ ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಪೂರ್ಣ ಸ್ಟಾö್ಯಕ್ ಅಭಿವೃದ್ಧಿ), ಬಿ.ಟೆಕ್ ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್ ಎಂಜಿನಿಯರಿಗ್ (ಎಲೆಕ್ಟಿಕ್ ವೆಹಿಕಲ್ ಟೆಕ್ನಾಲಜಿ), ಪಿ.ಎಚ್‌ಡಿ, ಪ್ಯಾರಾಮೆಡಿಕಲ್ ಕೋರ್ಸ್ಗಳು ಮತ್ತು ಎಲ್ಲಾ ಡಿಪ್ಲೋಮಾ ಕೋರ್ಸ್ಗಳು ಸೇರಿದಂತೆ ವಿವಿಧ ವೃತ್ತಿಪರ ಮತ್ತು ಪದವಿ/ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ.

ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಥವಾ ತಾಂತ್ರಿಕ ತೊಂದರೆಗಳಿದ್ದಲ್ಲಿ ಇಲಾಖಾ ಸಹಾಯವಾಣಿ ಮೊ.8050770004 ಹಾಗೂ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾAಶ ಸಹಾಯವಾಣಿ 1902 ಗೆ ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular