HomeKarnatakaಬೆಳಗಾವಿ-ಮುಂಬೈ, ಬೆಳಗಾವಿ-ನವಿ ಮುಂಬೈ ನೇರ ವಿಮಾನ, ವೇಳಾಪಟ್ಟಿ

ಬೆಳಗಾವಿ-ಮುಂಬೈ, ಬೆಳಗಾವಿ-ನವಿ ಮುಂಬೈ ನೇರ ವಿಮಾನ, ವೇಳಾಪಟ್ಟಿ

ಕುಂದಾನಗರಿ ಬೆಳಗಾವಿ ಜನರಿಗೆ ಸಿಹಿಸುದ್ದಿ. ಬೆಳಗಾವಿ-ಮುಂಬೈ ಮತ್ತು ನವಿ ಮುಂಬೈ-ಬೆಳಗಾವಿ ವಿಮಾನ ಸೇವೆಗಳು ಮಾರ್ಚ್‌ 29ರಿಂದ ಆರಂಭವಾಗಲಿವೆ. ಗಡಿನಾಡಿನ ಜನರು ಸುಲಭವಾಗಿ ದೇಶದ ವಾಣಿಜ್ಯ ನಗರಿಗೆ ಪ್ರಯಾಣ ಮಾಡಬಹುದು.

ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಬೆಳಗಾವಿ-ಮುಂಬೈ ನಡುವೆ ನೇರ ವಿಮಾನ ಸೇವೆಯನ್ನು ಪ್ರತಿದಿನ ನೀಡಲಿದೆ. ಇಂಡಿಗೋ ಸಂಸ್ಥೆ ನವಿ ಮುಂಬೈ-ಬೆಳಗಾವಿ ನಡುವಿನ ವಿಮಾನ ಸೇವೆ ಆರಂಭಿಸಲಿದೆ.

ಈ ವಿಮಾನದ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಜನರು ವಿಮಾನಯಾನ ಸಂಸ್ಥೆಗಳ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಟಿಕೆಟ್ ಬುಕ್ ಮಾಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಮಾನದ ವೇಳಾಪಟ್ಟಿ

  •  ಬೆಳಗಾವಿ-ಮುಂಬೈ ಸ್ಟಾರ್ ಏರ್ ವಿಮಾನ. ಬೆಳಗ್ಗೆ 7.20ಕ್ಕೆ ಬೆಳಗಾವಿ ನಿರ್ಗಮನ, ಮುಂಬೈಗೆ 8.25ಕ್ಕೆ ತಲುಪಲಿದೆ.
  • ಮುಂಬೈ-ಬೆಳಗಾವಿ. ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ. ಸಂಜೆ 7.45 ನಿರ್ಗಮನ, ರಾತ್ರಿ 8.50ಕ್ಕೆ ಬೆಳಗಾವಿಗೆ ಆಗಮನ.
  • ಮಂಗಳವಾರ ಮತ್ತು ಗುರುವಾರ. ಸಂಜೆ 8.40ಕ್ಕೆ ನಿರ್ಗಮನ, ರಾತ್ರಿ 9.45ಕ್ಕೆ ಬೆಳಗಾವಿಗೆ ಆಗಮನ.
  • ನವಿ ಮುಂಬೈ-ಬೆಳಗಾವಿ ವಿಮಾನ. ಬೆಳಗ್ಗೆ10.20ಕ್ಕೆ ನಿರ್ಗಮನ, ಬೆಳಗಾವಿಗೆ ಬೆಳಗ್ಗೆ 11.45ಕ್ಕೆ ಆಗಮನ.
  • ಬೆಳಗಾವಿ- ನವಿ ಮುಂಬೈ ವಿಮಾನ. ಸಂಜೆ 5.35ಕ್ಕೆ ನಿರ್ಗಮನ, ಸಂಜೆ 6.50ಕ್ಕೆ ಆಗಮನ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular