HomeKarnatakaBIG NEWS: ಬೆಳಗಾವಿ ನೈತಿಕ ಪೊಲೀಸ್ ಗಿರಿ ಕೇಸ್; 7 ಆರೋಪಿಗಳು ಪೊಲೀಸ್ ವಶಕ್ಕೆ; 17...

BIG NEWS: ಬೆಳಗಾವಿ ನೈತಿಕ ಪೊಲೀಸ್ ಗಿರಿ ಕೇಸ್; 7 ಆರೋಪಿಗಳು ಪೊಲೀಸ್ ವಶಕ್ಕೆ; 17 ಜನರ ವಿರುದ್ಧ FIR ದಾಖಲು

ಬೆಳಗಾವಿ: ಬೇರೆ ಬೇರೆ ಕೋಮಿನ ಯುವಕ-ಯುವತಿ ಎಂದು ತಪ್ಪಾಗಿ ಭಾವಿಸಿ ಸಹೋದರ ಹಾಗೂ ಸಹೋದರಿ ಮೇಲೆಯೇ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯುವನಿಧಿ ಅರ್ಜಿ ಸಲ್ಲಿಸಲೆಂದು ಬಂದಿದ್ದ ಅಕ್ಕ-ತಮ್ಮನ ಮೇಲೆ ಯುವಕರ ಗುಂಪು ಹಿಂದೂ-ಮುಸ್ಲಿಂ ಪ್ರೇಮಿಗಳು ಎಂದು ತಪ್ಪು ತಿಳಿದು ಯುವಕ-ಯುವತಿಯನ್ನು ಹಿಡಿದು ಯುವಕರ ಗ್ಯಾಂಗ್ ಒಂದು ಥಳಿಸಿತ್ತು. ಅಲ್ಲದೇ ಯುವತಿ ಕುಟುಂಬದವರಿಗೆ ಕರೆ ಮಾಡಿ ಇಬ್ಬರು ಅಕ್ಕ-ತಮ್ಮ ಎಂದು ಹೇಳಿದರೂ ಯುವಕ-ಯುವತಿಯನ್ನು ಬಿಡದೇ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದರು.

ಕುಟುಂಬದಿಂದ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಮೊಬೈಲ್ ಲೊಕೇಷನ್ ಆಧರಿಸಿ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕ ಹಾಗೂ ಯುವತಿಯನ್ನು ರಕ್ಷಿಸಿದ್ದರು. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ನಡುವೆ ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಅಕ್ಕ-ತಮ್ಮನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 7 ಜನರನ್ನು ವಶಕ್ಕೆ ಪಡೆಯಲಾಗಿದೆ. 17 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular