HomeIndiaಪ್ರಧಾನಿ ಮೋದಿ ಜೊತೆಗಿನ ಅಪರೂಪದ ಫೋಟೋ ಶೇರ್‌ ಮಾಡಿದ ಡಿಸ್ಕವರಿ ಚಾನೆಲ್‌ ನಿರೂಪಕ

ಪ್ರಧಾನಿ ಮೋದಿ ಜೊತೆಗಿನ ಅಪರೂಪದ ಫೋಟೋ ಶೇರ್‌ ಮಾಡಿದ ಡಿಸ್ಕವರಿ ಚಾನೆಲ್‌ ನಿರೂಪಕ

ನವದೆಹಲಿ: ‘ಮ್ಯಾನ್ ವರ್ಸಸ್ ವೈಲ್ಡ್’ ಎಂಬ ಜನಪ್ರಿಯ ಟಿವಿ ಕಾರ್ಯಕ್ರಮದ ನಿರೂಪಕ ಬೇರ್ ಗ್ರಿಲ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇರುವ ಫೋಟೋ ಶೇರ್‌ ಮಾಡಿಕೊಂಡಿದ್ದು ಅದೀಗ ವೈರಲ್‌ ಆಗಿದೆ.

ಈ ಚಿತ್ರವು ಆಗಸ್ಟ್ 2019 ರಲ್ಲಿ ತೆಗೆದದ್ದಾಗಿದೆ. ಆಗಸ್ಟ್ 2019 ರಲ್ಲಿ, ಪ್ರಧಾನಿ ಮೋದಿ ಡಿಸ್ಕವರಿ ಚಾನೆಲ್‌ನ ʼಮ್ಯಾನ್ Vs ವೈಲ್ಡ್ ವಿತ್ ಬೇರ್ ಗ್ರಿಲ್ಸ್ʼ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆಗ ತೆಗೆದಿರುವ ಫೋಟೋ ಇದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟ್ವಿಟರ್‌ನಲ್ಲಿ ಈ ಫೋಟೋ ಶೇರ್‌ ಮಾಡಿಕೊಂಡಿದ್ದು, ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಿದ ಕಾರ್ಯಕ್ರಮದ ಫೋಟೋ ಎಂದಯ ಹೇಳಿದ್ದಾರೆ.

“ಭಾರತದ ಪ್ರಧಾನ ಮಂತ್ರಿಯೊಂದಿಗೆ ಮಳೆಕಾಡಿನಲ್ಲಿನ ಸಾಹಸದ ನೆನಪು ಇದು ! ನನಗೆ ತಿಳಿದಿರುವ ಎರಡು ವಿಷಯಗಳು: ಕಾಡು ಯಾವಾಗಲೂ ಮಹಾನ್ ಆಗಿರುತ್ತದೆ ಮತ್ತು ನನ್ನ ತೆಪ್ಪವು ಖಂಡಿತವಾಗಿಯೂ ಸೋರಿಕೆಯಾಗುತ್ತಿತ್ತು” ಎಂದು ಅವರು ಬರೆದುಕೊಂಡಿದ್ದಾರೆ.

ನೀಲಿ ಪ್ಲಾಸ್ಟಿಕ್ ಶೀಟ್‌ನಿಂದ ಮುಚ್ಚಿದ ಸಣ್ಣ ದೋಣಿಯಲ್ಲಿ ಪ್ರಧಾನಿ ಮೋದಿ ಕುಳಿತಿದ್ದಾರೆ. ಇಬ್ಬರೂ ಸಂಭಾಷಣೆಯಲ್ಲಿ ತೊಡಗಿರುವುದನ್ನು ಕಾಣಬಹುದು.

For Latest News Updates, Join Our Whatsapp Community🚩
RELATED ARTICLES

Most Popular