ಅಡುಗೆ ಎಣ್ಣೆ ಆಯ್ಕೆ ಮಾಡುವಾಗ ವಹಿಸಿ ಎಚ್ಚರ……!

ಅಡುಗೆಯಲ್ಲಿ ಎಣ್ಣೆ ಬಳಕೆ ಮಾಡದಿದ್ದರೆ ಅಡುಗೆ ಪರಿಪೂರ್ಣವಾಗುವುದಿಲ್ಲ. ಭಾರತದಲ್ಲಿ ವಿವಿಧ ಪ್ರದೇಶಗಳಲ್ಲಿ ವಿಧ ವಿಧವಾದ ಆಹಾರ ಪದಾರ್ಥ ತಯಾರಿಸುತ್ತಿದ್ದರೂ ಎಲ್ಲರೂ ಅಡುಗೆಗೆ ಬಳಸುವುದು ಎಣ್ಣೆಯನ್ನೇ.

ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆ ಬಳಕೆ ಮಾಡಿದರೆ ದಕ್ಷಿಣದಲ್ಲಿ ಶೇಂಗಾ, ಸೂರ್ಯಕಾಂತಿ, ಕೊಬ್ಬರಿ ಎಣ್ಣೆ ಬಳಕೆ ಮಾಡುತ್ತಾರೆ. ಹಾಗೆಯೇ ಪಶ್ಚಿಮದಲ್ಲಿ ಹತ್ತಿ ಎಣ್ಣೆಯ ಬಳಕೆ ಹೆಚ್ಚು. ಯಾವುದೇ ಅಡುಗೆ ಎಣ್ಣೆಯಾದರೂ ಅದರ ಬಳಕೆ ಕಡಿಮೆ ಮಾಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದಕ್ಕೆ ಕಾರಣ ಕೊಲೆಸ್ಟ್ರಾಲ್. ಆದರೂ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಬೇಡಿಕೆ ಹೆಚ್ಚಾಗುತ್ತಲೇ ಇದೆ.

ಆದರೆ ಒಂದೇ ವಿಧವಾದ ಎಣ್ಣೆ ಉಪಯೋಗಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಕಾರಣವೇನೆಂದರೆ ಒಂದೇ ಬಗೆಯ ಎಣ್ಣೆಯನ್ನು ಉಪಯೋಗಿಸುವುದರಿಂದ ಆ ಎಣ್ಣೆಯ ಕೊಬ್ಬು ದೇಹದಲ್ಲಿ ಶೇಖರಣೆಗೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ಆಗಾಗ ಎಣ್ಣೆ ಬದಲಾಯಿಸಿ ಅಡುಗೆಗೆ ಬಳಸುವುದರಿಂದ ಶೇಖರಗೊಂಡ ಕೊಬ್ಬು ನಿವಾರಣೆಯಾಗುತ್ತದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read