ಬೆಂಗಳೂರು: ಬೆಂಗಳೂರಿನಲ್ಲಿ ಭೂಗಳ್ಳರ ವಿರುದ್ಧ ಬಿಡಿಎ ಗದಾಪ್ರಹಾರ ನಡೆಸಿದೆ. ಅನಧಿಕೃತವಾಗಿ ನಿರ್ಮಿಸಿದ ಮನೆಗಳನ್ನು ಬಿಡಿಎ ತೆರವುಗೊಳಿಸಿದೆ.
ಜೆಸಿ ನಗರದ ಒಂಬತ್ತನೇ ಹಂತದ ಬಡಾವಣೆಯಲ್ಲಿನ ಆಸ್ತಿ ವಶಕ್ಕೆ ಪಡೆಯಲಾಗಿದೆ. 130 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿ ಹಾಗೂ ಆಲಹಳ್ಳಿಯ ಸರ್ವೆ ನಂಬರ್ 20ರಲ್ಲಿ ಅನಧಿಕೃತವಾಗಿ ಮನೆಗಳ ನಿರ್ಮಾಣ ಮಾಡಲಾಗಿತ್ತು. ಮೂರು ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿದ್ದರು. ಇವನ್ನು ತೆರವುಗೊಳಿಸಿ ಬಿಡಿಎ ಆಸ್ತಿ ವಶಕ್ಕೆ ಪಡೆದುಕೊಂಡಿದೆ.

