ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಖಾದಿ ಬಟ್ಟೆ, ಸಿದ್ಧ ಉಡುಪು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ತಿಳಿಸಿದೆ.
ದಿನಾಂಕ:07-02-2026ರಿಂದ ಶನಿವಾರ ಜಿಲ್ಲಾಧಿಕಾರಿಯವರ ಕಛೇರಿ ಆವರಣದಲ್ಲಿ ತಾತ್ಕಾಲಿಕವಾಗಿ ಒಂದು ದಿನ ಮಳಿಗೆ ತೆರೆದು ವ್ಯಾಪಾರ ನಡೆಸಲಾಗುವುದು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯವರ ಸತ್ತೋಲೆ ದಿನಾಂಕ:27-01-2026 ರ ಮೇರೆಗೆ ಎಲ್ಲಾ ಸರ್ಕಾರಿ ನೌಕರರು ತಿಂಗಳ ಮೊದಲ ಶನಿವಾರದಂದು ಖಾದಿ ಬಟ್ಟೆ ಧರಿಸುವ ಸಂಬಂಧ ಆದೇಶವಾಗಿರುತ್ತದೆ. ತಮ್ಮೊಂದಿಗೆ ಖಾದಿ ಮಂಡಳಿಯ ಅಧಿಕಾರಿಗಳು ದಿನಾಂಕ 05-02-2026ರಂದು ಚರ್ಚಿಸಿದಂತೆ ಪ್ರಾಥಮಿಕ ಹಂತವಾಗಿ ದಿನಾಂಕ:07-02-2026 ರಂದು ಬೆಳಗ್ಗೆ 10.00 ರಿಂದ 5.30 ರವರೆಗೆ ಈ ಪತ್ರದಲ್ಲಿ ಲಗತ್ತಿಸಿರುವ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಖಾದಿ ಬಟ್ಟೆ ಮತ್ತು ಸಿದ್ದ ಉಡುಪುಗಳನ್ನು ಮಾರಾಟ ಮಾಡಲು ಜಿಲ್ಲೆಯಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ.
ಆದ್ದರಿಂದ ಸಂಬಂಧಪಟ್ಟ ಜಿಲ್ಲೆಗಳಲ್ಲಿ ತಮ್ಮ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಿ ಖಾದಿ ಸಿದ್ದ ಉಡುಪುಗಳ ಮಾರಾಟದಲ್ಲಿ ಪಾಲ್ಗೊಂಡು ಖರೀದಿ ಮಾಡಿಕೊಳ್ಳವಂತೆ ತಾವು ಸೂಚನೆಯನ್ನು ನೀಡಿ ಕಾರ್ಯಕ್ರಮ ಯಶಸ್ವಿಯಾಗಲು ಕೈಜೋಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಂತಿಸಿದ್ದಾರೆ.


