HomeKarnatakaBIG NEWS: ರಥೋತ್ಸವದ ವೇಳೆ ದುರಂತ; ರಥದ ಗಾಲಿಗೆ ಸಿಲುಕಿ ವ್ಯಕ್ತಿ ದುರ್ಮರಣ

BIG NEWS: ರಥೋತ್ಸವದ ವೇಳೆ ದುರಂತ; ರಥದ ಗಾಲಿಗೆ ಸಿಲುಕಿ ವ್ಯಕ್ತಿ ದುರ್ಮರಣ

ಗದಗ: ಬಸವೇಶ್ವರ ಜಾತ್ರಾ ಮಹೋತ್ಸವದ ವೇಳೆ ದುರಂತ ಸಂಭವಿಸಿದ್ದು, ರಥೋತ್ಸವದ ವೇಳೆ ರಥದ ಗಾಲಿಗೆ ಸಿಲುಕಿ ಭಕ್ತರೊಬ್ಬರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದಲ್ಲಿ ನಡೆದಿದೆ.

42 ವರ್ಷದ ಯಲ್ಲಪ್ಪ ಗೌಡ ಮೃತ ದುರ್ದೈವಿ. ಜಾತ್ರಾ ಮಹೋತ್ಸವದಲ್ಲಿ ರಥ ಎಳೆಯುವ ವೇಳೆ ನೂಕು ನುಗ್ಗಲುವುಂಟಾಗಿ, ರಥ ಏಕಾಏಕಿ ಮೈಮೇಲೆ ಬಂದಿದ್ದು ಕೆಳಗೆ ಬಿದ್ದಿದ್ದ ವ್ಯಕ್ತಿ ಮೇಲೆಯೇ ಹರಿದು ಹೋಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular