HomeKarnatakaBIG NEWS: ಹಣಕಾಸಿನ ವ್ಯವಹಾರವಾಗಿದ್ದರೂ ಮುನಿಗಳ ಹತ್ಯೆ ಆಗಿದ್ದೇಕೆ?; ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನೆ

BIG NEWS: ಹಣಕಾಸಿನ ವ್ಯವಹಾರವಾಗಿದ್ದರೂ ಮುನಿಗಳ ಹತ್ಯೆ ಆಗಿದ್ದೇಕೆ?; ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನೆ

ಬೆಂಗಳೂರು: ಜೈನಮುನಿ ಹತ್ಯೆ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಐಸಿಸ್ ಉಗ್ರರು ಮಾಡುವುದಕ್ಕಿಂತ ಅತ್ಯಂತ ಹೇಯ ಕೃತ್ಯವೆಸಗಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಕುರಿತು ವಿಷಯ ಪ್ರಸ್ತಾಪಿಸಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಜೈನಮುನಿ ಹತ್ಯೆ ಖಂಡನೀಯ. ಉಗ್ರರ ಕೃತ್ಯಕ್ಕಿಂತ ಅತ್ಯಂತ ಹೇಯವಾಗಿ ಹತ್ಯೆ ಗೈದಿದ್ದಾರೆ. ಇಂತಹ ಘಟನೆ ಮತ್ತೆಂದೂ ಮರುಕಳಿಸಬಾರದು ಆ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೈನಮುನಿಗಳಿಗೆ ಅತ್ಯಂತ ಹತ್ತಿರವಿದ್ದವರೇ ಕೊಲೆ ಮಾಡಿದ್ದಾರೆ. ಮುನಿಗಳಿಗೆ ಎ1 ಆರೋಪಿ ನಾರಾಯಣ್ ಜೊತೆ ಯಾವುದೇ ಹಣದ ವ್ಯವಹಾರವಿಲ್ಲ ಎನ್ನಲಾಗುತ್ತಿದೆ. ಹಣಕಾಸಿನ ವ್ಯವಹಾರವಾಗಿದ್ದರೂ ಮುನಿಗಳ ಹತ್ಯೆ ಯಾಕೆ ಆಯ್ತು? ಮೂಲವನ್ನು ತನಿಖೆ ಮಾಡದೇ ಇಷ್ಟು ಬೇಗ ಪೊಲೀಸರು ತನಿಖೆ ಮುಗಿಸಿದ ರೀತಿ ಸಾರಾಂಶಕ್ಕೆ ಬಂದಿದ್ದಾರೆ. ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

 

For Latest News Updates, Join Our Whatsapp Community🚩
RELATED ARTICLES

Most Popular