HomeSpecialಬರೇಲಿ: ಖಾಲಿ ಮನೆಯಲ್ಲಿ ನಮಾಜ್‌ : 12 ಮಂದಿ ಪೊಲೀಸ್ ವಶಕ್ಕೆ ವಿಡಿಯೋ ವೈರಲ್

ಬರೇಲಿ: ಖಾಲಿ ಮನೆಯಲ್ಲಿ ನಮಾಜ್‌ : 12 ಮಂದಿ ಪೊಲೀಸ್ ವಶಕ್ಕೆ ವಿಡಿಯೋ ವೈರಲ್

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮೊಹಮ್ಮದ್‌ಗಂಜ್ ಗ್ರಾಮದಲ್ಲಿ ಅನುಮತಿ ಇಲ್ಲದೆ ಖಾಲಿ ಮನೆಯೊಂದರಲ್ಲಿ ನಮಾಜ್ ಪ್ರಾರ್ಥನೆ ಸಲ್ಲಿಸುತ್ತಿದ್ದ 12 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಘಟನೆಯ ಹಿನ್ನೆಲೆ ಏನು?

ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಅನ್ಶಿಕಾ ವರ್ಮಾ ಅವರ ಹೇಳಿಕೆಯಂತೆ, ಗ್ರಾಮದ ಖಾಲಿ ಮನೆಯೊಂದನ್ನು ಕಳೆದ ಕೆಲವು ವಾರಗಳಿಂದ ತಾತ್ಕಾಲಿಕ ಮದರಸಾ ಆಗಿ ಬಳಸಲಾಗುತ್ತಿದೆ ಎಂಬ ದೂರುಗಳು ಗ್ರಾಮಸ್ಥರಿಂದ ಬಂದಿದ್ದವು. ಈ ಮಾಹಿತಿಯನ್ನು ಆಧರಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಾರ್ಥನಾ ಚಟುವಟಿಕೆಯನ್ನು ತಡೆಹಿಡಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾನೂನು ಕ್ರಮದ ಎಚ್ಚರಿಕೆ:

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ಅಂಶಿಕಾ ವರ್ಮಾ ಯಾವುದೇ ಹೊಸ ಧಾರ್ಮಿಕ ಚಟುವಟಿಕೆ ಅಥವಾ ಸಭೆಗಳನ್ನು ಮುನ್ಸೂಚನೆ ಹಾಗೂ ಅನುಮತಿ ಇಲ್ಲದೆ ನಡೆಸುವುದು ಕಾನೂನು ಬಾಹಿರ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಇಂತಹ ಕೃತ್ಯಗಳು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆ:
ವಶಕ್ಕೆ ಪಡೆಯಲಾದ 12 ಮಂದಿಯ ವಿರುದ್ಧ ಶಾಂತಿ ಭಂಗದ ಪ್ರಕರಣ ದಾಖಲಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಸದ್ಯ ಅವರಿಗೆ ಜಾಮೀನು ಮಂಜೂರಾಗಿದೆ. ಪೊಲೀಸರ ತನಿಖೆಯ ಪ್ರಕಾರ ಪ್ರಾರ್ಥನೆ ನಡೆದ ಮನೆ ಹನೀಫ್ ಎಂಬುವವರಿಗೆ ಸೇರಿದ್ದಾಗಿದೆ.ತಘಟನೆಯ ವೇಳೆ ಒಟ್ಟು 15 ಮಂದಿ ಇದ್ದು, ಮೂವರು ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ ಘಟನೆ ಇದೀಗ ರಾಜಕೀಯ ತಿರುವು ಪಡೆದಿದೆ. ಕಾಂಗ್ರೆಸ್ ನಾಯಕಿ ಡಾ. ಶಮಾ ಮೊಹಮ್ಮದ್ ಅವರು ಉತ್ತರ ಪ್ರದೇಶ ಪೊಲೀಸರ ಕ್ರಮದ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮ ಸ್ವಂತ ಮನೆಯೊಳಗೆ ನಮಾಜ್ ಮಾಡಿದ ಕಾರಣಕ್ಕೆ ಅವರನ್ನು ಬಂಧಿಸಿರುವುದು ಯಾವ ಕಾನೂನಿನ ಅಡಿಯಲ್ಲಿ? ರಾಜ್ಯದಲ್ಲಿರುವ ಎಲ್ಲಾ ಅಪರಾಧಿಗಳನ್ನು ಈಗಾಗಲೇ ನಿಯಂತ್ರಿಸಲಾಗಿದೆಯೇ? ಪೊಲೀಸರು ಪ್ರಾರ್ಥನೆ ಮಾಡುವ ಸಾಮಾನ್ಯ ನಾಗರಿಕರನ್ನು ಭಯಭೀತಗೊಳಿಸುವ ಕೆಲಸ ಮಾಡುತ್ತಿದಾರೆಯೇ?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular