HomeSportsಟಿ-20 ವಿಶ್ವಕಪ್ ಮತ್ತು ಬಾಂಗ್ಲಾದೇಶ ತಂಡದ ಹಿಟ್ ವಿಕೆಟ್!

ಟಿ-20 ವಿಶ್ವಕಪ್ ಮತ್ತು ಬಾಂಗ್ಲಾದೇಶ ತಂಡದ ಹಿಟ್ ವಿಕೆಟ್!

ಅಂತಿಮವಾಗಿ ಬಾಂಗ್ಲಾದೇಶ ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯಿಂದ ಹೊರ ಹೋಗಿದೆ. ಭಾರತ ಮತ್ತು ಶ್ರೀಲಂಕಾ ಆಯೋಜಿಸುತ್ತಿರುವ ಟಿ-20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಬದಲು ಸ್ಕಾಟ್ಲೆಂಡ್ ಆಡಲಿದೆ.

ರಾಜಕೀಯ ಕಾರಣ, ಚುನಾವಣೆಗಳ ಮೇಲೆ ಕಣ್ಣಿಟ್ಟು ಸ್ಥಳೀಯ ಮತದಾರರ ಓಲೈಕೆಗೆ ಹೋದ ತಂಡ ಪಾಕಿಸ್ತಾನದ ಬೆಂಬಲ ಪಡೆದರೂ ಸಹ ಐಸಿಸಿ ಅಸಮಾಧಾನಕ್ಕೆ ಕಾರಣವಾಗಿ ಟೂರ್ನಿಯಿಂದ ದೂರವಾಗಿದೆ ಮತ್ತು ಭಾರೀ ನಷ್ಟ ಅನುಭವಿಸಿದೆ. ಇದು ಹಣ ಮತ್ತು ಉತ್ತಮ ಅವಕಾಶವನ್ನು ಕೈ ಚೆಲ್ಲಿದಂತೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜಕೀಯದಕ್ಕೆ ಕ್ರೀಡೆ ಬಲಿ: ಇವೆಲ್ಲವೂ ಪ್ರಾರಂಭವಾಗಿದ್ದು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್‌ನಿಂದ ಮುಸ್ತಫಿಜುರ್ ರಹಮಾನ್ ಅವರನ್ನು ಬಿಡುಗಡೆ ಮಾಡಿದ ಬಳಿಕ. ಬಿಸಿಸಿಐ ಈ ಕುರಿತು ಐಸಿಸಿಗೆ ಕೇಳಿಕೊಂಡಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಂಗ್ಲಾದೇಶವು ಇದನ್ನು ರಾಷ್ಟ್ರೀಯ ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿತು. ಅವರು ಐಸಿಸಿಗೆ ಬೆದರಿಕೆ ಹಾಕಿದರು ಮತ್ತು ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಆಡುವುದಿಲ್ಲ. ಪಂದ್ಯಗಳನ್ನು ಸ್ಥಳಾಂತರಿಸದಿದ್ದರೆ ತಂಡ ಭಾರತಕ್ಕೆ ಪ್ರಯಾಣ ಮಾಡುವುದಿಲ್ಲ ಎಂದು ಹಠ ಹಿಡಿದರು.

ಇದು ಅವರು  ಮಾಡಿದ ದೊಡ್ಡ ತಪ್ಪು. ಬಾಂಗ್ಲಾದೇಶ ಮುಸ್ತಫಿಜುರ್ ವಿಷಯಕ್ಕಾಗಿ ಬಿಸಿಸಿಐಯನ್ನು ಗುರಿಯಾಗಿಸಿಕೊಂಡಿದ್ದರೆ ಸರಿ. ಆದರೆ ಅವರು ವಿಶ್ವ ಕ್ರಿಕೆಟ್ ಎದುರಿಸಲು ಹೋದರು. ಆದ್ದರಿಂದ ಟೂರ್ನಿಯಿಂದ ಹೊರ ಹೋಗುವ ಮೂಲಕ ನಷ್ಟ ಅನುಭವಿಸಿದೆ.

ಪಾಕಿಸ್ತಾನವನ್ನು ಹೊರತುಪಡಿಸಿ ಪ್ರತಿಯೊಬ್ಬರನ್ನು ಬಾಂಗ್ಲಾದೇಶ ಈಗ ದೂರ ಮಾಡಿಕೊಂಡಿದೆ. ಬಾಂಗ್ಲಾದೇಶ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಹೋರಾಟವು ಈಗ ಬಾಂಗ್ಲಾದೇಶ ಮತ್ತು ಉಳಿದವರ ನಡುವಿನ ಹೋರಾಟವಾಗಿದೆ.

ಈ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲು ವಿಫಲರಾದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ತಮ್ಮ ರಾಜಕೀಯವನ್ನು ಮುಂದುವರಿಸಿದರು ಮತ್ತು ಈ ವಿಷಯವನ್ನು ಕ್ರಿಕೆಟ್ ಮತ್ತು ರಾಷ್ಟ್ರೀಯ ಪ್ರತಿಷ್ಠೆಯ ನಡುವೆ ತಂದರು.

ಕ್ರಿಕೆಟ್ ಮೊದಲು ಅಥವಾ ರಾಷ್ಟ್ರ  ಮೊದಲು ಎಂಬ ಘೋಷಣೆಯನ್ನು ಮಾಡಿದರು. ಇದು ಎರಡು ತಪ್ಪು ಹೆಜ್ಜೆ ಆಗಿದೆ. ಸರ್ಕಾರಿ ಪ್ರತಿನಿಧಿ ಒಂದು ಕ್ರೀಡಾ ಸಮಸ್ಯೆಯನ್ನು ಏಕೆ ಪ್ರತಿನಿಧಿಸಬೇಕು?. ಪ್ರತಿಯೊಂದು ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಸಾರ್ವಜನಿಕವಾಗಿ ಏಕೆ ಹೇಳಬೇಕು?.

ಅಂತರರಾಷ್ಟ್ರೀಯ ಕ್ರೀಡಾ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಇಲ್ಲಿಗೆ ಬಂದು ನಿಂತಿದೆ. ಕ್ರೀಡೆಯನ್ನು ಹೇಗೆ ನಿರ್ವಹಿಸಬೇಕು? ಎಂಬುದರ ಮೂಲಭೂತ ಅಂಶಗಳು ತಿಳಿದಿಲ್ಲವೇ?. ಅವರು ಮಾಡಿದ ತಪ್ಪಿನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿ ಐಸಿಸಿಗೆ ಸವಾಲು ಹಾಕಿದ್ದು ಒಂದಾಗಿದೆ. ಐಸಿಸಿ ಆಡಳಿತ ಮಂಡಳಿಯು ಬಾಂಗ್ಲಾದೇಶಕ್ಕೆ ಪ್ರತಿಕ್ರಿಯಿಸಲು 24 ಗಂಟೆಗಳ ಕಾಲಾವಕಾಶವನ್ನು ನೀಡಿತ್ತು.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷರು ಮತ್ತು ಕ್ರೀಡಾ ಸಲಹೆಗಾರರು ಬಾಂಗ್ಲಾದೇಶಕ್ಕೆ ಅನ್ಯಾಯವಾಗಿದೆ ಎಂದು ಐಸಿಸಿಗೆ ಹೇಳಿದರು. ಪಾಕಿಸ್ತಾನದ ಬೆಂಬಲವನ್ನು ಪಡೆದು ತಮ್ಮ ಹಠ ಸಾಧಿಸಲು ಮುಂದಾದರು. ಐಸಿಸಿ ಗಡುವು ಮುಗಿಯುವವರೆಗೆ ಕಾಯುತ್ತಿತ್ತು. ಬಳಿಕ ಬಾಂಗ್ಲಾದೇಶವನ್ನು ಹೊರಹಾಕಿ ಸ್ಕಾಟ್ಲೆಂಡ್‌ಗೆ ಅವಕಾಶ ನೀಡಿತು.

ತಮ್ಮ ಭಾರತ ವಿರೋಧಿ ನೀತಿಗಾಗಿ ಬಿಸಿಬಿಯನ್ನು ಬಳಕೆ ಮಾಡಿಕೊಂಡರು. ರಾಜಕೀಯ ಮತ್ತು ಕ್ರೀಡೆಯನ್ನು ಒಟ್ಟಾಗಿ ಸೇರಿಸಿದರು. ಐಸಿಸಿ ಪಾಕಿಸ್ತಾನದ ವಾದಕ್ಕೂ ಬೆಂಬಲ ನೀಡಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ ತಂಡ ಕ್ರಿಕೆಟ್‌ನಲ್ಲಿ ಒಂದು ಪ್ರಮುಖ ಅವಕಾಶವನ್ನು ಕಳೆದುಕೊಂಡಿತು.

ಈಗ ಐಸಿಸಿ ಬಾಂಗ್ಲಾದೇಶದ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸುತ್ತದೆಯೇ?. ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ಗೆ ಅನುಮತಿ ನೀಡುತ್ತದೆಯೇ? ಎಂದು ಚರ್ಚೆಗಳು ನಡೆಯುತ್ತಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular