
ಬೆಂಗಳೂರು ವಿವಿ ಆಡಳಿತ ವಿಭಾಗ ಉದ್ದೇಶಪೂರ್ವಕವಾಗಿ ಮೂಲಭೂತ ಸೌಕರ್ಯಗಳನ್ನು ತಡೆಹಿಡಿದಿದೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದು, ನಾಳೆ ವಿವಿ ಬಂದ್ ಗೆ ಕರೆ ನೀಡಲಾಗಿದೆ.
ವಿವಿಯ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳನ್ನು ಈ ಕೂಡಲೇ ನೀಡಬೇಕೆಂದು ವಿವಿಗೆ ಸೂಚಿಸಲು ಉನ್ನತ ಶಿಕ್ಷಣ ಇಲಾಖೆಗೆ ಆಗ್ರಹಿಸಿ ನಾಳೆ (ಜು.11) ಪ್ರತಿಭಟನೆ ನಡೆಸಲು ವಿದ್ಯಾರ್ಥಿಗಳು ನಿರ್ಧರಿಸಿದ್ದು, ತರಗತಿಗಳನ್ನು ಬಹಿಷ್ಕಾರ ಮಾಡಲಿದ್ದಾರೆ.

