HomeLatest NewsBREAKING: ಬೆಂಗಳೂರು: ಬಿರುಗಾಳಿಗೆ ಬೈಕ್ ಸವಾರನ ಮೇಲೆ ಬಿದ್ದ ಮರದ ಕೊಂಬೆ: ಯುವಕನ ಸ್ಥಿತಿ ಗಂಭೀರ

BREAKING: ಬೆಂಗಳೂರು: ಬಿರುಗಾಳಿಗೆ ಬೈಕ್ ಸವಾರನ ಮೇಲೆ ಬಿದ್ದ ಮರದ ಕೊಂಬೆ: ಯುವಕನ ಸ್ಥಿತಿ ಗಂಭೀರ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಜಿಟಿಜಿಟಿ ಮಳೆ, ಮತ್ತೊಂದೆಡೆ ಭಾರಿ ಬಿರುಗಾಳಿ ಬೀಸುತ್ತಿದ್ದು, ಅವಾಂತರಗಳು ಸಂಭವಿಸುತ್ತಿವೆ. ಬಿರುಗಾಳಿ ಹೊಡೆತಕ್ಕೆ ಮರದ ಕೊಂಬೆಯೊಂದು ಬೈಕ್ ಸವಾರನ ಮೇಲೆ ಬಿದ್ದಿರುವ ಘಟನೆ ನಡೆದಿದೆ.

ಬನಶಂಕರಿ 2ನೇ ಹಂತದ ಶ್ರೀನಿವಾಸನಗರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಏಕಾಏಕಿ ಮರದ ಕೊಂಬೆ ಮುರಿದು ಬಿದ್ದಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಕ್ಷಯ್ (29) ಗಾಯಗೊಂಡಿರುವ ಯುವಕ

ಮರದ ಕೊಂಬೆ ಬಿದ್ದ ಹೊಡೆತಕ್ಕೆ ಬೈಕ್ ಸವಾರ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ರಕ್ತದ ಮಡುವಲ್ಲಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಬೈಕ್ ಸವಾರನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular