HomeKarnatakaವ್ಹೀಲಿಂಗ್ ಆಯ್ತು ಈಗ ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿ ಬೈಕ್ ರೇಸ್; ರೀಲ್ಸ್ ಗಾಗಿ ಪುಂಡರ ಹುಚ್ಚಾಟ

ವ್ಹೀಲಿಂಗ್ ಆಯ್ತು ಈಗ ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿ ಬೈಕ್ ರೇಸ್; ರೀಲ್ಸ್ ಗಾಗಿ ಪುಂಡರ ಹುಚ್ಚಾಟ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಇಷ್ಟುದಿವ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆಯುತ್ತಿದ್ದ ಯುವಕರ ಗುಂಪು ಈಗ ರಸ್ತೆ ಮಧ್ಯೆ ಬೈಕ್ ರೇಸ್ ಆರಂಭಿಸಿ ಹುಚ್ಚಾಟ ಮೆರೆದಿದೆ.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕೆಲ ಪುಂಡರ ಗುಂಪು ಸಾರ್ವಜನಿಕರ ವಾಹನಗಳನ್ನು ತಡೆದು ನಿಲ್ಲಿಸಿ ರಸ್ತೆ ಮಧ್ಯೆ ಬೈಕ್ ರೇಸ್ ನಡೆಸಿ ವಿಡಿಯೋ ಮಾಡಿ ಹುಚ್ಚಾಟ ಮೆರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೀಲ್ಸ್ ಗಾಗಿ ಈ ರೀತಿ ಡೆಡ್ಲಿ ಬೈಕ್ ರೇಸ್ ಮಾಡುತ್ತಿರುವುದೂ ಅಲ್ಲದೇ ಸಾರ್ವಜನಿಕರ ವಾಹನಗಳ ಸಂಚಾರಕ್ಕೂ ಅಡ್ಡಿಯುಂಟುಮಾಡುತ್ತಿದ್ದಾರೆ. ಬೈಕ್ ರೇಸ್ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ. ಇಂತಹ ವ್ಹೀಲಿಂಗ್ ಹಾಗೂ ಬೈಕ್ ರೇಸ್ ಮಾಡುವ ಪುಂಡರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular