HomeKarnatakaಬೆಂಗಳೂರು ಹೋಟೆಲ್‍ಗಳಲ್ಲಿ ಮತ್ತಷ್ಟು ದುಬಾರಿಯಾಗಲಿದೆ ತಿಂಡಿ-ಊಟ: ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ!

ಬೆಂಗಳೂರು ಹೋಟೆಲ್‍ಗಳಲ್ಲಿ ಮತ್ತಷ್ಟು ದುಬಾರಿಯಾಗಲಿದೆ ತಿಂಡಿ-ಊಟ: ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ!

ಬೆಂಗಳೂರು- ಜಾಗತಿಕ ಆರ್ಥಿಕ ಬದಲಾವಣೆಗಳು, ಮಧ್ಯಪ್ರಾಚ್ಯದ ಸಂಘರ್ಷದ ನೇರ ಪರಿಣಾಮ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹೋಟೆಲ್ ಉದ್ಯಮದಲ್ಲಿ ಮತ್ತೊಮ್ಮೆ ದರ ಸಮರ ಮುನ್ನೆಲೆಗೆ ಬಂದಿದೆ.

ಹೋಟೆಲ್‍ಗಳಲ್ಲಿ ಸವಿಡಿಯುವ ತಿಂಡಿ ಹಾಗೂ ಊಟದ ದರಗಳು ಮತ್ತಷ್ಟು ಹೆಚ್ಚಳವಾಗುವ ಗಂಭೀರ ಚಿಂತನೆಗಳು ಈಗ ಹೋಟೆಲ್ ಮಾಲೀಕರ ವಲಯದಲ್ಲಿ ನಡೆದಿದೆ. ಅಕ್ಕಿ, ಸಕ್ಕರೆ, ಈರುಳ್ಳಿ ಹಾಗೂ ತರಕಾರಿಗಳ ದರಗಳು ಶೇ. 30 ರಿಂದ 50ರಷ್ಟು ಹೆಚ್ಚಳ ಕಂಡಿದ್ದು, ಅಡುಗೆ ಕೋಣೆಯ ನಿರ್ವಹಣೆ ಕಷ್ಟಕರವಾಗಿದೆ.

ಕಮರ್ಷಿಯಲ್ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮತ್ತು ಪೂರೈಕೆಯಲ್ಲಿನ ಏರಿಳಿತಗಳು ಹೋಟೆಲ್ ನಡೆಸುವುದನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕನಿಷ್ಠ ವೇತನ ಹಾಗೂ ಒಟ್ಟಾರೆ ನಿರ್ವಹಣಾ ವೆಚ್ಚದಲ್ಲಾಗಿರುವ ಭಾರಿ ಏರಿಕೆಯು ಹೋಟೆಲ್ ಉದ್ಯಮದ ಮೇಲೆ ದೊಡ್ಡ ಹೊರೆಯಾಗಿದ್ದು, ಅನಿವಾರ್ಯವಾಗಿ ದರ ಪರಿಷ್ಕರಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಕೋವಿಡ್ ನಂತರದ ಆರ್ಥಿಕ ಕುಸಿತದಿಂದ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದ ಹೋಟೆಲ್ ಉದ್ಯಮಕ್ಕೆ ಒಂದೆಡೆ ಗ್ಯಾಸ್ ಸಿಲಿಂಡರ್ ಹಾಗೂ ದಿನಸಿ ಪದಾರ್ಥಗಳ ಬೆಲೆ ಏರಿಕೆಯ ಬಿಸಿ ತಟ್ಟಿದ್ದರೆ, ಮತ್ತೊಂದೆಡೆ ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಕಚ್ಚಾ ವಸ್ತುಗಳ ಆಮದು ಮತ್ತು ಸ್ಥಳೀಯ ಮಾರುಕಟ್ಟೆ ದರಗಳು ತೀವ್ರವಾಗಿ ಬದಲಾಗಿವೆ.

ಈಗಾಗಲೇ ಕಳೆದ ಕೆಲವು ತಿಂಗಳುಗಳಿಂದ ವಿವಿಧ ಹಂತಗಳಲ್ಲಿ ಕಾಫಿ, ಟೀ ಹಾಗೂ ತಿಂಡಿ-ಊಟದ ಬೆಲೆಗಳು ಅನಿವಾರ್ಯವಾಗಿ ತುಸು ಹೆಚ್ಚಳವಾಗಿದ್ದವು. ಈಗ ಪರಿಸ್ಥಿತಿ ಮತ್ತಷ್ಟು ಬಿಗಿಯಾಗಿದ್ದು, ಮುಂಬರುವ ದಿನಗಳಲ್ಲಿ ದರಗಳು ನಿಯಂತ್ರಣಕ್ಕೆ ಬರದಿದ್ದರೆ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಚಿತ ಎನಿಸಿದೆ.

ಪರಿಣಾಮವಾಗಿ, ಸಾಮಾನ್ಯ ಮಧ್ಯಮ ವರ್ಗದ ಹಾಗೂ ದಿನನಿತ್ಯ ಹೋಟೆಲ್ ಊಟವನ್ನೇ ಅವಲಂಬಿಸಿರುವ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಈ ದರ ಏರಿಕೆಯ ಭೀತಿ ತೀವ್ರ ನೊಂದಿಯನ್ನುಂಟು ಮಾಡಿದ್ದು, ಸರ್ಕಾರದ ಹಸ್ತಕ್ಷೇಪ ಅಥವಾ ಮಾರುಕಟ್ಟೆ ದರಗಳ ಇಳಿಕೆಯೆಡೆಗೆ ಎಲ್ಲರ ಚಿತ್ತ ನೆಟ್ಟಿದೆ.

ಪಶ್ಚಿಮ ಏಷ್ಯಾ ಸಂಘರ್ಷದ ಎಫೆಕ್ಟ್

ಪಶ್ಚಿಮ ಏಷ್ಯಾ ಸಂಘರ್ಷದ ಎಫೆಕ್ಟ್

2026ರ ಮಾರ್ಚ್‌ನಲ್ಲಿ ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮ ವಾಣಿಜ್ಯ LPG ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಂಗಳೂರಿನ ಹೋಟೆಲ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಕೆಲವೆಡೆ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡ ಪರಿಣಾಮ ಹೋಟೆಲ್‌ಗಳು ಮೆನು ಕಡಿತಗೊಳಿಸಿ ಕೇವಲ ಟೀ, ಕಾಫಿ ನೀಡುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಕೆಲವು ಹೋಟೆಲ್ ಮಾಲೀಕರು ಪೂರೈಕೆ ಮುಂದುವರಿಯದಿದ್ದರೆ ಹೋಟೆಲ್ ಬಂದ್ ಮಾಡುವ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಸಿದ್ದರು.

ಆ ಸಂದರ್ಭದಲ್ಲಿ ಉಂಟಾದ ಪೂರೈಕೆ ಬಿಕ್ಕಟ್ಟು ತಗ್ಗಿದರೂ, ಅದರ ಬೆನ್ನಲ್ಲೇ ವಾಣಿಜ್ಯ LPG ದರದಲ್ಲಿ ಭಾರೀ ಏರಿಕೆ ಕಂಡುಬಂದಿತ್ತು. ಮೇ ತಿಂಗಳಲ್ಲಿ ಒಂದೇ ಬಾರಿ ಸಿಲಿಂಡರ್ ದರ ಸುಮಾರು ₹993 ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 19 ಕೆ.ಜಿ. ಸಿಲಿಂಡರ್ ₹3,153ರ ಮಟ್ಟ ತಲುಪಿತ್ತು. ಈ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಆಹಾರ ದರ ಶೇ.10ರವರೆಗೆ ಹೆಚ್ಚಿಸುವ ಚಿಂತನೆ ವ್ಯಕ್ತವಾಗಿತ್ತು.

ತರಕಾರಿ, ಸಕ್ಕರೆ ದರವೂ ಹೊರೆ

ತರಕಾರಿ, ಸಕ್ಕರೆ ದರವೂ ಹೊರೆ

ಗ್ಯಾಸ್ ದರದ ಜತೆಗೆ ಆಹಾರ ಪದಾರ್ಥಗಳ ಬೆಲೆ ಏರಿಕೆಯೂ ಹೋಟೆಲ್ ಉದ್ಯಮದ ಲೆಕ್ಕಾಚಾರವನ್ನು ಬದಲಿಸುತ್ತಿದೆ. ವಿಶೇಷವಾಗಿ ಈರುಳ್ಳಿ ದರದಲ್ಲಿ ಇತ್ತೀಚೆಗೆ ಏರಿಕೆ ಕಂಡುಬಂದಿದೆ. ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಕೆ.ಜಿಗೆ ₹45-50ರಷ್ಟಿದ್ದರೆ, ಚಿಲ್ಲರೆ ದರ ₹55-60ರ ಮಟ್ಟದಲ್ಲಿದೆ. ಮಳೆ ಕೊರತೆ, ಬೆಳೆ ಹಾನಿ ಮತ್ತು ರೋಗಬಾಧೆಯಿಂದ ಪೂರೈಕೆಯ ಮೇಲೆ ಪರಿಣಾಮ ಬೀರಿರುವುದು ದರ ಏರಿಕೆಗೆ ಕಾರಣವೆಂದು ವರದಿಯಾಗಿದೆ.

ಇದೇ ವೇಳೆ ಕರ್ನಾಟಕದಲ್ಲಿ ಸಕ್ಕರೆ ಸಗಟು ದರ ಆಗಸ್ಟ್‌ನಲ್ಲಿ ₹45ರಿಂದ ₹63ಕ್ಕೆ ಏರಿಕೆಯಾಗಿರುವುದಾಗಿ ವರದಿಯಾಗಿದೆ. ಮಳೆ ಕೊರತೆಯಿಂದ ಉತ್ಪಾದನೆ ಕುಸಿತ ಹಾಗೂ ಹಬ್ಬದ ಕಾಲದ ಬೇಡಿಕೆ ಹೆಚ್ಚಳ ಇದಕ್ಕೆ ಕಾರಣವೆಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಸರ್ಕಾರದ ಬೆಲೆ ನಿಗಾ ವ್ಯವಸ್ಥೆಯ ಇತ್ತೀಚಿನ ಅಂಕಿಅಂಶಗಳಲ್ಲಿಯೂ ಈರುಳ್ಳಿ, ಟೊಮ್ಯಾಟೊ, ಆಲೂಗಡ್ಡೆ ಸೇರಿದಂತೆ ಹಲವು ಆಹಾರ ಪದಾರ್ಥಗಳ ದರಗಳು ಗಮನಾರ್ಹ ಮಟ್ಟದಲ್ಲಿರುವುದು ಗೋಚರಿಸುತ್ತದೆ.

2026ರ ಮೇ ತಿಂಗಳಲ್ಲೇ LPG ದರ ಏರಿಕೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಹೋಟೆಲ್‌ಗಳು ಆಹಾರ ದರ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿದ್ದವು. ಕೆಲವು ತಿಂಡಿ-ತಿನಿಸುಗಳ ದರದಲ್ಲಿ ₹5ರಿಂದ ₹12ರವರೆಗೆ, ಒಟ್ಟಾರೆ ಶೇ.10ರಿಂದ 15ರವರೆಗೆ ಏರಿಕೆ ಕಂಡುಬಂದಿತ್ತು ಎಂದು ವರದಿಯಾಗಿತ್ತು.

ಆದರೆ ಜೂನ್‌ನಲ್ಲಿ ಹೋಟೆಲ್ ಸಂಘಟನೆಗಳು ತಕ್ಷಣವೇ ಮೆನು ದರ ಹೆಚ್ಚಿಸದಿರಲು ನಿರ್ಧರಿಸಿದ್ದವು. ಹೆಚ್ಚುವರಿ ವೆಚ್ಚವನ್ನು ಹೋಟೆಲ್ ಮಾಲೀಕರೇ ಭರಿಸುವ ಪ್ರಯತ್ನ ಮಾಡಿದ್ದರು. ನಿರಂತರವಾಗಿ LPG ದರ ಏರಿಕೆಯಾಗುತ್ತಿರುವುದರಿಂದ ಮಾತ್ರ ಮುಂದಿನ ಹಂತದಲ್ಲಿ ದರ ಪರಿಷ್ಕರಣೆ ಅನಿವಾರ್ಯವಾಗಬಹುದು ಎಂಬ ಎಚ್ಚರಿಕೆಯೂ ಆಗಲೇ ವ್ಯಕ್ತವಾಗಿತ್ತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular