HomeKarnataka'ವರಾಹ ರೂಪಂ' ಹಾಡಿಗೆ ನರ್ತಿಸುವಾಗಲೇ ವಿದ್ಯಾರ್ಥಿ ಮೇಲೆ ದೈವದ ಆವಾಹನೆ....!

‘ವರಾಹ ರೂಪಂ’ ಹಾಡಿಗೆ ನರ್ತಿಸುವಾಗಲೇ ವಿದ್ಯಾರ್ಥಿ ಮೇಲೆ ದೈವದ ಆವಾಹನೆ….!

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತರಾ’ ಸಿನಿಮಾ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಈ ಚಿತ್ರದ ಕುರಿತು ಭಾರತದ ಖ್ಯಾತ ನಟ – ನಟಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದು, ಆಸ್ಕರ್ ಗೆ ನಾಮನಿರ್ದೇಶನಗೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲೂ ದೊಡ್ಡ ಸದ್ದು ಮಾಡಿತ್ತು.

‘ಕಾಂತಾರ’ ಯಶಸ್ಸಿನ ಹಿಂದೆ ʼವರಾಹ ರೂಪಂʼ ಹಾಡು ಕೂಡ ಪ್ರಮುಖ ಪಾತ್ರ ವಹಿಸಿದ್ದು, ಇದರ ಮಧ್ಯೆ ಕಾಲೇಜು ವಾರ್ಷಿಕೋತ್ಸವದ ವೇಳೆ ವಿದ್ಯಾರ್ಥಿಯೊಬ್ಬ ವರಾಹ ರೂಪಂ ಹಾಡಿಗೆ ನರ್ತಿಸುವ ವೇಳೆ ದೈವ ಆವಾಹನೆ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ಹೊಂಬೇಗೌಡ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈ ವಿದ್ಯಾರ್ಥಿ ಪಂಜುರ್ಲಿ ದೈವದ ವೇಷ ಧರಿಸಿ ವರಾಹ ರೂಪಂ ಹಾಡಿಗೆ ನರ್ತಿಸುತ್ತಿದ್ದ ಎಂದು ಹೇಳಲಾಗಿದೆ. ಈ ವೇಳೆ ದೈವ ಆವಾಹನೆಯಾಗಿದ್ದು, ಶಿಕ್ಷಕರು ವಿದ್ಯಾರ್ಥಿಯನ್ನು ಸಮಾಧಾನಪಡಿಸಿದ್ದಾರೆ. ಬಳಿಕ ಹಾಡನ್ನು ನಿಲ್ಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular