ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅಬ್ಬರಕ್ಕೆ ಚಿತ್ರಮಂದಿರದ ಮೇಲ್ಛಾವಣಿ ಕುಸಿದು ಬಿದ್ದು ಅವಘಡ ಸಂಭವಿಸಿದೆ.
‘ಭಾರತಿ’ ಚಿತ್ರಮಂದಿರದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಪ್ರದರ್ಶನದ ವೇಳೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರಿಂದಾಗಿ ಹಲವು ಪ್ರೇಕ್ಷಕರು ಗಾಯಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸಂಜೆ ಧಾರಾಕಾರ ಮಳೆ ನಡುವೆಯೇ ಈ ಘಟನೆ ನಡೆದಿದೆ. ಪೀಣ್ಯದ ಭಾರತಿ ಚಿತ್ರಮಂದಿರದ ಛಾವಣಿ ಕುಸಿದು ಬಿದ್ದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಈ ಘಟನೆ ನಡೆದ ಕೂಡಲೇ ಸಿನಿಮಾ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಪ್ರೇಮದ ಊರಲಿ’ ಸಿನಿಮಾ ಎಲ್ಲ ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಪೀಣ್ಯದಲ್ಲಿರುವ ‘ಭಾರತಿ’ ಥಿಯೇಟರ್‌ನಲ್ಲೂ ಈ ಸಿನಿಮಾ ಪ್ರದರ್ಶನ ಆಗುತ್ತಿದೆ. ಆದರೆ ಮಧ್ಯಾಹ್ನದ ಶೋ ನೋಡಲು ಬಂದ ಪ್ರೇಕ್ಷಕರಿಗೆ ಈ ಘಟನೆಯಿಂದ ಶಾಕ್ ಆಗಿದೆ. ಚಿತ್ರಮಂದಿರದವರ ನಿರ್ಲಕ್ಷ್ಯದಿಂದಲೇ ಮೇಲ್ಭಾವಣಿ ಕುಸಿದಿದೆ ಎಂದು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಂತರಕ್ಕೂ ಕೆಲವೇ ನಿಮಿಷಗಳ ಮುಂಚೆ ಜೋರಾಗಿ ಮಳೆ ಬರುತ್ತಿತ್ತು. ಆಗ ಛಾವಣಿ ಬಿದ್ದ ಶಬ್ದ ಕೇಳಿಸಿತು. ಮಳೆಯಿಂದಾಗಿ ಶೀಟ್ ನೆನೆದು ಕೆಳಗೆ ಬಿದ್ದಿದೆ. ಅಲ್ಲಿ ಕುಳಿತಿದ್ದ ಮೂವರಿಗೆ ಗಾಯ ಆಗಿದೆ. ಇಬ್ಬರ ತಲೆ ಹಾಗೂ ಇನ್ನೊಬ್ಬರ ಕಾಲಿಗೆ ಪೆಟ್ಟಾಗಿದೆ ಎಂದು ತುಳಿದುಬಂದಿದೆ.
ಗುತ್ತಿಗೆದಾರರ ಸಂಘದಿಂದ ರಾಜ್ಯ ಸರ್ಕಾರಕ್ಕೆ ಡೆಡ್ ಲೈನ್: ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕಮಿಷನ್ ದಂಧೆ ದಾಖಲೆ ಬಿಡುಗಡೆ ಎಚ್ಚರಿಕೆ
ಬೆಂಗಳೂರು: ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದ ಬೆನ್ನಲ್ಲೇ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ರಾಅಜ್ಯ ಸರ್ಕಾಅರಕ್ಕೆ ಗಡುವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಜುನಾಥ್, ನವೆಂಬರ್ ಒಳಗೆ ಬಾಕಿ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಕಮಿಷನ್ ದಂಧೆಯ ದಾಖಲೆ ಬಿಡುಗಡೆ ಮಾಡುವುದಾಅಗಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಸರ್ಕಾರಕ್ಕಿಂತಲೂ ಈಗಿನ ಸರ್ಕಾರದಲ್ಲಿ ಕಮಿಷನ್ ಹೆಚ್ಚು ಕೇಳಲಾಗುತ್ತಿದೆ. ಶಾಸಕರು ಕೂಡ ಕಾಂಟ್ರ್ಯಾಕ್ಟ್ ವಿಚಾರವಾಗಿ ತಲೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಎಂಎಲ್‌ಎಗಳು ಕೂಡ ಕಾಂಟ್ರ್ಯಾಕ್ಟ್ ವಿಚಾರದಲ್ಲಿ ತಲೆತೂರಿಸುತ್ತಿದ್ದಾರೆ. ಇದರಿಂದ ನಿಜವಾದ ಕಾಂಟ್ರ್ಯಾಕ್ಟರ್‌ಗಳು ಮಾಯ ಆಗುತ್ತಿದ್ದಾರೆ. ಒಂದು ಕಡೆ ಕೆಲಸವೂ ಇಲ್ಲ, ಮತ್ತೊಂದೆಡೆ ಹಣವೂ ಇಲ್ಲ ಎಂಬಂತಾಗಿದೆ. ಟೆಂಡರ್ ಆದರೆ ಶಾಸಕರ ಬಳಿ ಮೊದಲು ಹೋಗಬೇಕು. ಅವರು ಓಕೆ ಅಂದಮೇಲೆ ಕಾಮಗಾರಿ ಶುರು ಆಗುತ್ತೆ. ಈ ವಿಚಾರ ಸಿಎಂಗೂ ಗೊತ್ತಿದೆ. ನಮ್ಮ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಆಗುತ್ತಿದ್ದು, ಮೊದಲು ನಾವು ಕೆಲಸ ಮಾಡಿರುವ ಹಣ ಕೊಡಿ ಎಂದು ಆಗ್ರಹಿಸಿದರು.
ಕಳೆದ 4 ವರ್ಷದಿಂದ ಹಣ ಬಾರದೆ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಕೆಂಪಣ್ಣರನ್ನು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಸಿದ್ದರಾಮಯ್ಯ 3 ವರ್ಷ ಸಿಎಂ ಆಗಿ ನಮಗೆ ಯಾವುದೇ ನೆರವು ನೀಡಿಲ್ಲ. ನಂತರ ಅಂದಿನ ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್ ಪ್ರತಿಭಟನಾ ಜಾಗಕ್ಕೆ ಬಂದು ಭರವಸೆ ನೀಡಿದ್ರು. ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬಂದ್ರು. ಅವರನ್ನು ಗುತ್ತಿಗೆದಾರರು ಭೇಟಿಯಾದಾಗ ಜೂನ್ 30ಕ್ಕೆ ಹಣ ಬಿಡುಗಡೆ ಮಾಡ್ತೇವೆ ಎಂದಿದ್ದರು. ಸುಮಾರು 8 ಇಲಾಖೆಯಲ್ಲಿ ಸರಿಸುಮಾರು 38 ಸಾವಿರ ಕೋಟಿ ಹಣ ಬಾಕಿ ಇದೆ ಎಂದು ತಿಳಿಸಿದ್ದಾರೆ.
ಮಂತ್ರಿಗಳಿಗೂ ಕಮಿಷನ್ ಹೋಗುತ್ತಿದೆ. ಹೊಸ ಸಚಿವರಿಗೆ ಪೇಮೆಂಟ್ ಇನ್ನೂ ತಲುಪಿಲ್ಲ. ಸತೀಶ್ ಜಾರಕಿಹೊಳಿ ಅವರ ಇಲಾಖೆ ಹಾಗೂ ಬಿಬಿಎಂಪಿ ಹೊರತುಪಡಿಸಿದರೆ ಉಳಿದೆಲ್ಲಾ ಇಲಾಖೆಗಳಲ್ಲಿ ಕಮಿಷನ್ ವಹಿವಾಟು ಎಗ್ಗಿಲ್ಲದೆ ಸಾಗಿದೆ ಎಂದು ದೂರಿದರು.
ಸಿಎಂ ಅನುಮತಿ ಕೊಟ್ಟರೆ ಕಮಿಷನ್ ಪಡೆಯುತ್ತಿರುವವರ ಸಂಪೂರ್ಣ ಪಟ್ಟಿಯನ್ನೇ ಬಿಡುಗಡೆ ಮಾಡುತ್ತೇವೆ. ಕೆಂಪಣ್ಣ ಅವರು ಈ ಹಿಂದೆ 40% ಕಮಿಷನ್ ಬಗ್ಗೆ ಹೇಳಿಕೆ ಕೊಟ್ಟು ಕೆಂಪಣ್ಣ ತಪ್ಪು ಮಾಡಿದರು. ಸಿದ್ದರಾಮಯ್ಯ ಅವರು ಆ ಹೇಳಿಕೆಯನ್ನು ರಾಜಕೀಯವಾಗಿ ಚೆನ್ನಾಗಿ ಬಳಸಿಕೊಂಡರು, ಆದರೆ ನಮಗೆ ನಾಲ್ಕು ವರ್ಷಗಳಿಂದ ಬಿಲ್ ಕ್ಲಿಯರ್ ಆಗದೆ ಸಂಕಷ್ಟ ಮುಂದುವರಿದಿದೆ. ಗುತ್ತಿಗೆದಾರರು ಬೆವರು ಸುರಿಸಿ ಮಾಡಿದ ಕೆಲಸದ ಹಣವನ್ನು ತಡೆಹಿಡಿದು, ಆ ದುಡ್ಡಿನಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಡೆಸುವುದು ಬೇಡ ಎಂದರು.
ಇದೇ ವೇಳೆ೦ ಮಂಜುನಾಥ್, ಕಮಿಷನ್ ಹಣ ತೆಗೆದುಕೊಂಡಿಲ್ಲ ಎಂದು ಶಾಸಕರು ಎಲ್ಲಿಗೆ ಬೇಕಾದರೂ ಬಂದು ಧರ್ಮಸ್ಥಳದಲ್ಲೋ ಅಥವಾ ದೇವರ ಮುಂದೆಯೋ ಆಣೆ ಮಾಡಲಿ. ನಾವು ಆಣೆ ಮಾಡಲು ಸಿದ್ಧರಿದ್ದೇವೆ, ಶಾಸಕರು ಇದಕ್ಕೆ ಸಿದ್ಧರಿದ್ದಾರೆಯೇ? ಎಂದು ಪ್ರೆಶ್ನಿಸಿದರು.

