ಬೆಂಗಳೂರು : ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ತಂಬಾಕು ರಹಿತ ಹುಕ್ಕಾ ಬಳಕೆ ಮತ್ತು ಮಾರಾಟ, ಸೇವನೆಯನ್ನು ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸಿರುವ ಗ್ಲೋಬಲ್ ಅಡಲ್ಟ್ ಟೊಬ್ಯಾಕೊ ಸರ್ವೇ 2016-17 ಅಧಯನ ಪ್ರಕಾರ, ಕರ್ನಾಟಕದಲ್ಲಿ 22.8% ವಯಸ್ಕರು (15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಒಂದಲ್ಲ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಈ ವೈಕಿ ಶೇ.8.8 ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ 23.9% ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ವರೋಕ್ಷ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ.
ಅಧಯನಗಳ ಪ್ರಕಾರ, 45 ನಿಮಿಷಗಳ ಹುಕ್ಕಾ ಸೇವನೆ, 100 ಸಿಗರೇಟ್ ಸೇದುವುದಕ್ಕೆ ಸಮನಾಗಿರುತ್ತದೆ ಹಾಗೂ ಆರೋಗ್ಯಕ್ಕೆ ಮಾರಕ ಎಂದು ಉಲ್ಲೇಖಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಹುಕ್ಕಾ ಒಂದು ವ್ಯಸನಕಾರಿ ವಸ್ತುವಾಗಿದ್ದು, ಅದರಲ್ಲಿರುವ ನಿಕೋಟಿನ್ ಅಥವಾ ತಂಬಾಕು ಹಾಗೂ ಮೊಲಾಸನ್ ಅಥವಾ ಸುವಾಸನೆಭರಿತ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಮಾನಾಕ್ರೆಡ್ ರಾಸಾಯನಿಕ ವಸ್ತುವನ್ನು ಒಳಗೊಂಡಿದ್ದು ಆರೋಗ್ಯಕ್ಕೆ ಅತ್ಯಂತ ಮಾರಿಕ ಎಂದು ಎಚ್ಚರಿಸಿದೆ.
COTPA 2003ರ ಕಾಯ್ದೆಯ ಕಲಂ 3(ಪಿ) ಶೆಡ್ಯೂಲ್‌ನಲ್ಲಿ ಹುಕ್ಕಾವನ್ನು ತಂಬಾಕು ಉತ್ಪನ್ನವೆಂದು ವರ್ಗೀಕರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿ ಸಮುದಾಯದವರು ತಂಬಾಕು ಸಹಿತ ಅಥವಾ ಯಕ್ಕಾ ಮೊಲಾಸನ್ ಇತರೆ ಹೆಸರಿನಿಂದ ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವನಮಾಡಿ ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
COTPA 2003 ಸೆಕ್ಷನ್ 4ರಡಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ ಮುಂದುವರಿದು, 30 ಹಾಗೂ ಮೂವತ್ತಕ್ಕಿಂತ ಹೆಚ್ಚು ಆಸನ ವ್ಯವಸ್ಥೆ ಇರುವ ರೆಸ್ಟೋರಂಟ್, ವಬ್‌ಗಳಲ್ಲಿ ನಿಗದಿಪಡಿಸಿದ ಪ್ರತ್ಯೇಕ ಧೂಮಪಾನ ವಲಯದಲ್ಲಿ ಮಾತ್ರ ಮಾಡಬಹುದಾಗಿರುತ್ತದೆ ಧೂಮಪಾನ ವಲಯ ಅಥವಾ ಕೊಠಡಿಯಲ್ಲಿ ವಚೋದಿಸುವ ವಸ್ತುಗಳನ್ನು ಹಾಗೂ ಇತರ ಸೇವೆಗಳನ್ನು ನೀಡುವುದು COTPA 2003 ಕಾಯ್ದೆಯ ಸೆಕ್ಷನ್ 4ರ ಉಲ್ಲಂಘನೆಯಾಗಿರುತ್ತದೆ.
COTPA ಕಲಂ 6(a) ಮತ್ತು 6(b) ಪ್ರಕಾರ, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ತಂಬಾಕು ಸೇವನ ಮಾಡುವಂತೆ ಪ್ರಚೋದಿಸುವುದು ಹಾಗೂ ಶೈಕ್ಷಣಿಕ ಸಂಸ್ಥೆಯ ನೂರು ಗಜದ ವ್ಯಾಪ್ತಿಯಲ್ಲಿ ಯಕ್ಕಾ ಒಳಗೊಂಡಂತೆ ಇತರ ತಂಬಾಕು ವಸ್ತುಗಳ ಮಾರಾಟ/ಉವಯೋಗ ನಿಷೇಧಿಸಲಾಗಿದೆ.
ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ 2015 ಸೆಕ್ಷನ್ 77ರ ಪ್ರಕಾರ, ಅಪ್ರಾಪ್ತರಿಗೆ ತಂಬಾಕು ಅಥವಾ ಇತರ ಮಾದಕ ವಸ್ತುಗಳ ಸೇವನೆ ಬಗ್ಗೆ ವಚೋದಿಸುವುದು ಹಾಗೂ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.




