HomeKarnatakaಕಾಂಗ್ರೆಸ್ ಸದಸ್ಯನಿಂದ ಹಲ್ಲೆಗೊಳಗಾದ ಪಾಲಿಕೆ ಇಂಜಿನಿಯರ್ ಮೇಲೆ ಅಟ್ರಾಸಿಟಿ ಕೇಸ್ ದಾಖಲು

ಕಾಂಗ್ರೆಸ್ ಸದಸ್ಯನಿಂದ ಹಲ್ಲೆಗೊಳಗಾದ ಪಾಲಿಕೆ ಇಂಜಿನಿಯರ್ ಮೇಲೆ ಅಟ್ರಾಸಿಟಿ ಕೇಸ್ ದಾಖಲು

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯನಿಂದ ಹಲ್ಲೆಗೊಳಗಾದ ಪಾಲಿಕೆ ಇಂಜಿನಿಯರ್ ಮೇಲೆಯೇ ಅಟ್ರಾಸಿಟಿ ಕೇಸ್ ದಾಖಲಾಗಿರುವ ಘಟನೆ ನಡೆದಿದೆ.

ಬಳ್ಳಾರಿ ಮಹಾನಾಗರ ಪಾಲಿಕೆ ಇಂಜಿನಿಯರ್ ವೀರೇಶ್ ಮೇಲೆ ಕಾಂಗ್ರೆಸ್ ಸದಸ್ಯ ಕುಬೇರ್ ಹಲ್ಲೆ ನಡೆಸಿದ್ದಾರೆ. ಈಗ ಹಲ್ಲೆಗೊಳಗಾದ ವಿರೇಶ್ ವಿರುದ್ಧವೇ ದೂರು ದಾಖಲಾಗಿದೆ.

ಮಹಾನಗರ ಪಾಅಲಿಕೆ ಮೇಯರ್ ಗಾದೆಪ್ಪ ಜೊತೆ ಠಾಣೆಗೆ ಬಂದಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ವೀರೇಶ್ ವಿರುದ್ಧ ದೂರು ನೀಡಿದ್ದಾರೆ. ನಗರದ ರಾಯಲ್ ವೃತ್ತದಿಂದ ಬ್ರೂಸ್ ಪೇಟೆ ಠಾಣೆಗೆ ಪಾದಯಾತ್ರೆ ಮೂಲಕ ತೆರಳಿ ದೂರು ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ನಮ್ಮ ಕಾರ್ಯಕರ್ತನಿ ಅಧಿಕಾರಿ ವೀರ‍ೆಶ್ ಕೆಟ್ಟ ಪದಗಳನ್ನು ಬಳಸಿ ಬೈದಿದ್ದಾರೆ. ಅದಕ್ಕೆ ಅವರ ವಿರುದ್ಧ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ಮತ್ತೊಂದೆಡೆ ಇಂಜಿನಿಯರ್ ವೀರೇಶ್ ಮೇಲೆ ಹಲ್ಲೆ ನಡೆಸಿದ್ದಕ್ಕೆ ಬ್ರೂಸ್ ಪೇಟ್ ಪೊಲೀಸ್ ಠಾಣೆಯಲ್ಲಿ ಕುಬೇರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವೀರೇಶ್ ಅವರು ಸರ್ಕಾರಿ ಕೆಲಸಕ್ಕೆ ಅಡ್ಡಿ, ಜೀವ ಬೆದರಿಕೆ ಹಾಗೂ ಹಲ್ಲೆ ಪ್ರಕರಣ ದಾಖಲಿಸಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular