HomeLatest Newsಸಹಕಾರಿ ಬ್ಯಾಂಕ್‌ನಲ್ಲಿ 7.55 ಕೋಟಿ ರೂ.ಗೂ ಅಧಿಕ ವಂಚನೆ: ಬ್ಯಾಂಕ್ ವ್ಯವಸ್ಥಾಪಕ ಸೇರಿ ಹಲವರ ವಿರುದ್ಧ...

ಸಹಕಾರಿ ಬ್ಯಾಂಕ್‌ನಲ್ಲಿ 7.55 ಕೋಟಿ ರೂ.ಗೂ ಅಧಿಕ ವಂಚನೆ: ಬ್ಯಾಂಕ್ ವ್ಯವಸ್ಥಾಪಕ ಸೇರಿ ಹಲವರ ವಿರುದ್ಧ FIR ದಾಖಲು

ಬಳ್ಳಾರಿ: ಸಹಕಾರಿ ಬ್ಯ್ಂಕ್ ನಲ್ಲಿ ಬರೋಬ್ಬರಿ 7.55 ಕೋಟಿಗೂ ಅಧಿಕ ಹಣ ವಂಚನೆ ಮಾಡಿರುವ ಘಟನೆ ಬಳ್ಳಾರಿ ನಗರದ ನಗರದ ಮಾನ್ವಿ ನಗರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ.

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಅವರು ನೀಡಿದ ದೂರಿನ ಮೇರೆಗೆ ಎಪಿಎಂಸಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬ್ಯಾಂಕ್‌ನ ವ್ಯವಸ್ಥಾಪಕ ಎಂ.ಕೃಷ್ಣ, ಕಿರಿಯ ಸಹಾಯಕ ರಮೇಶ್ ಎಂ. ಜ್ಯೋತಿ, ರಂಜಿತಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​​​​ಪಿ ಸುಮನ್ ಡಿ ಪನ್ನೇಕರ್ ಮಾಹಿತಿ ನೀಡಿದ್ದು,ಮಾನ್ವಿ ನಗರ ಸಹಕಾರ ಬ್ಯಾಂಕ್‌ನಲ್ಲಿ ವಂಚನೆ ನಡೆದಿರುವ ಬಗ್ಗೆ ಮಾಹಿತಿ ಬಂದಿತ್ತು. ಬ್ಯಾಂಕ್​ನಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿ ರಮೇಶ್ ಎಂಬುವವರು ನಕಲಿ ದಾಖಲೆಗಳು ಮತ್ತು ಸಹಿಗಳನ್ನು ಬಳಸಿ ತನ್ನ ತಂದೆ, ತಾಯಿ ಹಾಗೂ ಹೆಂಡತಿ ಹೆಸರಿನಲ್ಲಿ ಹಾಗೂ ಬೇರೆ ಹೆಸರಿನಲ್ಲಿ ಅಕೌಂಟ್​ಗಳನ್ನು ಓಪನ್ ಮಾಡಿಕೊಂಡು ಆ ಅಕೌಂಟ್​ಗಳಿಗೆ ಬ್ಯಾಂಕ್ ಹಣವನ್ನು ವರ್ಗಾಯಿಸಿ ವಂಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತು ಬ್ಯಾಂಕ್​ನ ಎಂಡಿ ಗೋಪಾಲಕೃಷ್ಣ ಅವರು ದೂರು ನೀಡಿದ್ದರು. ನಂತರ ಇದನ್ನು ಪರಿಶೀಲಿಸಿದಾಗ 7 ಕೋಟಿಗೂ ಮೀರಿ ವಂಚಿಸಿರುವುದು ತಿಳಿದುಬಂದಿದೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ನಾವು ಆರೋಪಿಯನ್ನು ಪತ್ತೆ ಹಚ್ಚುವಂತಹ ಕೆಲಸ ಮಾಡುತ್ತಿದ್ದೇವೆ. ಹಾಗೆಯೇ ತನಿಖೆಯನ್ನೂ ಕೈಗೆತ್ತಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular