HomeKarnatakaBREAKING: ಅಪಹರಣವಾಗಿದ್ದ ಬಳ್ಳಾರಿ ವೈದ್ಯ ಡಾ. ಸುನಿಲ್ ಪತ್ತೆ

BREAKING: ಅಪಹರಣವಾಗಿದ್ದ ಬಳ್ಳಾರಿ ವೈದ್ಯ ಡಾ. ಸುನಿಲ್ ಪತ್ತೆ

ಬಳ್ಳಾರಿ: ಅಪಹರಣಕ್ಕೊಳಗಾಗಿದ್ದ ಬಳ್ಳಾರಿ ವೈದ್ಯ ಡಾ. ಸುನಿಲ್ ಪತ್ತೆ ಹಚ್ಚುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಸಮೀಪ ಜಮೀನೊಂದರಲ್ಲಿ ಅಪಹರಣಕಾರರು ಸುನಿಲ್ ಅವರನ್ನು ಬಿಟ್ಟು ಹೋಗಿದ್ದಾರೆ. ಅಪಹರಣಕಾರರು ಸುನಿಲ್ ಅವರನ್ನು ಅಪಹರಿಸಿದ ನಂತರ ಊರೂರು ಸುತ್ತಾಡಿಸಿದ್ದಾರೆ. ಕೊನೆಗೆ ಪೊಲೀಸರ ಬಯಕ್ಕೆ ವೈದ್ಯನನ್ನು ಆರೋಪಿಗಳು ಬಿಟ್ಟು ಹೋಗಿದ್ದಾರೆ.

ನಿನ್ನೆ ಬೆಳಿಗ್ಗೆ 5.30ಕ್ಕೆ ವಾಕಿಂಗ್ ಮಾಡುವಾಗ ಅವರನ್ನು ಅಪಹರಿಸಲಾಗಿತ್ತು. ಮೂರು ಕೋಟಿ ರೂಪಾಯಿ ನಗದು, ಮೂರು ಕೋಟಿ ರೂಪಾಯಿ ಮೌಲ್ಯದ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು. ಸುನಿಲ್ ಅವರ ಮೊಬೈಲ್ ನಿಂದಲೇ ಕರೆ ಮಾಡಿ ಮಾತನಾಡಿದ್ದರು. ಅವರ  ಮೇಲೆ ಹಲ್ಲೆ ಮಾಡಿ ಅಪಹರಣಕಾರರು ಬಿಟ್ಟು ಹೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಡಿಕಾ ಕಾರ್ ನಲ್ಲಿ ಬಳ್ಳಾರಿಯ ಸತ್ಯನಾರಾಯಣಪೇಟೆಯಲ್ಲಿ ಅವರನ್ನು ಅಪಹರಿಸಲಾಗಿತ್ತು. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular