ಬಳ್ಳಾರಿ : ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ಸೇರಿದಂತೆ ಎಲ್ಲಾ ಧರ್ಮಗ್ರಂಥಗಳ ಮೂಲ ಸಾರ ಸತ್ಯ, ಪರಸ್ಪರ ಗೌರವ ಹಾಗೂ ಪ್ರೀತಿಯಿಂದ ಬಾಳುವುದು. ಗಾಂಧೀಜಿಯವರು ಇವುಗಳನ್ನು ಕೇವಲ ಬೋಧನೆ ಮಾಡದೆ, ತಮ್ಮ ಸ್ವಂತ ಜೀವನದಲ್ಲೇ ಅಳವಡಿಸಿಕೊಂಡು ಜೀವಿಸಿದ ಮಹಾತ್ಮರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ರೈಲು ನಿಲ್ದಾಣದ ಎದುರುಗಡೆ ಇರುವ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಗಾಂಧಿ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿಯವರ 157ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮವನ್ನು ಯಾವುದೇ ಅದ್ದೂರಿತನವಿಲ್ಲದೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಗಾಂಧೀಜಿಯವರು ಹುಟ್ಟಿನಿಂದಲೇ ಸಂತರಾಗಿರಲಿಲ್ಲ; ಅವರೂ ತಪ್ಪುಗಳನ್ನು ಮಾಡಿದ್ದರು. ಆದರೆ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ತಪ್ಪುಗಳನ್ನು ತಿದ್ದಿಕೊಂಡು ಸತ್ಯದ ಹಾದಿಯಲ್ಲಿ ನಡೆಯುವ ಅವಕಾಶವಿದೆ ಎಂಬುದನ್ನು ಅವರ ಜೀವನ ತೋರಿಸಿಕೊಟ್ಟಿದೆ. ಸುಳ್ಳಿನ ಹಾದಿ ಸುಲಭವೆನಿಸಿದರೂ, ಅಂತಿಮವಾಗಿ ಸತ್ಯ ಮತ್ತು ಸರಳ ಜೀವನವೇ ನಿಜವಾದ ಸಂತೋಷ ನೀಡುತ್ತದೆ ಎಂದರು.
ಪ್ರಾಪAಚಿಕ ವ್ಯಾಮೋಹಗಳಿಂದ ಮುಕ್ತರಾಗಿ ಸನ್ಮಾರ್ಗದಲ್ಲಿ ಸಾಗುವುದೇ ಎಲ್ಲ ತತ್ವಶಾಸ್ತçಗಳ ಸಾರವಾಗಿದೆ. ಇಂದಿನ ಆಧುನಿಕ ಯುಗದ ಯುವಪೀಳಿಗೆ ಗಾಂಧೀಜಿಯವರ ತತ್ವಾದರ್ಶ ಹಾಗೂ ಜೀವನ ಮೌಲ್ಯಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರ ಜೀವನ ಮೌಲ್ಯಗಳು ಹಾಗೂ ತತ್ವಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ ಎಂದು ಹೇಳಿದರು.
ಗಾಂಧೀಜಿಯವರು ಅಂದೇ ಸುಸ್ಥಿರ ಅಭಿವೃದ್ಧಿ ಕುರಿತು ಪ್ರತಿಪಾದಿಸಿದ್ದರು. ಪ್ರಸ್ತುತ ಜಗತ್ತು ಎದುರಿಸುತ್ತಿರುವ ಹವಾಮಾನ ವೈಪರೀತ್ಯ ಸಮಸ್ಯೆಗೆ ಅವರ ಪರಿಸರಸ್ನೇಹಿ ಚಿಂತನೆಗಳು ಇಂದಿಗೂ ಪ್ರಮುಖ ಮಾರ್ಗದರ್ಶಿಯಾಗಿವೆ. ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಆಗಮನದಿಂದ ಉದ್ಯೋಗ ಕಡಿತದ ಆತಂಕ ಎದುರಾಗಿರುವ ಈ ಕಾಲಘಟ್ಟದಲ್ಲಿ, ಮಾನವ ಶ್ರಮ ಮತ್ತು ಕೌಶಲ್ಯಗಳ ಮಹತ್ವದ ಬಗ್ಗೆ ಗಾಂಧೀಜಿ ಅಂದೇ ಎಚ್ಚರಿಸಿದ್ದರು. ನೂತನ ತಂತ್ರಜ್ಞಾನವನ್ನು ನೈತಿಕವಾಗಿ ಸಮಾಜಕ್ಕೆ ಪೂರಕವಾಗಿ ಅಳವಡಿಸಿಕೊಳ್ಳಲು ಗಾಂಧಿ ತತ್ವಗಳು ಅತ್ಯಗತ್ಯ. ಅವರ ಸರಳತೆ ಮತ್ತು ‘ಸ್ಥಿತಪ್ರಜ್ಞ’ ವ್ಯಕ್ತಿತ್ವವು ಇಂದಿನ ಒತ್ತಡದ ಬದುಕಿನಲ್ಲಿ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಮಾದರಿಯಾಗಿದೆ ಎಂದರು.
“ಯಾವುದೇ ಬದಲಾವಣೆ ಮೊದಲು ನಮ್ಮೊಳಗಿಂದಲೇ ಶುರುವಾಗಬೇಕು” ಎಂಬ ಗಾಂಧೀಜಿಯವರ ಮಾತು ಸ್ವಚ್ಛತೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಸಮಾಜದ ಬದಲಾವಣೆಗೆ ಬೇರೆಯವರನ್ನು ಕಾಯುವ ಬದಲು, ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳಬೇಕು. ದೇಶದ ಯುವಶಕ್ತಿ ಗಾಂಧೀಜಿಯವರ ನೈತಿಕ ಮೌಲ್ಯಗಳನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು, ಬದಲಾವಣೆಯನ್ನು ತಮ್ಮಿಂದಲೇ ಆರಂಭಿಸುವ ಮೂಲಕ ಬಲಿಷ್ಠ ರಾಷ್ಟç ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಮಹಾತ್ಮ ಗಾಂಧೀಜಿಯವರ ಜೀವನ ಚರಿತ್ರೆ ಕುರಿತು ಬಳ್ಳಾರಿಯ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷ ಅವರು ವಿಶೇಷ ಉಪನ್ಯಾಸ ನೀಡಿದರು.
ಇದಕ್ಕೂ ಮುನ್ನ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿçà ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸರ್ವಧರ್ಮ ಗ್ರಂಥಗಳ ಬೋಧನೆ ಮಾಡಿದ್ದು, ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಎನ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಸಹಾಯಕ ಆಯುಕ್ತ ಹೆಚ್.ಡಿ. ರಾಜೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ.ಗುರುರಾಜ್, ಪ್ರದಸ ನವೀನ್ ಕುಮಾರ್.ಜಿ., ಸಿಬ್ಬಂದಿಗಳಾದ ಹನುಮೇಶ್.ಹೆಚ್., ವಿಜಯ್ ಕುಮಾರ್, ಮಲ್ಲೇಶಪ್ಪ, ಹನುಮಂತಪ್ಪ, ರೋಜಮೇರಿ, ಮುತ್ತಣ್ಣ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮಹಾತ್ಮ ಗಾಂಧೀಜಿ ಜಯಂತಿ–2026ರ ಅಂಗವಾಗಿ ಬಳ್ಳಾರಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿದ್ದ “ಬಾಪೂಜಿ ಪ್ರಬಂಧ ಸ್ಪರ್ಧೆ”ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ/ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಪ್ರಬಂಧಗಳನ್ನು ಮೌಲ್ಯಮಾಪನ ಮಾಡಿ, ಪ್ರಥಮ (ರೂ. 3,000), ದ್ವಿತೀಯ (ರೂ. 2,000) ಹಾಗೂ ತೃತೀಯ (ರೂ. 1,000) ಸ್ಥಾನ ಪಡೆದ ವಿಜೇತರನ್ನು ಆಯ್ಕೆ ಮಾಡಲಾಗಿದೆ.
ವಿಜೇತರ ವಿವರ:
ಪ್ರೌಢಶಾಲಾ ವಿಭಾಗ:
ಪ್ರಥಮ ಸ್ಥಾನ: ಕೆ. ಕಾವೇರಿ (ಸರ್ಕಾರಿ ಪ್ರೌಢಶಾಲೆ, ದೇವಸಮುದ್ರ, ಕಂಪ್ಲಿ ತಾಲ್ಲೂಕು)
ದ್ವಿತೀಯ ಸ್ಥಾನ: ಕೆ. ಚಂದಸ್ವಿನಿ (ಎಸ್.ಇ.ಎಸ್. ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಸಂಡೂರು)
ತೃತೀಯ ಸ್ಥಾನ: ಸಾಕ್ಷಿ (ಸರ್ಕಾರಿ ಪ್ರೌಢಶಾಲೆ, ಜವುಕು, ಕಂಪ್ಲಿ ತಾಲ್ಲೂಕು).
ಪದವಿ ಪೂರ್ವ ಕಾಲೇಜು ವಿಭಾಗ:
ಪ್ರಥಮ ಸ್ಥಾನ: ವಿನೋದ್ (ಸರ್ಕಾರಿ ಮಾ.ಪು ಪದವಿ ಪೂರ್ವ ಕಾಲೇಜು, ಬಳ್ಳಾರಿ)
ದ್ವಿತೀಯ ಸ್ಥಾನ: ಹೆಚ್. ಹೊನ್ನೂರುಸ್ವಾಮಿ (ಸರ್ಕಾರಿ ಮಾ.ಪು ಪದವಿ ಪೂರ್ವ ಕಾಲೇಜು, ಬಳ್ಳಾರಿ)
ತೃತೀಯ ಸ್ಥಾನ: ಉದಯ್ (ಸರ್ಕಾರಿ ಮಾ.ಪು ಪದವಿ ಪೂರ್ವ ಕಾಲೇಜು, ಬಳ್ಳಾರಿ).
ಪದವಿ / ಸ್ನಾತಕೋತ್ತರ ಪದವಿ ವಿಭಾಗ:
ಪ್ರಥಮ ಸ್ಥಾನ: ಬಿ. ಸುಷ್ಮಾ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಂಪ್ಲಿ)
ದ್ವಿತೀಯ ಸ್ಥಾನ: ತಲಸೀಮಾ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಂಪ್ಲಿ)
ತೃತೀಯ ಸ್ಥಾನ: ಕೆ. ಸಹನಾ (ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ).

