HomeKarnatakaBIG NEWS: ಬಜರಂಗದಳ ಕಾರ್ಯಕರ್ತನನ್ನು ವರಿಸಿದ ಮುಸ್ಲಿಂ ಯುವತಿ

BIG NEWS: ಬಜರಂಗದಳ ಕಾರ್ಯಕರ್ತನನ್ನು ವರಿಸಿದ ಮುಸ್ಲಿಂ ಯುವತಿ

ಮಂಗಳೂರು: ಬಜರಂಗದಳ ಕಾರ್ಯಕರ್ತನೋರ್ವ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವಿವಾಹವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದೆ.

ಪ್ರಶಾಂತ್ ಭಂಡಾರಿ ಎಂಬ ಯುವಕ ಆಯಿಷಾ ಎಂಬ ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದು, ಈತ ಬಜರಂಗದಳ ಕಾರ್ಯಕರ್ತ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೂರು ವರ್ಷಗಳಿಂದ ಪ್ರಶಾಂತ್ ಭಂಡಾರಿ ಹಾಗೂ ಆಯಿಷಾ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ವಿರುದ್ಧ ರೌಡಿಶೀಟರ್ ಕೇಸ್ ಕೂಡ ಇದೆ ಎನ್ನಲಾಗಿದೆ.

ಪ್ರಶಾಂತ್ ಹಾಗೂ ಆಯಿಷಾ ವಿವಾಹವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಆಯಿಷಾ ಪೋಷಕರು ನಾಪತ್ತೆ ದೂರು ದಾಖಲಿಸಿದ್ದಾರೆ. ಬಜರಂಗದಳ ಕಾರ್ಯಕರ್ತನೇ ಅಂತರ್ ಧರ್ಮೀಯ ವಿವಾಹವಾಗಿರುವುದು ಕರಾವಳಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular