HomeKarnatakaBig Update: ಬಾಗಲಕೋಟೆ-ಕುಡಚಿ ರೈಲು ಮಾರ್ಗ, ಬಿಗ್ ಅಪ್‌ಡೇಟ್

Big Update: ಬಾಗಲಕೋಟೆ-ಕುಡಚಿ ರೈಲು ಮಾರ್ಗ, ಬಿಗ್ ಅಪ್‌ಡೇಟ್

ಬಾಗಲಕೋಟೆ-ಕುಡಚಿ ನಡುವಿನ ರೈಲು ಮಾರ್ಗ ಕಾಮಗಾರಿ ವೇಗವಾಗಿ ಸಾಗುತ್ತಿದ್ದು 2026ರ ಹೊತ್ತಿಗೆ ಬಹುತೇಕವಾಗಿ ಆರಂಭವಾಗಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದರು.

ಈಗ ರೈಲ್ವೆ ಇಲಾಖೆಯೇ ಈ ಕುರಿತು ಬಿಗ್ ಅಪ್‌ಡೇಟ್ ನೀಡಿದೆ. ಕಾಮಗಾರಿ ಪೂರ್ಣವಾಗಿರುವ ರೈಲು ಮಾರ್ಗದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಯೋಜನೆ ಅಪ್‌ಡೇಟ್; ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ರೈಲ್ವೆ ಇಲಾಖೆ, ಬಾಗಲಕೋಟೆ-ಕುಡಚಿ ಹೊಸ ರೈಲು ಮಾರ್ಗ ಯೋಜನೆ (142 ಕಿ.ಮೀ.)  37.3 ಕಿ.ಮೀ ರೈಲು ಮಾರ್ಗ ಕಾರ್ಯಾರಂಭ ಎಂದು ಹೇಳಿದೆ. 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಗಲಕೋಟೆ ಮತ್ತು ಬೆಳಗಾವಿಯ ನಡುವೆ ನೇರ ರೈಲು ಸಂಪರ್ಕ ಕಲ್ಪಿಸುವ ಮೂಲಕ ಉತ್ತರ ಕರ್ನಾಟಕದ ಸಂಪರ್ಕ ವ್ಯವಸ್ಥೆಗೆ ಹೆಚ್ಚಿನ ವೇಗ ನೀಡಲಿದೆ.  ಕಬ್ಬು, ಆಹಾರ ಧಾನ್ಯಗಳು ಮತ್ತು ಬೇಳೆಕಾಳುಗಳ ಸಮರ್ಥ ಸಾಗಣೆಯನ್ನು ಖಚಿತಪಡಿಸಲಿದೆ ಎಂದು ತಿಳಿಸಿದೆ.

142 ಕಿ.ಮೀ. ಉದ್ದದ ಬಾಗಲಕೋಟೆ-ಕುಡಚಿ ನೂತನ ರೈಲು ಮಾರ್ಗದ ಅಂದಾಜು ವೆಚ್ಚ 1,530 ಕೋಟಿ ರೂ.ಗಳು. ಬೆಳಗಾವಿ ಜಿಲ್ಲೆಯ ಮೂಲಕ ಗೋವಾ ಹಾಗೂ ಮುಂಬೈಗೆ ಸಂಪರ್ಕ ಕಲ್ಪಿಸುವ ಪ್ರಮುಖ ಯೋಜನೆ ಇದಾಗಿದೆ.

ಈ ಯೋಜನೆ ಬಾಗಲಕೋಟೆ, ಮುಧೋಳ, ಜಮಖಂಡಿ ಮತ್ತು ಬೆಳಗಾವಿ ಜಿಲ್ಲೆಯ ರಾಮದುರ್ಗ, ರಾಯದುರ್ಗದ ಮೂಲಕ ಹಾದು ಹೋಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಲಾ 50:50ರ ಅನುದಾನ ಹಂಚಿಕೆ ಅನುಪಾತದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಉತ್ತಮ ವ್ಯವಸ್ಥೆ ಆಗುವ ಜೊತೆಗೆ ಗೋವಾ ಬಂದರಿಗೆ ಸರಕು-ಸಾಗಣೆಯನ್ನು ಮಾಡಲು ಈ ಮಾರ್ಗ ಅನುಕೂಲಕರವಾಗಿದೆ. 2010ರಲ್ಲಿ ಈ ರೈಲು ಮಾರ್ಗ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿತ್ತು, ವಿವಿಧ ಕಾರಣಕ್ಕೆ ಯೋಜನೆ ವಿಳಂಬವಾಗಿದೆ.

ಬಳ್ಳಾರಿ ಜಿಲ್ಲೆಯ ಸಂಡೂರಿನಿಂದ ಗೋವಾ ಬಂದರಿಗೆ ಕಬ್ಬಿಣದ ಅದಿರು ಸಾಗಣೆ ಮಾಡಲು ಬ್ರಿಟಿಷರು 1894ರಲ್ಲಿ ಮೊದಲ ಬಾರಿಗೆ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಪ್ರಸ್ತಾವನೆ ಮಾಡಿದ್ದರು. 1912 ಮತ್ತು 1920ರಲ್ಲಿ ಎರಡು ಮಾರ್ಗ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆದಿತ್ತು. ಆದರೆ ಯೋಜನೆ ಕಾರ್ಯಗತವಾಗಲಿಲ್ಲ.

1990ರಲ್ಲಿ ಜಮಖಂಡಿಯ ಸಿದ್ದು ನ್ಯಾಮಗೌಡ ಕೇಂದ್ರ ಸಚಿವರಾದರು. ಆಗ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಗೆ ಮರು ಜೀವ ಬಂದಿತು. 1993ರಲ್ಲಿ ನಡೆದ 3ನೇ ಸಮೀಕ್ಷೆ ಆರ್ಥಿಕವಾಗಿ ಯೋಜನೆ ಕಾರ್ಯ ಸಾಧುವಲ್ಲ ಎಂದು ಹೇಳಿತು.

ಜನಪ್ರತಿನಿಧಿಗಳ ಒತ್ತಡ, ಜನರ ಹೋರಾಟದ ಫಲವಾಗಿ 2007ರಲ್ಲಿ 4ನೇ ಸಮೀಕ್ಷೆ ನಡೆಯಿತು. 2010ರಲ್ಲಿ986.30 ಕೋಟಿ ರೂ. ಮೊತ್ತದ ಯೋಜನೆಗೆ ಒಪ್ಪಿಗೆ ನೀಡಲಾಯಿತು. ಇದರಲ್ಲಿ ರಾಜ್ಯ ಮತ್ತು ಕೇಂದ್ರದ ವೆಚ್ಚ ಹಂಚಿಕೆ ಶೇ 50:50 ಆಗಿತ್ತು.

ರಾಜ್ಯ ಸರ್ಕಾರ ಶೇ 50ರಷ್ಟು ಅನುದಾನ ಭರಿಸುವ ಜೊತೆಗೆ ಉಚಿತವಾಗಿ ಯೋಜನೆಗೆ ಭೂಮಿ ನೀಡುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಬಾಗಲಕೋಟೆ-ಖಜ್ಜಿಡೋಣಿ ನಡುವಿನ ಮಾರ್ಗ ಸಂಪೂರ್ಣ ಪೂರ್ಣಗೊಂಡಿದೆ.

ಈಗ ರೈಲ್ವೆ ಇಲಾಖೆ ತನ್ನ ಪೋಸ್ಟ್‌ನಲ್ಲಿ ಬಾಗಲಕೋಟೆ-ಕುಡಚಿ ರೈಲು ಯೋಜನೆಯಲ್ಲಿ (142 ಕಿ.ಮೀ.)  37.3 ಕಿ.ಮೀ ರೈಲು ಮಾರ್ಗ ಕಾರ್ಯಾರಂಭ ಎಂದು ಹೇಳಿದೆ. ಈ ಮೂಲಕ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ ನೀಡಿದೆ. 

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular