HomeLatest Newsಬಾಗಲಕೋಟೆ ಬೈ ಎಲೆಕ್ಷನ್: ಮುಗಿದ ಮತದಾನ, ಶುರುವಾಯ್ತು ಸೋಲು-ಗೆಲುವಿನ ಲೆಕ್ಕಾಚಾರ ಯಾರಿಗೆ ಪ್ಲಸ್? ಯಾರಿಗೆ ಮೈನಸ್?

ಬಾಗಲಕೋಟೆ ಬೈ ಎಲೆಕ್ಷನ್: ಮುಗಿದ ಮತದಾನ, ಶುರುವಾಯ್ತು ಸೋಲು-ಗೆಲುವಿನ ಲೆಕ್ಕಾಚಾರ ಯಾರಿಗೆ ಪ್ಲಸ್? ಯಾರಿಗೆ ಮೈನಸ್?

ಬಾಗಲಕೋಟೆ: ಶಾಸಕ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆ ಅಂತ್ಯಗೊಂಡಿದೆ. ಈಗ ಎಲ್ಲರ ಕಣ್ಣು ಮೇ 4ರ ಫಲಿತಾಂಶದತ್ತ ನೆಟ್ಟಿದ್ದು, ಮತದಾನದ ಶೇಕಡಾವಾರು ಅಂಕಿ-ಅಂಶಗಳು ಅಭ್ಯರ್ಥಿಗಳಲ್ಲಿ ನಡುಕ ಹುಟ್ಟಿಸಿವೆ.

ಮತದಾನದ ಫೈನಲ್ ರಿಪೋರ್ಟ್:ಈ ಬಾರಿ ಕ್ಷೇತ್ರದಲ್ಲಿ ಶೇ. 68.74ರಷ್ಟು ಮತದಾನವಾಗಿದೆ. ಇದು 2023ರ ಸಾರ್ವತ್ರಿಕ ಚುನಾವಣೆಗಿಂತ (ಶೇ. 69.40) ಸ್ವಲ್ಪ ಕಡಿಮೆ ಇರುವುದು ವಿಶೇಷ.

ನಗರ vs ಗ್ರಾಮೀಣ: ಯಾರಿಗೆ ಲಾಭ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಗರ ಭಾಗದಲ್ಲಿ ನೀರಸ ಪ್ರತಿಕ್ರಿಯೆ: ನಗರ ಪ್ರದೇಶದಲ್ಲಿ ಕೇವಲ ಶೇ. 61.24ರಷ್ಟು ಮತದಾನವಾಗಿದೆ. ಸಾಮಾನ್ಯವಾಗಿ ನಗರದಲ್ಲಿ ಮತದಾನ 70% ದಾಟಿದರೆ ಬಿಜೆಪಿಗೆ ಲಾಭ ಎಂಬ ಲೆಕ್ಕಾಚಾರವಿತ್ತು. ಆದರೆ ಮತದಾನ ಕುಸಿತವಾಗಿರುವುದು ಕೇಸರಿ ಪಡೆಯಲ್ಲಿ ಆತಂಕ ಮೂಡಿಸಿದೆ.

ಗ್ರಾಮೀಣ ಭಾಗದಲ್ಲಿ ಬಂಫರ್ ಮತದಾನ: ಗ್ರಾಮೀಣ ಭಾಗದಲ್ಲಿ ಬರೋಬ್ಬರಿ ಶೇ. 74.61ರಷ್ಟು ಭರ್ಜರಿ ವೋಟಿಂಗ್ ಆಗಿದೆ. ಮೊದಲಿನಿಂದಲೂ ಗ್ರಾಮೀಣ ಮತಗಳನ್ನೇ ನಂಬಿಕೊಂಡಿರುವ ಕಾಂಗ್ರೆಸ್ ಪಾಳಯದಲ್ಲಿ ಈ ಅಂಕಿ-ಅಂಶ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ.

ಕೈಕೊಟ್ಟವೇ ಗ್ಯಾರಂಟಿ ಯೋಜನೆಗಳು?

ಕಾಂಗ್ರೆಸ್ ಈ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಮತ್ತು ಗ್ಯಾರಂಟಿ ಯೋಜನೆಗಳನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಆದರೆ ಮತದಾನದ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದೆ.

ಫಲಿತಾಂಶದ ಕುತೂಹಲ:

ನಗರದ ವೋಟಿಂಗ್ ಟೆನ್ಷನ್ ಬಿಜೆಪಿಗೆ ಕಾಡುತ್ತಿದ್ದರೆ ಮಹಿಳೆಯರ ಮತದಾನದ ಇಳಿಕೆ ಕಾಂಗ್ರೆಸ್‌ಗೆ ಚಿಂತೆಯುಂಟು ಮಾಡಿದೆ. ಹಠಕ್ಕೆ ಬಿದ್ದವರಂತೆ ಉಭಯ ಪಕ್ಷಗಳು ಅಖಾಡಕ್ಕಿಳಿದಿದ್ದ ಬಾಗಲಕೋಟೆಯ ಈ ಕದನದಲ್ಲಿ ಮತದಾರ ಪ್ರಭು ಯಾರಿಗೆ ಹರಸಿದ್ದಾನೆ ಎಂಬುದು ಮೇ 4ರಂದು ತಿಳಿಯಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular