HomeKarnatakaBREAKING NEWS: 4 ವರ್ಷದ ಬಾಲಕನ ಮೇಲೆ ಹರಿದ ಶಾಲಾ ಬಸ್; ಸ್ಥಳದಲ್ಲೇ ಸಾವು

BREAKING NEWS: 4 ವರ್ಷದ ಬಾಲಕನ ಮೇಲೆ ಹರಿದ ಶಾಲಾ ಬಸ್; ಸ್ಥಳದಲ್ಲೇ ಸಾವು

ಬಾಗಲಕೋಟೆ: ನಾಲ್ಕು ವರ್ಷದ ಬಾಲಕನ ಮೇಲೆ ಖಾಸಗಿ ಶಾಲೆಯ ಬಸ್ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬರಗಿ ಕ್ರಾಸ್ ಬಳಿ ನಡೆದಿದೆ.

ಸಂಗಣ್ಣ ಹೊಸೂರು ಎಂಬುವವರ ಪುತ್ರ ನಾಲ್ಕು ವರ್ಷದ ಅಭಿನಂದನ್ ಮೃತ ಬಾಲಕ. ವೇಗವಾಗಿ ಬಂದ ಶಾಲಾ ಬಸ್ ಬಾಲಕನ ಮೇಲೆಯೇ ಹರಿದು ಹೋಗಿದೆ. ಬಾಲಕನ ಕೈ ತುಂಡಾಗಿದ್ದು, ದೇಹ ಛಿದ್ರ ಛಿದ್ರಗೊಂಡಿದೆ.

ಅಪಘಾತದ ಭೀಕರತೆಗೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular