ಮದ್ಯದ ಬಾಟಲಿಯೊಳಗೆ ಮದ್ಯ ಬಿಟ್ಟರೆ ಬೇರೇನಾದರೂ ಇರಲು ಸಾಧ್ಯವೇ? ಆದರೆ, ಹೈದರಾಬಾದ್‘ನ ಮಲ್ಲಾಪುರದಲ್ಲಿ ನಡೆದ ಘಟನೆಯೊಂದು ಮದ್ಯಪ್ರಿಯರನ್ನು ಬೆಚ್ಚಿಬೀಳಿಸಿದೆ. ಇಲ್ಲಿನ ಜೆಪಿ ವೈನ್ಸ್ ಎಂಬ ಮದ್ಯದಂಗಡಿಯಲ್ಲಿ ಗ್ರಾಹಕರೊಬ್ಬರು ಖರೀದಿಸಿದ ಬೀರ್ ಬಾಟಲ್ ಒಳಗಡೆ ಬದುಕಿರುವ ಮೀನಿನ ಮರಿಯೊಂದು ಈಜುತ್ತಿರುವುದು ಪತ್ತೆಯಾಗಿದೆ!
ಹೈದರಾಬಾದ್ನ ಮಲ್ಲಾಪುರ ಎಂಬಲ್ಲಿ ಗ್ರಾಹಕರೊಬ್ಬರು ಸ್ಥಳೀಯ ಮದ್ಯದಂಗಡಿಯಿಂದ ಬೀರ್ ಬಾಟಲ್ ಖರೀದಿಸಿದ್ದರು. ಬಾಟಲ್ ತೆರೆಯುವ ಮುನ್ನ ಗಮನಿಸಿದಾಗ ಅದರೊಳಗೆ ಬದುಕಿರುವ ಮೀನಿನ ಮರಿಯೊಂದು ಈಜುತ್ತಿರುವುದು ಕಂಡುಬಂದಿದೆ.
ಈ ದೃಶ್ಯವನ್ನು ಗ್ರಾಹಕರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ “ಶಾಕಿಂಗ್ ವಿಡಿಯೋ” ಎಂಬ ಹೆಸರಿನಲ್ಲಿ ಭಾರಿ ವೈರಲ್ ಆಗುತ್ತಿದೆ.
ಬಾಟಲ್ ಸೀಲ್ ಆಗಿದ್ದರೂ ಅದರೊಳಗೆ ಮೀನು ಹೇಗೆ ಬಂತು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಈ ದೃಶ್ಯವನ್ನು ಗ್ರಾಹಕರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಮದ್ಯ ತಯಾರಿಕಾ ಕಂಪನಿಗಳ ನೈರ್ಮಲ್ಯ ಮತ್ತು ಗುಣಮಟ್ಟದ ತಪಾಸಣೆಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅಬಕಾರಿ ಇಲಾಖೆ ತಕ್ಷಣವೇ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಈ ಘಟನೆಯು ಮದ್ಯ ತಯಾರಿಕಾ ಘಟಕಗಳಲ್ಲಿನ ನೈರ್ಮಲ್ಯ ಮತ್ತು ಗುಣಮಟ್ಟದ ತಪಾಸಣೆಯ ಬಗ್ಗೆ ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಆತಂಕ ಮೂಡಿಸಿದೆ.ಬಾಟಲಿಯೊಳಗೆ ಮೀನು ಹೇಗೆ ಬಂತು ಎಂಬ ಬಗ್ಗೆ ಅಬಕಾರಿ ಇಲಾಖೆ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

