HomeLifestyleಸುಲಭವಾಗಿ ಮನೆಯಲ್ಲೇ ಮಾಡಿ ಬೇಬಿ ಕಾರ್ನ್ ಫ್ರೈ

ಸುಲಭವಾಗಿ ಮನೆಯಲ್ಲೇ ಮಾಡಿ ಬೇಬಿ ಕಾರ್ನ್ ಫ್ರೈ

ಬೇಬಿ ಕಾರ್ನ್ ಫ್ರೈಯನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದಾಗಿದೆ. ಯಾವುದೇ ಪಾರ್ಟಿಯಿರಲಿ ಕೆಲವೇ ಕ್ಷಣಗಳಲ್ಲಿ ತಯಾರಾಗುವ ರೆಸಿಪಿಯಲ್ಲಿ ಇದೂ ಒಂದು.

ಬೇಬಿ ಕಾರ್ನ್ ಫ್ರೈ ಮಾಡಲು ಬೇಕಾಗುವ ಪದಾರ್ಥ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಕಪ್ ಬೇಬಿ ಕಾರ್ನ್

ಒಂದು ಕಪ್ ಕಡಲೆ ಹಿಟ್ಟು

ಒಂದು ಈರುಳ್ಳಿ

ಒಂದು ಕಪ್ ಬ್ರೆಡ್ ಹುಡಿ

ಒಂದು ಕ್ಯಾಪ್ಸಿಕಂ

ಒಂದು ಸಣ್ಣ ಚಮಚ ಕೆಂಪು ಮೆಣಸಿನ ಪುಡಿ

ಉಪ್ಪು ರುಚಿಗೆ ತಕ್ಕಷ್ಟು

ಎಣ್ಣೆ ಕರಿಯಲು

ಬೇಬಿ ಕಾರ್ನ್ ಫ್ರೈ ಮಾಡುವ ವಿಧಾನ :

ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಲು ಇಡಿ. ಇನ್ನೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಮೆಣಸು, ಉಪ್ಪನ್ನು ಹಾಕಿ ದಪ್ಪ ಮಿಶ್ರಣ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಮೇಲೆ ಕತ್ತರಿಸಿದ ಕ್ಯಾಪ್ಸಿಕಂ ಹಾಗೂ ಕತ್ತರಿಸಿದ ಈರುಳ್ಳಿಯನ್ನು ಎಣ್ಣೆಗೆ ಹಾಕಿ ಫ್ರೈ ಮಾಡಿ.

ನಂತ್ರ ಬೇಬಿ ಕಾರ್ನ್ ಪೀಸನ್ನು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ನಂತ್ರ ಬ್ರೆಡ್ಡಿನ ಹುಡಿಯಲ್ಲಿ ಹೊರಳಿಸಿ ಎಣ್ಣೆಯಲ್ಲಿ ಬಿಡಿ. ಬೇಬಿ ಕಾರ್ನ್ ಗೋಲ್ಡನ್ ಬಣ್ಣಕ್ಕೆ ಬರ್ತಿದ್ದಂತೆ ತೆಗೆದು, ಕರಿದ ಈರುಳ್ಳಿ, ಕ್ಯಾಪ್ಸಿಕಂ ಮೇಲೆ ಉದುರಿಸಿ ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular