HomeIndiaBREAKING NEWS: ಬಾಬಾ ಸಿದ್ದೀಕಿ ಪುತ್ರನಿಗೂ ಈಗ ಹತ್ಯೆ ಬೆದರಿಕೆ

BREAKING NEWS: ಬಾಬಾ ಸಿದ್ದೀಕಿ ಪುತ್ರನಿಗೂ ಈಗ ಹತ್ಯೆ ಬೆದರಿಕೆ

ವಾಣಿಜ್ಯ ನಗರಿ ಮುಂಬೈನಲ್ಲಿ ಇತ್ತೀಚೆಗಷ್ಟೇ ಎನ್.ಸಿ.ಪಿ (ಅಜಿತ್‌ ಪವಾರ್‌ ಬಣ) ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು.

ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಸೇರಿದಂತೆ ಬಾಲಿವುಡ್‌ ಸೆಲೆಬ್ರೆಟಿಗಳ ಅತ್ಯಾಪ್ತರಾಗಿದ್ದ ಬಾಬಾ ಸಿದ್ದೀಕಿ ತಾವು ಏರ್ಪಡಿಸುತ್ತಿದ್ದ ಇಫ್ತಾರ್‌ ಕೂಟಗಳ ಕಾರಣಕ್ಕೆ ಬಹಳಷ್ಟು ಪ್ರಸಿದ್ದಿ ಗಳಿಸಿದ್ದರು.

ಬಾಬಾ ಸಿದ್ದೀಕಿ ಹತ್ಯೆ ಬೆನ್ನಲ್ಲೇ ಲಾರೆನ್ಸ್‌ ಬಿಷ್ಣೋಯಿ ಮತ್ತವನ ತಂಡದಿಂದ ಕೊಲೆ ಬೆದರಿಕೆ ಎದುರಿಸುತ್ತಿರುವ ನಟ ಸಲ್ಮಾನ್‌ ಖಾನ್‌ ಅವರ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಅಲ್ಲದೇ ಬಾಬಾ ಸಿದ್ದೀಕಿ ಹತ್ಯೆಯನ್ನು ಲಾರೆನ್ಸ್‌ ಬಿಷ್ಣೋಯಿ ಸೂಚನೆ ಮೇರೆಗೆ ಆತನ ಸಹಚರರೇ ಮಾಡಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಹಲವರನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಮಧ್ಯೆ ಗುಂಡಿಕ್ಕಿ ಕೊಲ್ಲಲ್ಪಟ್ಟ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಅವರ ಪುತ್ರ ಜೀಶಾನ್ ಸಿದ್ದೀಕಿ ಅವರಿಗೂ ಶುಕ್ರವಾರ ಸಂಜೆ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದ್ದು, ಅವರಿಗೆ ಭದ್ರತೆ ಒದಗಿಸಲಾಗಿದೆ. ತಮ್ಮ ತಂದೆಯ ಹತ್ಯೆ ಬಳಿಕ ಜೀಶಾನ್‌ ಕೂಡ ಎನ್.ಸಿ.ಪಿ. ಸೇರ್ಪಡೆಗೊಂಡಿದ್ದು, ಇದೀಗ ಹತ್ಯೆ ಬೆದರಿಕೆ ಎದುರಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular