HomeLive NewsOMG : ಇನ್ಫೋಸಿಸ್‌’ನಲ್ಲಿ ₹ 17 ಲಕ್ಷದ ಪ್ಯಾಕೇಜ್ ಸಿಕ್ಕರೂ ಬಿ.ಟೆಕ್ ವಿದ್ಯಾರ್ಥಿನಿ ಆತ್ಮಹತ್ಯೆ.!

OMG : ಇನ್ಫೋಸಿಸ್‌’ನಲ್ಲಿ ₹ 17 ಲಕ್ಷದ ಪ್ಯಾಕೇಜ್ ಸಿಕ್ಕರೂ ಬಿ.ಟೆಕ್ ವಿದ್ಯಾರ್ಥಿನಿ ಆತ್ಮಹತ್ಯೆ.!

ತಿರುಪತಿ: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ಅತ್ಯಂತ ವಿಷಾದನೀಯ ಘಟನೆಯೊಂದು ನಡೆದಿದೆ. ಓದಿನಲ್ಲಿ ಸದಾ ಮುಂದಿದ್ದ, ಉಜ್ವಲ ಭವಿಷ್ಯದ ಕನಸು ಕಂಡಿದ್ದ ಬಿ.ಟೆಕ್ ಅಂತಿಮ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಜ್ವಲ ಭವಿಷ್ಯದ ಕನಸು ಕಂಡು, ಕೈತುಂಬಾ ಸಂಬಳ ಬರುವ ಉದ್ಯೋಗ ಗಿಟ್ಟಿಸಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಅನಿರೀಕ್ಷಿತವಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಿರುಪತಿ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ:

ಮೋಹನ್ ಬಾಬು ವಿಶ್ವವಿದ್ಯಾಲಯದಲ್ಲಿ (MBU) ಬಿ.ಟೆಕ್ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ ಭುವನಾ, ವಿಶ್ವವಿದ್ಯಾಲಯದ ಸಮೀಪವಿರುವ ಖಾಸಗಿ ಹಾಸ್ಟೆಲ್ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.ಭುವನಾ ಕೇವಲ ವಿದ್ಯಾರ್ಥಿನಿಯಲ್ಲ, ತನ್ನ ತರಗತಿಯಲ್ಲಿ ‘ಟಾಪರ್’ ಆಗಿದ್ದರು. ಇತ್ತೀಚಿನ ಪರೀಕ್ಷೆಗಳಲ್ಲಿ ಅವರು ಶೇ. 96 ರಷ್ಟು ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದರು.

ಇನ್ಫೋಸಿಸ್‌’ನಲ್ಲಿ ದೊಡ್ಡ ಉದ್ಯೋಗಾವಕಾಶ: ಅವರ ಪ್ರತಿಭೆಗೆ ಮಾರುಹೋದ ಪ್ರತಿಷ್ಠಿತ ಐಟಿ ಕಂಪನಿ ಇನ್ಫೋಸಿಸ್ (Infosys), ಕ್ಯಾಂಪಸ್ ಸೆಲೆಕ್ಷನ್ ಮೂಲಕ ವಾರ್ಷಿಕ ₹17 ಲಕ್ಷದ ಬೃಹತ್ ಪ್ಯಾಕೇಜ್ ನೀಡಿ ಕೆಲಸಕ್ಕೆ ಆಯ್ಕೆ ಮಾಡಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೃದಯ ವಿದ್ರಾವಕ ಕೊನೆಯ ಮಾತು

ಮೃತ ವಿದ್ಯಾರ್ಥಿನಿ ಭುವನಾ ಅವರು ಈ ತೀವ್ರ ನಿರ್ಧಾರ ತೆಗೆದುಕೊಳ್ಳುವ ಮೊದಲು ತಮ್ಮ ಪೋಷಕರಿಗೆ ಕರೆ ಮಾಡಿದ್ದರು. “ನಮ್ಮ ಮನೆಯ ಎಲ್ಲ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯಲಿವೆ” ಎಂದು ಸಮಾಧಾನದ ಮಾತುಗಳನ್ನಾಡಿದ್ದರು. ಆದರೆ, ಅದೇ ದಿನ ರಾತ್ರಿ ಅವರು ನೇಣಿಗೆ ಶರಣಾಗಿರುವುದು ಪೋಷಕರು ಮತ್ತು ಸ್ನೇಹಿತರಿಗೆ ತೀವ್ರ ಆಘಾತ ತಂದಿದೆ.

ಪ್ರಸ್ತುತ ವಿದ್ಯಾರ್ಥಿನಿಯ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ರುಯಾ ಆಸ್ಪತ್ರೆಯ ಶವಾಗಾರದ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಾವಿನ ಹಿಂದೆ ಯಾವುದಾದರೂ ಒತ್ತಡವಿದೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂದು ಸಮಗ್ರ ತನಿಖೆ ನಡೆಸಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮನವಿ: ಜೀವನದ ಸವಾಲುಗಳು ಎಷ್ಟೇ ಕಠಿಣವಾಗಿದ್ದರೂ ಆತ್ಮಹತ್ಯೆ ಅದಕ್ಕೆ ಪರಿಹಾರವಲ್ಲ. ಮಾನಸಿಕ ಒತ್ತಡವಿದ್ದಲ್ಲಿ ದಯವಿಟ್ಟು ಸಹಾಯವಾಣಿಗಳನ್ನು ಅಥವಾ ಹಿತೈಷಿಗಳನ್ನು ಸಂಪರ್ಕಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular