HomeLatest NewsBREAKING: ನಾನು ಸತ್ಯವನ್ನೇ ಹೇಳಿದ್ದೇನೆ; ಆಡಿಯೋ ನನ್ನದೇ: ಹೇಳಿಕೆ ಸಮರ್ಥಿಸಿಕೊಂಡ ಶಾಸಕ ಬಿ.ಆರ್.ಪಾಟೀಲ್!

BREAKING: ನಾನು ಸತ್ಯವನ್ನೇ ಹೇಳಿದ್ದೇನೆ; ಆಡಿಯೋ ನನ್ನದೇ: ಹೇಳಿಕೆ ಸಮರ್ಥಿಸಿಕೊಂಡ ಶಾಸಕ ಬಿ.ಆರ್.ಪಾಟೀಲ್!

ಬೆಂಗಳೂರು: ವಸತಿ ಇಲಾಖೆಯಲ್ಲಿ ಹಣ ಪಡೆದು ಮನೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಆರ್.ಪಾಟೀಲ್, ನಾನು ಸತ್ಯವನ್ನೇ ಹೇಳಿದ್ದೇನೆ. ಆ ಆಡಿಯೋ ನನ್ನದೇ. ನನ್ನ ಕ್ಷೇತ್ರಕ್ಕೆ ಮನೆ ಕೊಡಿ ಎಂದು ನಾನು ಕೊಟ್ಟ ನಾಲ್ಕು ಪತ್ರಕ್ಕೂ ಮನೆ ಸಿಕ್ಕಿಲ್ಲ. ನಾನು ನಾಲ್ಕು ಪತ್ರಗಳನ್ನು ಕೊಟ್ಟರೂ ಕ್ಷೇತ್ರಕ್ಕೆ ಮನೆ ಸಿಕ್ಕಿಲ್ಲ. ಪಂಚಾಯಿತಿ ಅಧ್ಯಕ್ಷರು ಮನೆ ತಂದಿದ್ದಾರೆ. ವಸತಿ ಯೋಜನೆ ಮನೆ ಹಂಚಿಕೆಯಲ್ಲಿ ಹಣ ಪಡೆಯಾಗಿದೆ ಎಂದು ಹೇಳಿದರು.

5-6 ಪಂಚಾಯಿತಿಗಳಲ್ಲಿ ಹಣ ಕೊಟ್ಟು ಮನೆ ಪಡೆದುಕೊಂಡಿದ್ದಾರೆ. ಅದು ನನ್ನದೇ ಆಡೀಯೋ. ನಾನು ಸತ್ಯವನ್ನೇ ಹೇಳಿದ್ದೇನೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular