HomeLatest News'ಆಯುಷ್ಮಾನ್' ಫಲಾನುಭವಿಗಳಿಗೆ ಗುಡ್ ನ್ಯೂಸ್ ; ಇನ್ಮುಂದೆ ವಾಟ್ಸಾಪ್‌ನಲ್ಲೇ 'ಆಯುಷ್ಮಾನ್ ಭಾರತ್' ಸೇವೆಗಳು ಲಭ್ಯ.!

‘ಆಯುಷ್ಮಾನ್’ ಫಲಾನುಭವಿಗಳಿಗೆ ಗುಡ್ ನ್ಯೂಸ್ ; ಇನ್ಮುಂದೆ ವಾಟ್ಸಾಪ್‌ನಲ್ಲೇ ‘ಆಯುಷ್ಮಾನ್ ಭಾರತ್’ ಸೇವೆಗಳು ಲಭ್ಯ.!

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸೋಮವಾರ ‘ಆಯುಷ್ಮಾನ್ ಸಾರಥಿ’ (Ayushman Saarthi) ಎಂಬ PM-JAY (ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ) ವಾಟ್ಸಾಪ್ ಚಾಟ್‌ಬಾಟ್‌ಗೆ ಚಾಲನೆ ನೀಡಿದ್ದಾರೆ. ಇದರಿಂದ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳು ಇನ್ನು ಮುಂದೆ ದಿನದ 24 ಗಂಟೆಯೂ, ವಾರದ ಏಳು ದಿನಗಳೂ ಎಲ್ಲಿಂದ ಬೇಕಾದರೂ ಕೇವಲ ವಾಟ್ಸಾಪ್ ಮೂಲಕವೇ ಯೋಜನೆಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಪಡೆಯಬಹುದು.

ಸರ್ಕಾರದ ಮಾಹಿತಿಯ ಪ್ರಕಾರ, ಆಯುಷ್ಮಾನ್ ಕಾರ್ಡ್ ಪಡೆಯಲು, ಯೋಜನೆ ಕುರಿತು ಮಾಹಿತಿ ತಿಳಿಯಲು ಅಥವಾ ದೂರು ಸಲ್ಲಿಸಲು ಇನ್ನು ಮುಂದೆ ಸರ್ಕಾರಿ ಕಚೇರಿ ಅಥವಾ ಕಾಲ್ ಸೆಂಟರ್‌ಗಳಿಗೆ ಹೋಗುವ ಅಗತ್ಯವಿಲ್ಲ. ಈ ಚಾಟ್‌ಬಾಟ್ ನೇರವಾಗಿ PM-JAY ವ್ಯವಸ್ಥೆಗೆ ಸಂಪರ್ಕ ಹೊಂದಿದ್ದು, ತಕ್ಷಣದ (ರಿಯಲ್‌ ಟೈಮ್‌) ಮಾಹಿತಿಯನ್ನು ಒದಗಿಸುತ್ತದೆ.

ವಾಟ್ಸಾಪ್‌ನಲ್ಲಿ ಯಾವೆಲ್ಲಾ ಸೇವೆಗಳು ಲಭ್ಯ ?

  • ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಹತೆ ಪರಿಶೀಲನೆ
  • ಆಯುಷ್ಮಾನ್ ಕಾರ್ಡ್ ಸೃಷ್ಟಿಸುವುದು ಮತ್ತು ಡೌನ್‌ಲೋಡ್ ಮಾಡುವುದು
  • ಇ-ಕೆವೈಸಿ (e-KYC) ಮರುಪರಿಶೀಲನೆ
  • ಆಧಾರ್ ಲಿಂಕ್ ಮಾಡುವುದು
  • ಆಯುಷ್ಮಾನ್ ಕಾರ್ಡ್ ಲಾಕ್ ಹಾಗೂ ಅನ್‌ಲಾಕ್ ಮಾಡುವುದು
  • 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಆಯುಷ್ಮಾನ್ ವಯ ವಂದನ ಕಾರ್ಡ್ ಮಾಹಿತಿ
  • ಯೋಜನೆಯ ವಾಲೆಟ್ ಬ್ಯಾಲೆನ್ಸ್ ಮತ್ತು ಚಿಕಿತ್ಸೆ ದಾಖಲೆಗಳ ಪರಿಶೀಲನೆ
  • ಸಮೀಪದ ನೋಂದಾಯಿತ (Empanelled) ಆಸ್ಪತ್ರೆಗಳನ್ನು ಹುಡುಕುವುದು
  • ದೂರು ದಾಖಲಿಸುವುದು, ಅದರ ಸ್ಥಿತಿ ಪರಿಶೀಲಿಸುವುದು ಅಥವಾ ದೂರು ಹಿಂಪಡೆಯುವುದು
  • ಕಾಲ್‌ಬ್ಯಾಕ್‌ಗೆ ವಿನಂತಿ ಸಲ್ಲಿಸುವುದು
  • ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸೇವೆಗಳ ಕುರಿತು ಪ್ರತಿಕ್ರಿಯೆ ನೀಡುವುದು

ಸರ್ಕಾರದ ಪ್ರಕಾರ, ಆಯುಷ್ಮಾನ್ ಸಾರಥಿ ಮೂಲಕ ಆರೋಗ್ಯ ಸೇವೆಗಳು ಮತ್ತಷ್ಟು ಸುಲಭ, ವೇಗ ಮತ್ತು ಪಾರದರ್ಶಕವಾಗಲಿವೆ. ಇದರಿಂದ ಸರ್ಕಾರಿ ಕಚೇರಿಗಳು ಹಾಗೂ ಕಾಲ್ ಸೆಂಟರ್‌ಗಳ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಯುಷ್ಮಾನ್ ಸಾರಥಿ ಬಳಸುವುದು ಹೇಗೆ?

  • +91 72908 23838 ಸಂಖ್ಯೆಗೆ ವಾಟ್ಸಾಪ್‌ನಲ್ಲಿ “Hi” ಎಂದು ಸಂದೇಶ ಕಳುಹಿಸಿ.
  • ಅಥವಾ ಅಧಿಕೃತ QR ಕೋಡ್ ಸ್ಕ್ಯಾನ್ ಮಾಡಿ ಸೇವೆಯನ್ನು ಆರಂಭಿಸಬಹುದು.
  • ಈ ಸೇವೆ 24×7 ಲಭ್ಯವಿರುತ್ತದೆ.

ಆಯುಷ್ಮಾನ್ ಸಾರಥಿ ಚಾಟ್‌ಬಾಟ್ ಎಂದರೇನು?

ಆಯುಷ್ಮಾನ್ ಸಾರಥಿ ಚಾಟ್‌ಬಾಟ್ ಅನ್ನು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಫಲಾನುಭವಿಗಳಿಗಾಗಿ ಕೇಂದ್ರ ಸರ್ಕಾರ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಹಾಗೂ ಆರೋಗ್ಯ ಸಚಿವಾಲಯವು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಹೊಸ ಡಿಜಿಟಲ್ ಆರೋಗ್ಯ ಸೇವೆಯಾಗಿದೆ.

ಇದು ವಾಟ್ಸಾಪ್ ಆಧಾರಿತ ಚಾಟ್‌ಬಾಟ್ ಆಗಿದ್ದು, ಇದರ ಮೂಲಕ ಆಯುಷ್ಮಾನ್ ಯೋಜನೆಗೆ ಸಂಬಂಧಿಸಿದ ಮಾಹಿತಿ ಹಾಗೂ ವಿವಿಧ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಜನರು ಸರ್ಕಾರಿ ಆಸ್ಪತ್ರೆಗಳು ಅಥವಾ ಸಹಾಯ ಕೇಂದ್ರಗಳಿಗೆ ತೆರಳುವ ಅಗತ್ಯವಿಲ್ಲದೆ ತಮ್ಮ ಮೊಬೈಲ್‌ನಲ್ಲೇ ಈ ಸೇವೆಗಳನ್ನು ಪಡೆಯುವಂತಾಗುವುದು ಇದರ ಪ್ರಮುಖ ಉದ್ದೇಶವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular