HomeLifestyleಆಯುರ್ವೇದದ ಪ್ರಕಾರ ಇಂಟರ್ಮಿಟೆಂಟ್ ಫಾಸ್ಟಿಂಗ್: ಜೀರ್ಣಕ್ರಿಯೆ ಸುಧಾರಿಸಲು ಅನುಸರಿಸಬೇಕಾದ ಮಾರ್ಗಗಳು

ಆಯುರ್ವೇದದ ಪ್ರಕಾರ ಇಂಟರ್ಮಿಟೆಂಟ್ ಫಾಸ್ಟಿಂಗ್: ಜೀರ್ಣಕ್ರಿಯೆ ಸುಧಾರಿಸಲು ಅನುಸರಿಸಬೇಕಾದ ಮಾರ್ಗಗಳು

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಲು ಮತ್ತು ಆರೋಗ್ಯ ವೃದ್ಧಿಸಿಕೊಳ್ಳಲು ಪ್ರಪಂಚದಾದ್ಯಂತ ಜನಪ್ರಿಯವಾಗುತ್ತಿರುವ ಆಹಾರ ಪದ್ಧತಿ ಎಂದರೆ ಇಂಟರ್ಮಿಟೆಂಟ್ ಫಾಸ್ಟಿಂಗ್ (Intermittent Fasting). ಅಂದರೆ ದಿನದ ನಿರ್ದಿಷ್ಟ ಗಂಟೆಗಳ ಕಾಲ ಉಪವಾಸವಿದ್ದು, ಉಳಿದ ಗಂಟೆಗಳಲ್ಲಿ ಮಾತ್ರ ಆಹಾರ ಸೇವಿಸುವುದು.

ಆದರೆ, ಈ ಆಧುನಿಕ ಉಪವಾಸ ಪದ್ಧತಿಯನ್ನು ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಉಪವಾಸ ಅಥವಾ ಲಂಘನ (ದೇಹವನ್ನು ಹಗುರಗೊಳಿಸುವ ಕ್ರಿಯೆ) ಎಂದು ಕರೆಯಲಾಗಿದೆ. ಆಯುರ್ವೇದದ ಪ್ರಕಾರ, ಉಪವಾಸ ಮಾಡುವುದರಿಂದ ದೇಹದ ಜಠರಾಗ್ನಿ (Digestive Fire) ಚುರುಕಾಗುತ್ತದೆ ಮತ್ತು ಶೇಖರಣೆಯಾಗಿರುವ ವಿಷಕಾರಿ ಅಂಶಗಳು (ಟಾಕ್ಸಿನ್ಸ್) ಹೊರಹೋಗುತ್ತವೆ.

ನಿಮ್ಮ ದೋಷಕ್ಕೆ (Dosha) ತಕ್ಕಂತೆ ಉಪವಾಸ ಮಾಡಿ:

ಆಯುರ್ವೇದದ ಪ್ರಕಾರ ಪ್ರತಿಯೊಬ್ಬರ ದೇಹದ ಪ್ರಕೃತಿ ವಿಭಿನ್ನವಾಗಿರುತ್ತದೆ. ಆದ್ದರಿಂದ ನಿಮ್ಮ ದೋಷಕ್ಕೆ ಅನುಗುಣವಾಗಿ ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡಬೇಕು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾತ ದೋಷ (Vata Dosha): ವಾತ ಪ್ರಕೃತಿಯವರು ಅತಿ ಹೆಚ್ಚು ಸಮಯ ಉಪವಾಸ ಇರಬಾರದು. ಇದು ಆತಂಕ ಮತ್ತು ಚರ್ಮದ ಶುಷ್ಕತೆಯನ್ನು ಹೆಚ್ಚಿಸಬಹುದು. ಇವರಿಗೆ 12 ಗಂಟೆಗಳ ಉಪವಾಸ ಸೂಕ್ತ.

ಪಿತ್ತ ದೋಷ (Pitta Dosha): ಪಿತ್ತ ಪ್ರಕೃತಿಯವರಲ್ಲಿ ಜಠರಾಗ್ನಿ ತೀಕ್ಷ್ಣವಾಗಿರುತ್ತದೆ. ಇವರು ಉಪವಾಸದ ಹೆಸರಲ್ಲಿ ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡಬಾರದು. ಇವರಿಗೆ 14 ರಿಂದ 16 ಗಂಟೆಗಳ ಉಪವಾಸ ಪರ್ಫೆಕ್ಟ್.

ಕಫ ದೋಷ (Kapha Dosha): ಕಫ ಪ್ರಕೃತಿಯವರಲ್ಲಿ ಜೀರ್ಣಕ್ರಿಯೆ ಮಂದವಾಗಿರುತ್ತದೆ ಮತ್ತು ತೂಕ ಬೇಗ ಹೆಚ್ಚುತ್ತದೆ. ಇವರು ಧೈರ್ಯವಾಗಿ 16 ರಿಂದ 18 ಗಂಟೆಗಳ ಕಾಲ ಉಪವಾಸ ಮಾಡಬಹುದು.

ಆಯುರ್ವೇದ ಉಪವಾಸದ ಪ್ರಮುಖ ನಿಯಮಗಳು:

ಬಿಸಿ ನೀರಿನ ಬಳಕೆ: ಉಪವಾಸದ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೋಲ್ಡ್ ವಾಟರ್ ಅಥವಾ ಐಸ್ ಜ್ಯೂಸ್ ಕುಡಿಯಬೇಡಿ. ಜೀರ್ಣಕ್ರಿಯೆ ಹೆಚ್ಚಿಸಲು ಕೇವಲ ಉಗುರುಬೆಚ್ಚಗಿನ ನೀರು ಅಥವಾ ಗಿಡಮೂಲಿಕೆಗಳ ಚಹಾವನ್ನು ಕುಡಿಯಿರಿ.

ತಾಜಾ ಮತ್ತು ಬಿಸಿ ಆಹಾರ: ಉಪವಾಸ ಮುಗಿಸಿ ಆಹಾರ ಸೇವಿಸುವಾಗ ಹಸಿ ತರಕಾರಿ (ಸಲಾದ್) ಅಥವಾ ತಣ್ಣಗಿನ ಆಹಾರ ತಿನ್ನಬೇಡಿ. ಸುಲಭವಾಗಿ ಜೀರ್ಣವಾಗುವ ಬಿಸಿ ಸೂಪ್, ಕಿಚಡಿ, ಗಂಜಿ ಅಥವಾ ಬೇಯಿಸಿದ ತರಕಾರಿಗಳನ್ನು ಸೇವಿಸಿ.

ಮಸಾಲೆಗಳ ಬಳಕೆ: ಆಹಾರದಲ್ಲಿ ಶುಂಠಿ, ಜೀರಿಗೆ, ಕೊತ್ತಂಬರಿ, ಕಾಳುಮೆಣಸು, ಅರಿಶಿನ ಮತ್ತು ದಾಲ್ಚಿನ್ನಿಯಂತಹ ಜೀರ್ಣಕ್ರಿಯೆಗೆ ಸಹಕಾರಿಯಾದ ಮಸಾಲೆಗಳನ್ನು ಬಳಸಿ.

ಇಂಟರ್ಮಿಟೆಂಟ್ ಫಾಸ್ಟಿಂಗ್‌ಗೆ ಸೂಕ್ತವಾದ ಪತಂಜಲಿ ಉತ್ಪನ್ನಗಳು:

ಉಪವಾಸದ ಅವಧಿಯ ನಂತರ ದೇಹಕ್ಕೆ ನೈಸರ್ಗಿಕ ಮತ್ತು ಪೌಷ್ಟಿಕಯುಕ್ತ ಆಹಾರ ನೀಡುವುದು ಮುಖ್ಯ. ಅದಕ್ಕಾಗಿ ಪತಂಜಲಿಯ ಈ ಕೆಳಗಿನ ಆಯುರ್ವೇದ ಉತ್ಪನ್ನಗಳು ಅತ್ಯುತ್ತಮ ಆಯ್ಕೆಯಾಗಿವೆ:

ಪತಂಜಲಿ ಪುಷ್ಟಾಹಾರ್ ದಾಲಿಯಾ : ಗೋಧಿ, ಹೆಸರು ಬೇಳೆ, ಬಾಜ್ರಾ, ಅಕ್ಕಿ, ಎಳ್ಳು ಮತ್ತು ಓಮಕಾಳುಗಳ (ಅಜ್ವೈನ್) ಪೌಷ್ಟಿಕ ಮಿಶ್ರಣ ಇದಾಗಿದೆ. ಉಪವಾಸ ಮುಗಿಸಿದ ನಂತರ ಲಘು ಉಪಹಾರಕ್ಕೆ ಇದು ಅತ್ಯುತ್ತಮ.

ಪತಂಜಲಿ ಸೋಯಾ ನುಟ್ರಿ ಚಂಕ್ಸ್ (Patanjali Soya Nutri Chunks): ಇದು ಸಸ್ಯಜನ್ಯ ಪ್ರೋಟೀನ್‌ನ (Plant-based Protein) ಉತ್ತಮ ಆಕರವಾಗಿದ್ದು, ದೇಹಕ್ಕೆ ಶಕ್ತಿ ನೀಡುತ್ತದೆ.

ಪತಂಜಲಿ ಅನ್‌ಪಾಲಿಶ್ಡ್ ಮಿಕ್ಸ್ ಪಲ್ಸಸ್ : ಹೆಸರು ಬೇಳೆ, ಚನಾ ದಾಲ್, ಮಸೂರ್ ದಾಲ್ ಒಳಗೊಂಡ ಈ ಪಾಲಿಶ್ ಮಾಡದ ಬೇಳೆಗಳ ಮಿಶ್ರಣವು ಪ್ರೋಟೀನ್ ಮತ್ತು ನೈಸರ್ಗಿಕ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಪೌಷ್ಟಿಕ ಕಿಚಡಿ ಮಾಡಲು ಸೂಕ್ತವಾಗಿದೆ.

ಪತಂಜಲಿ ಮಿಕ್ಸ್ ಡ್ರೈ ಫ್ರೂಟ್ಸ್ ವಿತ್ ಬೆರ್ರಿಸ್ ಅಂಡ್ ಸೀಡ್ಸ್ : ಉಪವಾಸದ ಮಧ್ಯೆ ಹಸಿವಾದಾಗ ಸ್ನ್ಯಾಕ್ಸ್ ರೂಪದಲ್ಲಿ ತಿನ್ನಲು ಬೀಜಗಳು ಮತ್ತು ಒಣಹಣ್ಣುಗಳ ಈ ಮಿಶ್ರಣ ಆರೋಗ್ಯಕರವಾಗಿದೆ.

ಆಯುರ್ವೇದದ ಈ ನಿಯಮಗಳನ್ನು ಪಾಲಿಸುತ್ತಾ, ಪತಂಜಲಿಯ ಶುದ್ಧ ಉತ್ಪನ್ನಗಳನ್ನು ಬಳಸುವುದರಿಂದ ಇಂಟರ್ಮಿಟೆಂಟ್ ಫಾಸ್ಟಿಂಗ್‌ನ ಸಂಪೂರ್ಣ ಲಾಭವನ್ನು ನಿಮ್ಮದಾಗಿಸಿಕೊಳ್ಳಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular