HomeIndiaರೈಲಿನಲ್ಲಿ ಸರಕು ಮಾರಾಟ: ಪ್ರಸಿದ್ಧ ಮಿಮಿಕ್ರಿ ಕಲಾವಿದ ಅರೆಸ್ಟ್​

ರೈಲಿನಲ್ಲಿ ಸರಕು ಮಾರಾಟ: ಪ್ರಸಿದ್ಧ ಮಿಮಿಕ್ರಿ ಕಲಾವಿದ ಅರೆಸ್ಟ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಅವರಂತಹ ರಾಜಕಾರಣಿಗಳನ್ನು ಅನುಕರಿಸುವ ವಿಡಂಬನೆ ವೀಡಿಯೊಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಿರುವ ಅವಧೇಶ್ ದುಬೆ, ರೈಲಿನಲ್ಲಿ ಅಕ್ರಮವಾಗಿ ಉಡುಗೊರೆ ವಸ್ತುಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ವಲ್ಸಾದ್‌ನ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಪ್ರಕರಣ ದಾಖಲಿಸಿದೆ. ಪರವಾನಿಗೆ ಇಲ್ಲದೆ ಇದನ್ನು ಮಾರಾಟ ಮಾಡಿರುವುದಕ್ಕೆ ಕೇಸ್​ ದಾಖಲಾಗಿದೆ.

ವಲ್ಸಾದ್ ರೈಲ್ವೆ ಅಧಿಕಾರಿಗಳ ಪ್ರಕಾರ, ರೈಲಿನಲ್ಲಿ ಅಕ್ರಮವಾಗಿ ಉಡುಗೊರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ದುಬೆ ಅವರನ್ನು ಆರ್‌ಪಿಎಫ್ ಆಕ್ಟ್ ಸೆಕ್ಷನ್ 144 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಮಧ್ಯಾಹ್ನ ಬಿಡುಗಡೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2019 ರಲ್ಲಿ, ಮೊಬೈಲ್ ರೈಲ್ವೇ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಮತ್ತು ಪರವಾನಗಿ ಇಲ್ಲದೆ ರೈಲುಗಳಲ್ಲಿ ಸಾಮಗ್ರಿ ಮಾರಾಟ ಮಾಡುವುದು, ಉಪದ್ರವ ನೀಡುವುದು, ನಿಂದನೀಯ ಅಥವಾ ಅಶ್ಲೀಲ ಭಾಷೆಯನ್ನು ಬಳಸುವುದು, ಇತರರಲ್ಲಿ ಕಾನೂನುಬಾಹಿರ ಪ್ರವೇಶಕ್ಕಾಗಿ 10 ದಿನಗಳ ಸರಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಪುನಃ ಅವರು ಅದೇ ಕೆಲಸ ಮಾಡಿದ್ದು, ಮತ್ತೊಮ್ಮೆ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular