HomeKarnatakaBIG NEWS: ಆಟೋ, ಕ್ಯಾಬ್ ಚಾಲಕರಿಂದ RTO ಕಚೇರಿಗೆ ಮುತ್ತಿಗೆ; ಪೊಲೀಸರನ್ನೇ ತಳ್ಳಿ ಕಚೇರಿಗೆ ನುಗ್ಗಿ...

BIG NEWS: ಆಟೋ, ಕ್ಯಾಬ್ ಚಾಲಕರಿಂದ RTO ಕಚೇರಿಗೆ ಮುತ್ತಿಗೆ; ಪೊಲೀಸರನ್ನೇ ತಳ್ಳಿ ಕಚೇರಿಗೆ ನುಗ್ಗಿ ಆಕ್ರೋಶ

ಬೆಂಗಳೂರು: ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಟೋ, ಕ್ಯಾಬ್ ಚಾಲಕರು ಪ್ರತಿಭಟನೆ ತೀವ್ರಗೊಳಿಸಿದ್ದು, ಆರ್ ಟಿಒ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದೆ.

ಶಾಂತಿನಗರದಲ್ಲಿರುವ ಸಾರಿಗೆ ಇಲಾಖೆಯ ಮುಖ್ಯಕಚೇರಿ ಕಚೇರಿ ಬಳಿ ಆಟೋ, ಕ್ಯಾಬ್ ಸಮೇತವಾಗಿ ಆಗಮಿಸಿದ ಚಾಲಕರು, ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ತಮ್ಮ ಬೇಡಿಕೆ ಈಡೇರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಪ್ರತಿಭಟನಾ ನಿರತ ಆಟೋ ಚಾಲಕರು ಏಕಾಏಕಿ ಆರ್ ಟಿಒ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಪ್ರತಿಭಟನಾಕಾರನ್ನು ತಡೆಯಲು ಮುಂದಾದ ಪೊಲೀಸ್ ಅಧಿಕಾರಿಗಳನ್ನು ತಳ್ಳಿ ಕಚೇರಿ ಒಳಗೆ ನುಗ್ಗಿ ಪ್ರತಿಭಟನೆ ನಡೆಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಟೋ, ಕ್ಯಾಬ್ ಚಾಲಕರ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸಾರಿಗೆ ಅಧಿಕಾರಿಗಳು ಆಟೋ ಚಾಲಕರ ಜೊತೆ ಸಭೆ ನಡೆಸಿದೆ.

For Latest News Updates, Join Our Whatsapp Community🚩
RELATED ARTICLES

Most Popular