ನಿನ್ನೆ ( ಜೂನ್ 4 ) ಪಾಕಿಸ್ತಾನದ ಲಾಹೋರ್‌ನ ಗಡ್ಡಾಫಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 4 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2 -1 ಅಂತರದಿಂದ ವಶಪಡಿಸಿಕೊಂಡಿತು.
ಈ ಮೂಲಕ ಆಸ್ಟ್ರೇಲಿಯಾದ 1999ರ ಬಳಿಕ ಪಾಕ್ ನೆಲದಲ್ಲಿ ಏಕದಿನ ಸರಣಿ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 42 ಓವರ್‌ಗಳಲ್ಲಿ ಕೇವಲ 157 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ಭಾರೀ ಹಿನ್ನಡೆ ಅನುಭವಿಸಿ ಪಾಕಿಸ್ತಾನಕ್ಕೆ 158 ರನ್‌ಗಳ ಸುಲಭ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಪಾಕಿಸ್ತಾನ 41.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು.
ಆಸ್ಟ್ರೇಲಿಯಾ ಇನ್ನಿಂಗ್ಸ್: ತಂಡದ ಪರ ನಾಯಕ ಜೋಶ್ ಇಂಗ್ಲಿಸ್ 65 ರನ್ ಗಳಿಸಿದ್ದು ಬಿಟ್ಟರೆ ಹೊರತುಪಡಿಸಿದರೆ ಉಳಿದ ಯಾವ ಆಟಗಾರನೂ ಸಹ ಉತ್ತಮ ಬ್ಯಾಟಿಂಗ್ ಮಾಡದೇ ಪೆವಿಲಿಯನ್ ಪರೇಡ್ ನಡೆಸಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಮ್ಯಾಥ್ಯೂ ಶಾರ್ಟ್ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಡಕ್ಔಟ್ ಆಗುವ ಮೂಲಕ ತಂಡ ಕೆಟ್ಟ ಆರಂಭ ಪಡೆದುಕೊಂಡಿತು. ಮಾರ್ನಸ್ ಲ್ಯಾಬುಷೇನ್ 19, ಅಲೆಕ್ಸ್ ಕ್ಯಾರಿ 19, ಕ್ಯಾಮೆರಾನ್ ಗ್ರೀನ್ 7, ಮ್ಯಾಟ್ ರೆನ್ಷಾ 4, ಕೂಪರ್ ಕೊನೊಲಿ 3, ಒಲಿವರ್ ಪೀಕ್ 7, ಆಡಂ ಜಂಪಾ 10, ನಾಥನ್ ಎಲ್ಲಿಸ್ 1 ಹಾಗೂ ಮ್ಯಾಥ್ಯೂ ಕುನ್ಹೆಮನ್ ಅಜೇಯ 9 ರನ್ ಕಲೆಹಾಕಿದರು.
ಪಾಕಿಸ್ತಾನದ ಪರ ಶಾಹಿದ್ ಅಫ್ರಿದಿ ಮೂರು ವಿಕೆಟ್, ಅಬ್ರಾರ್ ಅಹ್ಮದ್ ಹಾಗೂ ಶದಬ್ ಖಾನ್ ತಲಾ ಎರಡು ವಿಕೆಟ್ ಮತ್ತು ಹ್ಯಾರಿಸ್ ರೌಫ್ ಒಂದು ವಿಕೆಟ್ ಪಡೆದರು.
ಪಾಕಿಸ್ತಾನ ಇನ್ನಿಂಗ್ಸ್: ತಂಡದ ಪರ ಸಹಿಬ್ಜಾದಾ ಫರ್ಹಾನ್ 6, ಮಾಜ್ ಶದಾಖತ್ 27, ಬಾಬರ್ ಅಜಮ್ 40, ಘಾಜಿ ಘೋರಿ 8, ಸಲ್ಮಾನ್ ಆಘಾ 15, ಅರಾಫತ್ ಮಿನ್ಹಾಸ್ 9, ಅಬ್ದುಲ್ ಸಮದ್ ಅಜೇಯ 18 ಹಾಗೂ ಶದಬ್ ಖಾನ್ ಅಜೇಯ 29 ರನ್ ಬಾರಿಸಿದರು.
ಆಸ್ಟ್ರೇಲಿಯಾ ಪರ ಮ್ಯಾಥ್ಯೂ ಕುನ್ಹೆಮಾನ್ ಮೂರು ವಿಕೆಟ್, ಮ್ಯಾಥ್ಯೂ ರೆನ್‌ಷಾ ಹಾಗೂ ನಾಥನ್ ಎಲ್ಲಿಸ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿಗೆ ಪ್ರಮುಖ ಕಾರಣ ಬ್ಯಾಟಿಂಗ್ ವಿಭಾಗದ ವೈಫಲ್ಯ. ನಾಯಕ ಜೋಸ್ ಇಂಗ್ಲಿಸ್ 65 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರನೂ ಸಹ ಒಳ್ಳೆಯ ಆಟವನ್ನಾಡಲಿಲ್ಲ. ಒಂದೆಡೆ ತಂಡದ ಟಾಪ್ ಆರ್ಡರ್ ವಿಕೆಟ್ ಬಿದ್ದರೆ ಮತ್ತೊಂದೆಡೆ ನಾಯಕ ಇಂಗ್ಲಿಸ್ ಒಳ್ಳೆಯ ಆಟವನ್ನಾಡಿದರು. ಇಂಗ್ಲಿಸ್ ಔಟ್ ಆಗುತ್ತಿದ್ದಂತೆ ತಂಡದ ಉಳಿದ ಆಟಗಾರರು ವೇಗವಾಗಿ ಒಬ್ಬರಾದ ಮೇಲೆ ಒಬ್ಬರು ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು.
119ರನ್‌ವರೆಗೂ ಕೇವಲ 3 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ನಾಯಕ ಇಂಗ್ಲಿಸ್ ವಿಕೆಟ್ ಕಳೆದುಕೊಂಡಿತು. ನಂತರ ಕೇವಲ 157 ರನ್‌ಗೆ ಆಲ್‌ಔಟ್ ಆದ ಆಸ್ಟ್ರೇಲಿಯಾ ಕೊನೆಯ ಏಳು ವಿಕೆಟ್‌ಗಳನ್ನು ಕೇವಲ 38 ರನ್‌ಗಳಿಗೆ ಕಳೆದುಕೊಂಡಿತು. ಹೀಗೆ ಕೆಟ್ಟ ಬ್ಯಾಟಿಂಗ್‌ನಿಂದ ಕಾಂಗರೂಗಳು ಹೀನಾಯ ಸೋಲನ್ನು ಕಂಡರು.

