HomeLive Newsಇಂದಿನಿಂದ ಶುರುವಾಗಲಿದೆ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಟಿ ಟ್ವೆಂಟಿ ಸರಣಿ

ಇಂದಿನಿಂದ ಶುರುವಾಗಲಿದೆ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಟಿ ಟ್ವೆಂಟಿ ಸರಣಿ

ನವೆಂಬರ್ ತಿಂಗಳಲ್ಲಿ ಕ್ರಿಕೆಟ್ ಹಬ್ಬ ಜೋರಾಗಿದ್ದು, ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿವೆ. ಇತ್ತೀಚಿಗಷ್ಟೇ  ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ನಡೆದ ಮೂರು ಏಕದಿನ ಪಂದ್ಯಗಳಲ್ಲಿ  ಪಾಕಿಸ್ತಾನ ತಂಡ 2-0 ಇಂದ  ಸರಣಿ ತನ್ನದಾಗಿಸಿಕೊಂಡಿದ್ದು, ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ತನ್ನ ಓಂ  ಗ್ರೌಂಡಿನಲ್ಲೇ  ಮುಖಭಂಗವಾಗಿದೆ.

ಇಂದಿನಿಂದ  ನವೆಂಬರ್ 18ರವರೆಗೆ ಮೂರು ಟಿ ಟ್ವೆಂಟಿ ಪಂದ್ಯಗಳು ನಡೆಯಲಿದ್ದು, ಆಸ್ಟ್ರೇಲಿಯಾ ತಂಡ ಸೇಡನ್ನು ತೀರಿಸಿಕೊಳ್ಳುವ  ಲೆಕ್ಕಾಚಾರದಲ್ಲಿದೆ.  ಟಿ ಟ್ವೆಂಟಿ ಸರಣಿಗೆ  ಆಸ್ಟ್ರೇಲಿಯಾ  ಕ್ರಿಕೆಟ್ ಬೋರ್ಡ್ ಯುವ ಆಟಗಾರರಿಗೆ ಅವಕಾಶ ನೀಡಿದ್ದು, ಸ್ಪೋಟಕ ಬ್ಯಾಟ್ಸ್ಮನ್ ಟೀಮ್ ಡೇವಿಡ್ ಕಣಕ್ಕಿಳಿಯಲಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular